ಬ್ರೇಕಿಂಗ್ ನ್ಯೂಸ್
02-04-26 08:03 pm HK News Staffer ಕರ್ನಾಟಕ
ಚೆನ್ನೈ, ಎಪ್ರಿಲ್ 2: ತಮಿಳುನಾಡು ಅಸೆಂಬ್ಲಿ ಚುನಾವಣೆಗೆ 44 ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿರುವ ನಾಮಪತ್ರಗಳಲ್ಲಿ ಹೆಚ್ಚಿನವು ಕ್ರಿಸ್ತಿಯನ್ ಮತಾಂತರಗೊಂಡವದ್ದಾಗಿದ್ದು ಈ ಬಗ್ಗೆ ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಪರಿಶಿಷ್ಟ ಜಾತಿ ಸ್ಥಾನಮಾನ ಮತ್ತು ಧರ್ಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚಿಗೆ, ಹಿಂದು, ಬೌದ್ಧ, ಸಿಖ್ ಹೊರತುಪಡಿಸಿ ಬೇರಾವುದೇ ಧರ್ಮ ಅನುಸರಿಸುವವರಿಗೆ ಪರಿಶಿಷ್ಟ ಜಾತಿ ಮೀಸಲಾತಿ ನೀಡಬಾರದೆಂಬ ತೀರ್ಪನ್ನು ಆಧರಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ. ಹಿಂದು ಮಕ್ಕಳ್ ಕಚ್ಚಿ ಪಕ್ಷದ ಅರ್ಜುನ್ ಸಂಪತ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
1950ರ ಸಂವಿಧಾನದ (ಪರಿಶಿಷ್ಟ ಜಾತಿಗಳು) 3ನೇ ಕಲಮ್ ಪ್ರಕಾರ, ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಅನುಸರಿಸುವವರು ಮಾತ್ರ ಪರಿಶಿಷ್ಟ ಜಾತಿಗೆ ಸೇರುತ್ತಾರೆ. ಇತರ ಧರ್ಮಗಳಿಗೆ ಮತಾಂತರಗೊಂಡವರು ಈ ಸ್ಥಾನಮಾನಕ್ಕೆ ಅರ್ಹರಲ್ಲ. ಸಂವಿಧಾನದ ಇದೇ ಆಶಯವನ್ನು 2026 ಮಾರ್ಚ್ 26ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿತ್ತು. "ಪರಿಶಿಷ್ಟ ಜಾತಿಯ ಸ್ಥಾನಮಾನವು ಕೇವಲ ಹಿಂದು, ಸಿಖ್ ಮತ್ತು ಬೌದ್ಧ ಧರ್ಮದವರಿಗೆ ಮಾತ್ರ ಸೀಮಿತವಾಗಿದೆ. ವೈಯಕ್ತಿಕ ಅಥವಾ ಸಾಮಾಜಿಕ ಕಾರಣಗಳಿಗಾಗಿ ಬೇರೆ ಧರ್ಮಕ್ಕೆ ಮತಾಂತರಗೊಂಡವರು ಈ ಸಾಂವಿಧಾನಿಕ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಜಾತಿ ಮತ್ತು ಧರ್ಮದ ಅರ್ಹತೆಯನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಎಲ್ಲ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಬೇಕಾಗಿದೆ. ಮಾಹಿತಿ ಪ್ರಕಾರ, 44 ಮೀಸಲು ಕ್ಷೇತ್ರಗಳಲ್ಲಿ 90 ಶೇಕಡಾ ಮಂದಿ ಕ್ರಿಸ್ತಿಯನ್ ಮತಾಂತರ ಆದವರು ನಾಮಪತ್ರ ಸಲ್ಲಿಸಿದ್ದಾರೆ. ಕಾನೂನು ಪ್ರಕಾರ, ಮೀಸಲು ಕ್ಷೇತ್ರದಲ್ಲಿ ಈ ರೀತಿಯ ಕಾನೂನು ಉಲ್ಲಂಘನೆಯನ್ನು ಮಾನ್ಯ ಮಾಡುವುದು ತಪ್ಪಾಗುತ್ತದೆ ಎಂದು ಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಅರ್ಜುನ್ ಸಂಪತ್ ಒತ್ತಾಯಿಸಿದ್ದಾರೆ. ಚುನಾವಣೆ ಸಮಯದಲ್ಲೇ ಇಂತಹ ಬೇಡಿಕೆ ಎತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm