ಬ್ರೇಕಿಂಗ್ ನ್ಯೂಸ್
21-08-25 02:03 pm HK News Desk ಕರ್ನಾಟಕ
ಮಂಡ್ಯ, ಆ 21 : ಚನ್ನಪಟ್ಟಣ ತಾಲೂಕಿನ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಆರೋಪಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಮೃತನ ಕುಟುಂಬಸ್ಥರು ಪೊಲೀಸರೇ ಹೊಡೆದು ಸಾಯಿಸಿದ್ದಾರೆಂದು ಆರೋಪಿಸಿದ್ದಾರೆ. ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಂಡ್ಯ ಬೊಮ್ಮನಾಯಕನಹಳ್ಳಿ ಗ್ರಾಮದ ಹೊನ್ನಾರತಿ ದೇವಸ್ಥಾನದಲ್ಲಿ ಕಳ್ಳತನ ಹಿನ್ನೆಲೆ ರಮೇಶ ಹಾಗೂ ಆತನ ಪುತ್ರ ಮಂಜುನನ್ನು ಬಂಧಿಸಲಾಗಿತ್ತು. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 2 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಆರೋಪಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ಧಾರೆ. ಆದರೆ, ಪೊಲೀಸರು ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗುವವರೆಗೂ ಶವ ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪ್ರಕರಣ ಸಿಐಡಿಗೆ ವಹಿಸಲಾಗಿದೆ ಎಂದ ಎಸ್ಪಿ:
ಮೃತದೇಹವನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿ, "ಕಳ್ಳತನ ಪ್ರಕರಣದಲ್ಲಿ 18ರಂದು ಮೃತ ಆರೋಪಿಯನ್ನು ಎಂ.ಕೆ. ದೊಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. 20ರ ಮುಂಜಾನೆ ಆರೋಪಿಯು ಲಾಕಪ್ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ತನಿಖೆ ಮುಗಿದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ನನಗೆ ಒದೆ ತಡೆಯೋಕೆ ಆಗ್ತಾ ಇಲ್ಲ!:
ಮೃತನ ಪುತ್ರಿ ಮಾತನಾಡಿ, "ನಿಮ್ಮ ತಂದೆಯನ್ನು ಬಂಧಿಸಿದ್ದೇವೆ. ನೀವು ಠಾಣೆಗೆ ಬರಬೇಕು ಇಲ್ಲದಿದ್ದರೆ ನಿಮ್ಮ ತಂದೆಯನ್ನು ಕರೆ ತಂದಂತೆ ನಿಮ್ಮನ್ನು ಕರೆದುಕೊಂಡು ಬರುತ್ತೇವೆ. ನಿಮ್ಮ ತಂದೆ ಕೊಟ್ಟಿರುವ ಒಡವೆ ಎಲ್ಲ ತೆಗೆದುಕೊಂಡು ಬರಬೇಕು ಎಂದು ಬೆದರಿಸಿದ್ದರು. ಹೀಗಾಗಿ ನಾನು ನನ್ನ ಕತ್ತಿನಲ್ಲಿ ಇದ್ದ ತಾಳಿ, ಕಾಸು, ಕಿವಿಯಲ್ಲಿ ಒಂದು ಜೊತೆ ಓಲೆ ಹಾಗೂ ಸಿಲಿಂಡರ್ನ್ನು ತೆಗೆದುಕೊಂಡು ಹೋಗಿದ್ದೆವು. ಪೊಲೀಸರು 'ಇನ್ನು ಏನಾದರೂ ಕೊಟ್ಟಿದ್ದಾರಾ ನಿಮ್ಮಪ್ಪ?. ಅದನ್ನು ತೆಗೆದುಕೊಂಡು ಬನ್ನಿ' ಎಂದಿದ್ದರು. ಇವೆಲ್ಲ ನಮ್ಮ ಸ್ವಂತದ್ದೇ ಎಂದು ನಾನು ಹೇಳಿದೆ. ಯಾವುದೇ ನಮ್ಮಪ್ಪ ತಂದು ಕೊಟ್ಟಿಲ್ಲ ಅಂತಾನೂ ಹೇಳಿದೆ. ನಾನು ಕೊಟ್ಟ ವಸ್ತುಗಳನ್ನು ಠಾಣೆಯಲ್ಲಿ ಇಟ್ಟುಕೊಂಡರು".
"ನಂತರ ಊರಿಗೆ ಹೋಗುವಷ್ಟರಲ್ಲಿ ಸಮಯ ಆಗಿತ್ತು. ಹಾಗಾಗಿ ನಾನು ಇಲ್ಲೇ ಸ್ನೇಹಿತೆ ಮನೆಯಲ್ಲಿ ಉಳಿದುಕೊಂಡೆ. ನಮ್ಮಪ್ಪ ಮಾತನಾಡಿ 'ಇಲ್ಲಿ ನನಗೆ ಒದೆ ತಡೆಯೋಕೆ ಆಗ್ತಾ ಇಲ್ಲ ಬೇಗ ಬಂದು ಕರೆದುಕೊಂಡು ಹೋಗಮ್ಮ' ಎಂದರು. ನಮ್ಮ ಅಣ್ಣನಿಗೂ ಸಹ ಹೊಡೆದಿದ್ದು, ಪೊಲೀಸ್ ಅವರು ಚಿತ್ರಹಿಂಸೆ ಕೊಟ್ಟಿದ್ದಾರೆ" ಎಂದು ಆರೋಪಿಸಿದ್ದಾರೆ.
A theft accused allegedly died by suicide inside the toilet of the M.K. Doddi Police Station in Channapatna taluk, Mandya district. However, the deceased’s family has accused the police of custodial torture leading to his death, triggering widespread outrage and emotional scenes outside the Channapatna Government Hospital.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am