Alwyn Joel Noronha, Mangalore: ಉದ್ಯಮಿ ಆಲ್ವಿನ್ ಜೋಯಲ್ ನೊರೊನ್ಹಾಗೆ ಅಂತರಾಷ್ಟ್ರೀಯ ಗೌರವ ; ರಷ್ಯಾ ವಿವಿಯಿಂದ ಗೌರವ ಡಾಕ್ಟರೇಟ್, ಅಮೆರಿಕನ್ ವಿವಿಯಿಂದ ಗೌರವ ಪ್ರಾಧ್ಯಾಪಕ

24-11-26 09:44 pm       HK News Staffer   ದೇಶ - ವಿದೇಶ

ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮ, ವ್ಯವಹಾರ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಮಂಗಳೂರಿನ ಉದ್ಯಮಿ ಅಲ್ವಿನ್ ಜೋಯಲ್ ನೊರೊನ್ಹಾ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಎರಡು ಮಹತ್ವದ ಶೈಕ್ಷಣಿಕ ಗೌರವ ಲಭಿಸಿದೆ. ರಷ್ಯಾದ ಮಾಸ್ಕೋ ಮೂಲದ ಯುರೇಷಿಯನ್ ಮ್ಯಾನೇಜ್‌ಮೆಂಟ್ ಆಂಡ್ ಅಡ್ಮಿನಿಸ್ಟ್ರೇಷನ್ ಸ್ಕೂಲ್ (EMAS Business School) ವತಿಯಿಂದ ವ್ಯವಹಾರ ಆಡಳಿತ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದ್ದು, ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಆರೆಂಜ್ ಕೌಂಟಿ ಯುನಿವರ್ಸಿಟಿ (Orange County University) ಉದ್ಯಮಶೀಲತೆ ಮತ್ತು ಕಾರ್ಯತಂತ್ರದ ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿ ಗೌರವ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ಮಾಡಿದೆ.

ಮಂಗಳೂರು, ನವೆಂಬರ್ 23: ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮ, ವ್ಯವಹಾರ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಮಂಗಳೂರಿನ ಉದ್ಯಮಿ ಅಲ್ವಿನ್ ಜೋಯಲ್ ನೊರೊನ್ಹಾ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಎರಡು ಮಹತ್ವದ ಶೈಕ್ಷಣಿಕ ಗೌರವ ಲಭಿಸಿದೆ. ರಷ್ಯಾದ ಮಾಸ್ಕೋ ಮೂಲದ ಯುರೇಷಿಯನ್ ಮ್ಯಾನೇಜ್‌ಮೆಂಟ್ ಆಂಡ್ ಅಡ್ಮಿನಿಸ್ಟ್ರೇಷನ್ ಸ್ಕೂಲ್ (EMAS Business School) ವತಿಯಿಂದ ವ್ಯವಹಾರ ಆಡಳಿತ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದ್ದು, ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಆರೆಂಜ್ ಕೌಂಟಿ ಯುನಿವರ್ಸಿಟಿ (Orange County University) ಉದ್ಯಮಶೀಲತೆ ಮತ್ತು ಕಾರ್ಯತಂತ್ರದ ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿ ಗೌರವ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ಮಾಡಿದೆ.

ಅಲ್ವಿನ್ ಜೋಯೆಲ್ ನೊರೊನ್ಹಾ ಅವರು ಉದ್ಯಮ ಸ್ಥಾಪನೆ, ವ್ಯವಹಾರ ನಿರ್ವಹಣೆ, ಹಣಕಾಸು ಸೇವೆಗಳು, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ತಂತ್ರಜ್ಞಾನ ಹಾಗೂ ಸಂಸ್ಥೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಉದ್ಯಮಶೀಲತೆಯ ಪಯಣವನ್ನು ಮುಂದುವರಿಸಿದ್ದಾರೆ.

ವಿವಿಧ ಉದ್ಯಮ ಸಂಸ್ಥೆಗಳ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಹೊಸ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದು, ವ್ಯವಹಾರ ನಿರ್ವಹಣೆಯಲ್ಲಿ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ಸಂಸ್ಥೆಗಳ ಬೆಳವಣಿಗೆಗೆ ಕಾರ್ಯತಂತ್ರ ರೂಪಿಸುವುದು ಇವರ ಉದ್ಯಮ ಚಟುವಟಿಕೆಗಳ ಪ್ರಮುಖ ಭಾಗಗಳಾಗಿವೆ.

ಈ ಹಿನ್ನೆಲೆಯಲ್ಲಿ ನವೆಂಬರ್ 29, 2026ರಂದು ನವದೆಹಲಿಯಲ್ಲಿ ನಡೆಯಲಿರುವ 2026ನೇ ಸಾಲಿನ EMAS Business School ಘಟಿಕೋತ್ಸವ ಸಮಾರಂಭದಲ್ಲಿ ಅಲ್ವಿನ್ ಜೋಯಲ್ ನೊರೊನ್ಹಾ ಭಾಗವಹಿಸಲಿದ್ದು ಗೌರವ ಡಾಕ್ಟರೇಟ್ ಪದವಿಯನ್ನು ಪಡೆಯಲಿದ್ದಾರೆ. ಇದೇ ವೇಳೆ, ಅಮೆರಿಕದ Orange County University ವತಿಯಿಂದ ಅಲ್ವಿನ್ ಜೋಯಲ್ ನೊರೊನ್ಹಾ ಅವರನ್ನು ಗೌರವ ಪ್ರಾಧ್ಯಾಪಕ (Honorary Professor in Entrepreneurship and Strategic Business Management) ಎಂಬ ಗೌರವ ಹುದ್ದೆಗೆ ಆಯ್ಕೆ ಮಾಡಲಾಗಿದೆ.

Alwyn Joel Noronha, a prominent entrepreneur from Mangaluru who has made a significant mark in the business, trade and commercial sectors of Dakshina Kannada district, has been selected for two prestigious international academic honours. The Moscow-based Eurasian Management and Administration School (EMAS Business School), Russia, has selected him for an Honorary Doctorate in recognition of his achievements and contributions to the field of Business Administration.