ಬ್ರೇಕಿಂಗ್ ನ್ಯೂಸ್
23-04-26 07:06 pm Giridhar Shetty, Mangaluru ಕರ್ನಾಟಕ
ಮಂಗಳೂರು, ಎಪ್ರಿಲ್ 23: ಎಸ್ಸೆಸ್ಸೆಲ್ಸಿ ಬಳಿಕ ಮುಂದೇನು ಅನ್ನುವುದು ಹೆಚ್ಚಿನ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಎದುರಾಗುವ ಪ್ರಶ್ನೆ. ಒಂದಷ್ಟು ಮಂದಿ ಟೆಕ್ನಿಕಲ್ ತರಬೇತಿ, ಇನ್ನಿತರ ಕೋರ್ಸುಗಳನ್ನು ಆಯ್ಕೆ ಮಾಡಿದರೆ ಬಹುತೇಕ ಮಂದಿಯದ್ದು ಪಿಯುಸಿಯೇ ಆಯ್ಕೆಯಾಗಿರುತ್ತದೆ. ಓದಿನಲ್ಲಿ ಮುಂದಿರುವ ವಿದ್ಯಾರ್ಥಿಗಳಂತೂ ಸೈನ್ಸನ್ನೇ ಆಯ್ದುಕೊಳ್ಳುತ್ತಿದ್ದಾರೆ. ಆದರೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಪಿಯುಸಿ ಸೈನ್ಸ್ ಅನ್ನುವುದನ್ನೇ ದೊಡ್ಡ ಬಂಡವಾಳ ಮಾಡಿಕೊಂಡು ಹಣ ಮಾಡುವ ದಂಧೆ ಶುರುವಾಗಿದೆ.
ಕಳೆದ ಐದಾರು ವರ್ಷಗಳಲ್ಲಿ ಮಂಗಳೂರು, ಮೂಡುಬಿದ್ರೆ, ಬೆಳ್ತಂಗಡಿ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಪಿಯುಸಿ ಸೈನ್ಸ್ ಉದ್ದೇಶಕ್ಕಾಗಿ ಶಿಕ್ಷಣ ಕೇಂದ್ರಗಳು ಹುಟ್ಟಿಕೊಂಡಿವೆ. ಎಲ್ಲವೂ ಪಿಯುಸಿ ಸೈನ್ಸ್ ಮತ್ತು ರ್ಯಾಂಕ್ ದೊರಕಿಸುವ ಕೇಂದ್ರಗಳಾಗಿ ಮಾಧ್ಯಮಗಳಲ್ಲಿ ಆಕರ್ಷಣೆ ಗಿಟ್ಟಿಸಿಕೊಳ್ಳುತ್ತಿವೆ. ಹೀಗಾಗಿ ಇಡೀ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳ ಕಣ್ಣು ದಕ್ಷಿಣ ಕನ್ನಡ ಜಿಲ್ಲೆಯತ್ತ ನೆಟ್ಟಿದ್ದು, ಅಲ್ಲಿ ಓದಿದರೆ ರ್ಯಾಂಕ್ ಬರುತ್ತದೆ, ಜೆಇಇ, ನೀಟ್ ಪರೀಕ್ಷೆಯಲ್ಲಿ ಟಾಪ್ 10 ಬರುತ್ತದೆ ಎಂಬ ಭಾವನೆ ಬಂದಿದೆ. ಆದರೆ ಇದನ್ನೇ ಈ ಸಂಸ್ಥೆಗಳು ಬಂಡವಾಳ ಮಾಡಿಕೊಂಡಿದ್ದು, ಜನಸಾಮಾನ್ಯರನ್ನು ಸುಲಿಗೆ ಮಾಡಲು ಇಳಿದಿವೆ.



ವಿಚಿತ್ರ ಎಂದರೆ, ಈ ಸಲ ಮಂಗಳೂರಿನ ಇಂತಹ ಪಿಯುಸಿ ಸೈನ್ಸ್ ಆಧರಿತ ಶಿಕ್ಷಣ ಸಂಸ್ಥೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶ ಬರುವ ಮೊದಲೇ ತಮ್ಮಲ್ಲಿ ಸೀಟ್ ಭರ್ತಿ ಮಾಡಿಕೊಂಡಿದ್ದವು. ರಿಸಲ್ಟ್ ನೋಡಿ ಬರುವ ಮಕ್ಕಳಿಗೆ ಅಲ್ಲಿ ಸೀಟೇ ಇರುವುದಿಲ್ಲ. ಯಾಕಂದ್ರೆ, ಇಂಥ ಮುಂಚೂಣಿ ಶಿಕ್ಷಣ ಸಂಸ್ಥೆಗಳಿಗೆ ಸೇರುವುದಕ್ಕಾಗಿ ವಿದ್ಯಾರ್ಥಿಗಳ ಪೋಷಕರು ಡಿಸೆಂಬರ್ ತಿಂಗಳಿನಿಂದಲೇ ಎಡತಾಕುತ್ತಾರೆ. ಅರ್ಜಿ ಗುಜರಾಯಿಸಿ ಎಷ್ಟು ಫೀಸ್ ಆದರೂ ನಮಗೆ ಸೀಟು ಬೇಕು ಎಂದು ಹೇಳಿ ಬೇಡಿಕೆ ಕುದುರಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಸೀಟ್ ಫುಲ್ ಆಗಿದೆಯೆಂದು ಹೇಳಿ ಈ ಸಂಸ್ಥೆಗಳು ಮ್ಯಾನೇಜ್ಮೆಂಟ್ ಕೋಟಾದ ಹೊಸ ವರಸೆ ಶುರು ಮಾಡುತ್ತಾರೆ.
ಈ ಬಾರಿಯೂ ಎಷ್ಟೋ ಪಾಲಕರು ಬೆಂಗಳೂರು, ಹುಬ್ಬಳ್ಳಿಯಿಂದ ಮಂಗಳೂರಿಗೆ ಬಂದಿದ್ದು, ಇಂಥ ಸೈನ್ಸ್ ಸಬ್ಜೆಕ್ಟ್ ಗಳಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಿಗೆ ಸೇರಲು ದುಂಬಾಲು ಬಿದ್ದಿದ್ದಾರೆ. ಆದರೆ ಈ ಎಲ್ಲ ಸಂಸ್ಥೆಗಳೂ ಎಸ್ಸೆಸ್ಸೆಲ್ಸಿ ಫಲಿತಾಂಶ ಬರುವುದಕ್ಕೆ ಮೊದಲೇ ತಮ್ಮಲ್ಲಿ ಸೀಟ್ ಫುಲ್ ಆಗಿದೆಯೆಂದು ಹೇಳಿ ಕೃತಕ ಒತ್ತಡ ಸೃಷ್ಟಿಸಿದ್ದಾರೆ. 90 ಪರ್ಸೆಂಟ್ ಮೇಲಿದ್ದವರಿಗೆ ಮಾತ್ರ ತಮ್ಮಲ್ಲಿ ಸೀಟು, ಅದಕ್ಕಿಂತ ಕೆಳಗಿದ್ದವರಿಗೆ ಸೀಟೇ ಇಲ್ಲ ಎನ್ನುವ ಹೊಸ ವರಸೆ ಬೇರೆ. ಆನಂತರ, ಮ್ಯಾನೇಜ್ಮೆಂಟ್ ಕೋಟದಲ್ಲಿ 70-80 ಪರ್ಸೆಂಟ್ ಇದ್ದರೂ ಆಗುತ್ತದೆ. ಯಾಕಂದ್ರೆ, ಆ ಸೀಟಿಗೆ ವರ್ಷಕ್ಕೆ 10ರಿಂದ 15 ಲಕ್ಷ ಡಿಮ್ಯಾಂಡ್ ಮಾಡುತ್ತಾರೆ.
ಸಾಮಾನ್ಯವಾಗಿ 90 ಶೇ. ಮೇಲಿದ್ದವರಿಗೂ ಹಾಸ್ಟೆಲ್ ಶುಲ್ಕ ಸೇರಿ 5 ಲಕ್ಷ ಮೇಲಿರುತ್ತದೆ. ಇದಲ್ಲದೆ, ಜೆಇಇ, ನೀಟ್ ಕೋಚಿಂಗ್ ಹೆಚ್ಚುವರಿಯೆಂದು ಪ್ರತ್ಯೇಕ ಶುಲ್ಕ ಇರುತ್ತದೆ. ಕಡಿಮೆ ಅಂಕ ಇದ್ದವರು ಅವರು ಹೇಳಿದಷ್ಟು ಮೊತ್ತವನ್ನು ಕೊಟ್ಟು ಅಡ್ಮಿಶನ್ ಮಾಡಿಕೊಳ್ಳಬೇಕು. ಇದೊಂದು ರೀತಿಯಲ್ಲಿ ಹಣ ಮಾಡುವ ದಂಧೆಯಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸಿ ಅವರನ್ನೇ ಮಾರ್ಕೆಟ್ ಮಾಡಿಕೊಂಡು ತಮ್ಮ ಸಂಸ್ಥೆಗಳ ಹೆಸರಲ್ಲಿ ಹಣ ಮಾಡುತ್ತಿದ್ದಾರೆ. ಯಾರೋ ಪ್ರತಿಭಾವಂತ ಫಸ್ಟ್ ಬಂದರೆ, ಆತನ ಫೋಟೋವನ್ನು ಪತ್ರಿಕೆಯಲ್ಲಿ ತೋರಿಸಿ ತಮ್ಮ ಸಂಸ್ಥೆಯ ಹೆಸರನ್ನು ಮಾರ್ಕೆಟ್ ಮಾಡುವುದು ಕಾನೂನು ಪ್ರಕಾರ ಅಪರಾಧ. ಆದರೆ ಮಂಗಳೂರಿನಲ್ಲಿ ಸೈನ್ಸ್ ಹೆಸರಲ್ಲಿ ದಂಧೆಗಿಳಿದ ಖಾಸಗಿ ಸಂಸ್ಥೆಗಳೆಲ್ಲ ಇದನ್ನೇ ಬಂಡವಾಳ ಮಾಡಿಕೊಂಡಿದ್ದು ಗುಮ್ಮನ ತೋರಿಸಿ ಬೇಕಾಬಿಟ್ಟಿಯಾಗಿ ಸುಲಿಗೆ ಮಾಡುತ್ತಿವೆ.
ಮೂಡುಬಿದ್ರೆ, ಬೆಳ್ತಂಗಡಿ, ಕಾರ್ಕಳದಂತಹ ಗ್ರಾಮೀಣ ಪ್ರದೇಶಗಳಲ್ಲೂ ಸೈನ್ಸ್ ಗುಮ್ಮನ ಮುಂದಿಟ್ಟು ನಾಯಿ ಕೊಡೆಗಳಂತೆ ಪಿಯುಸಿ ಶಿಕ್ಷಣ ಕೇಂದ್ರಗಳು ತಲೆಯೆತ್ತಿವೆ ಎಂದರೆ ಪ್ರಜ್ಞಾವಂತ ಜನರು ಯೋಚಿಸಬೇಕಾಗಿದೆ. ಶಿಕ್ಷಣ ವ್ಯಾಪಾರದ ಸರಕಲ್ಲ, ವಿದ್ಯಾರ್ಥಿಗಳಿಂದ ಇಂತಿಷ್ಟೇ ಶುಲ್ಕ ಪಡೆಯಬೇಕೆಂದು ಸರಕಾರದ ಮಾರ್ಗಸೂಚಿ ಇರುತ್ತದೆ. ಆದರೆ ನಮ್ಮ ನಡುವಿರುವ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಮಾರ್ಗಸೂಚಿಯನ್ನು ಅನುಸರಿಸುತ್ತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಮೌನವಾಗಿದ್ದು, ಪಿಯುಸಿ ಸೈನ್ಸ್ ಎಂಬ ಗುಮ್ಮದ ಹಿಂದೋಡಿರುವ ಪ್ರತಿಭಾವಂತರು ಮತ್ತು ಅದನ್ನು ಮುಂದಿಟ್ಟು ಹಣ ಮಾಡುವ ವ್ಯಾಪಾರಿಗಳನ್ನು ಕಣ್ಣು ಬಿಟ್ಕೊಂಡು ನೋಡುತ್ತಿದ್ದಾರೆ. (ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಂತಿಷ್ಟೇ ಶುಲ್ಕ ಪಡೆಯಬೇಕು, ಹೆಚ್ಚು ಹಣ ಕೇಳಿದರೆ ದೂರು ನೀಡಬಹುದೆಂಬ ಸರ್ಕಾರದ ಸುತ್ತೋಲೆಯನ್ನು ಕೊಡಲಾಗಿದೆ ಗಮನಿಸಿ)
As students complete SSLC, the big question for most families is what comes next. While some opt for technical courses or vocational training, a large majority choose Pre-University (PUC), with science being the most sought-after stream among high-performing students. However, in Dakshina Kannada district—especially in and around Mangaluru—the growing demand for PUC Science has turned into a lucrative business model for several private institutions.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm