ಬ್ರೇಕಿಂಗ್ ನ್ಯೂಸ್
26-02-26 12:58 pm HK News Staffer ಕರ್ನಾಟಕ
ಬೆಂಗಳೂರು, ಫೆ. 26: ಬಡ ಕುಟುಂಬದ ಆಟೋ ಚಾಲಕರೊಬ್ಬರ ಮಗಳು ನ್ಯಾಯಾಧೀಶರ ಪರೀಕ್ಷೆ ಬರೆದು ತೇರ್ಗಡೆಯಾಗಿ ಇಡೀ ರಾಜ್ಯದ ಗಮನ ಸೆಳೆದಿದ್ದಾಳೆ. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ತಿರುಪಾಳ್ಯ ಎಂಬ ಪುಟ್ಟ ಹಳ್ಳಿಯ ಹೆಣ್ಣುಮಗಳು ನಾಗಿಣಿ ಎಲ್. ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.
ಆಟೋ ಚಾಲಕನ ಮಗಳಾಗಿ ಬೆಳೆದು, ತಾಯಿ ಜೊತೆಗೆ ಹೂವು ಮಾರುತ್ತಲೇ ಬೆಳೆದ ನಾಗಿಣಿ ಎಂಬ ಹೆಣ್ಮಗಳು ಇಂದು ನ್ಯಾಯ ತೀರ್ಮಾನದ ಸೀಟಿನಲ್ಲಿ ಕುಳಿತುಕೊಳ್ಳಲು ಸಜ್ಜಾಗಿರುವುದು ಕೇವಲ ಒಂದು ಕುಟುಂಬದ ಯಶಸ್ಸಲ್ಲ, ಬದಲಿಗೆ ಹೋರಾಟದ ಹಾದಿಯಲ್ಲಿರುವ ಕೋಟ್ಯಂತರ ಯುವಜನತೆಗೆ ಸ್ಫೂರ್ತಿ.
ನಾಗಿಣಿ ಅವರ ತಂದೆ ಲಕ್ಷ್ಮಣ್ ದಿನವಿಡೀ ಆಟೋ ಚಾಲನೆ ಮಾಡಿ ಸಂಸಾರ ನಡೆಸುತ್ತಿದ್ದರೆ, ತಾಯಿ ಮಂಜುಳಾ ಮಾರುಕಟ್ಟೆಯಲ್ಲಿ ಮನೆಗೆಲಸ ಮುಗಿಸಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಮನೆಯಲ್ಲಿ ಬಡತನ ಇದ್ದರೂ, ಮಗಳ ವಿದ್ಯಾಭ್ಯಾಸಕ್ಕೆ ಪೋಷಕರು ಅಡ್ಡಿ ಬರಲಿಲ್ಲ. ನಾಗಿಣಿ ಕೂಡ ಬಾಲ್ಯದಿಂದಲೇ ತಾಯಿಗೆ ಹೂವಿನ ವ್ಯಾಪಾರದಲ್ಲಿ ನೆರವಾಗುತ್ತಿದ್ದರು. ಇದರ ಜೊತೆಗೇ ಓದನ್ನೂ ಮಾಡಿಕೊಂಡಿದ್ದಳು.
10ನೇ ತರಗತಿಯ ವರೆಗೆ ಸರ್ಕಾರಿ ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ನಾಗಿಣಿ ತಂದೆ, ತಾಯಿಯ ಪರಿಶ್ರಮಕ್ಕೆ ತಕ್ಕ ಸಾಧನೆ ಮಾಡಿದ್ದಾಳೆ. ಚಿಕ್ಕಂದಿನಿಂದಲೂ ಓದಿನಲ್ಲಿ ಸದಾ ಮುಂದಿದ್ದ ನಾಗಿಣಿ , ಬೆಳಗ್ಗೆ ಅಮ್ಮ ಕಟ್ಟಿ ಕೊಟ್ಟ ಹೂವನ್ನು ಮಾರಾಟ ಮಾಡಿಯೇ ಶಾಲೆಗೆ ಹೋಗುತ್ತಿದ್ದಳು. ವಕೀಲೆಯಾಗಿ ವೃತ್ತಿ ಆರಂಭಿಸಿದ ಬಳಿಕವು ಹಗಲಿರುಳು ಓದಿಗೆ ಶ್ರಮ ಪಡುತ್ತಿದ್ದರು. ನ್ಯಾಯಾಧೀಶರ ಪರೀಕ್ಷೆ ಬರೆದು ತೇರ್ಗಡೆ ಆಗಿದ್ದಾರೆ. ಮಗಳು ಶ್ರಮಪಟ್ಟಿದ್ದಕ್ಕೆ ಈಗ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಖುಷಿಯಾಗಿದೆ ಎಂದು ತಾಯಿ ಮಂಜುಳಾ ಸಂತಸ ಹಂಚಿಕೊಂಡಿದ್ದಾರೆ.
ನಮ್ಮ ಕಷ್ಟ ಅರಿತಿದ್ದ ಮಗಳು ಸಹ ಹಗಲಿರುಳು ಕಷ್ಟಪಟ್ಟು ಓದುತ್ತಿದ್ದಳು. ಇಂದು ಇಡೀ ಊರಿನ ಜನ ಹೆಮ್ಮೆಪಡುವಂತೆ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾಳೆ. ಮಗಳ ಸಾಧನೆ ನನಗೆ ಖುಷಿ ತಂದಿದೆ. ನ್ಯಾಯಾಧೀಶೆಯಾಗಿ ನೊಂದವರಿಗೆ ದನಿಯಾಗಲಿ ಎಂದು ತಂದೆ ಲಕ್ಷ್ಮಣ್ ಶುಭ ಹಾರೈಸಿದ್ದಾರೆ.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 11:45 am
HK News Staffer
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm