ಡಿಜೆ ಹಳ್ಳಿ ಗಲಭೆ: ದಾಳಿಯ ಹಿಂದೆ ಕಾಂಗ್ರೆಸ್​ ನಾಯಕರದ್ದೇ ಕೈವಾಡ ; ಅಖಂಡ‌ ಶ್ರೀನಿವಾಸ್ ಗಂಭೀರ ಆರೋಪ!

20-08-20 09:57 am       Bangalore Correspondent   ಕರ್ನಾಟಕ

ಡಿಜೆ ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್​ ನಾಯಕರದ್ದೇ ಕೈವಾಡವಿದೆ ಎಂದು ಶಾಸಕ ಅಖಂಡ ಶ್ರೀನಿವಾಸ್​ ಗಂಭೀರ ಆರೋಪ ಮಾಡುವ ಮೂಲಕ ಹೊಸ ಬಾಂಬ್​ ಹಾಕಿದ್ದಾರೆ.

ಬೆಂಗಳೂರು, ಆಗಸ್ಟ್​ 20: ಡಿಜೆ ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್​ ನಾಯಕರದ್ದೇ ಕೈವಾಡವಿದೆ ಎಂದು ಶಾಸಕ ಅಖಂಡ ಶ್ರೀನಿವಾಸ್​ ಗಂಭೀರ ಆರೋಪ ಮಾಡುವ ಮೂಲಕ ಹೊಸ ಬಾಂಬ್​ ಹಾಕಿದ್ದಾರೆ. ಮಾಜಿ‌ ಮೇಯರ್ ಸಂಪತ್ ರಾಜ್, ಕಾರ್ಪೋರೇಟರ್ ಝಾಕಿರ್ ಹಾಗೂ ಇರ್ಷಾದ್ ಬೇಗಂ ಈ ದಾಳಿಗೆ ಸಂಚು ರೂಪಿಸಿದ್ದರು ಎನ್ನುವ ಆರೋಪ ಮಾಡಿದ್ದಾರೆ. 

ಅಖಂಡ ಶ್ರೀನಿವಾಸ್ ನಿನ್ನೆ ಹೇಳಿಕೆ ನೀಡಲು ಸಿಸಿಬಿ ಕಚೇರಿಗೆ ತೆರಳಿದ್ದರು. ಈ ವೇಳೆ ಡಿಸಿಪಿ ರವಿಕುಮಾರ್ ಮುಂದೆ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. “ಸಂಪತ್ ರಾಜ್ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪುಲಿಕೇಶಿನಗರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಆದ್ರೆ ಕಾಂಗ್ರೆಸ್‌ ಪಕ್ಷದಿಂದ ಅಖಂಡ ಶ್ರೀನಿವಾಸ್​​ಗೆ ಟಿಕೇಟ್ ಸಿಕ್ಕಿತ್ತು,” ಎಂದು ಹಳೆಯ ಘಟನೆ ಬಗ್ಗೆ ಹೇಳಿದ್ದಾರೆ ಶ್ರೀನಿವಾಸ್​.

ಆಗಿಂದಲಲೂ ಇವರು ಅವಕಾಶಕ್ಕಾಗಿ ಕಾಯುತ್ತಿದ್ದರು. ಈಗ ನವೀನ್ ಪೋಸ್ಟ್​ಇಟ್ಟುಕೊಂಡು ಈಗ ಈ ರೀತಿ ಮಾಡಿದ್ದಾರೆ. ಘಟನೆಯ ಹಿಂದೆ ಮೂವರು ಕಾರ್ಪೋರೇಟರ್ ಗಳ ಕೈವಾಡ ಇರಬಹುದು. ನಮ್ಮ‌ ಪಕ್ಷದಲ್ಲಿ ಇದ್ದುಕೊಂಡೇ ಇವರೆಲ್ಲಾ ಹೀಗೆ ಮಾಡುತ್ತಾರೆ ಅಂದುಕೊಂಡಿರಲಿಲ್ಲ,” ಎಂದು ಹೇಳಿದ್ದಾರೆ. ಈಗ ಇದೇ ಅಂಶಗಳನ್ನು ಇಟ್ಟುಕೊಂಡು ಇಂದು ಸಂಪತ್ ರಾಜ್ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇಂದು ಸಿಸಿಬಿಗೆ ಕಚೇರಿಗೆ ಬರುವಂತೆ ಸಂಪತ್ ರಾಜ್​ಗೆ ಸಿಸಿಬಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.