ಹೊಸ ವರ್ಷಕ್ಕೆ ಡಿಜೆ ಹಾಕಂಗಿಲ್ಲ, ಕುಣಿಯಂಗಿಲ್ಲ..!  ಪಬ್, ಬಾರ್ ಗಳಿಗೆ 50 ರಷ್ಟೇ ಪ್ರವೇಶ ; ರಾಜ್ಯಕ್ಕೆ ಹೊಸ ರೂಲ್ಸ್ 

21-12-21 07:33 pm       HK Desk news   ಕರ್ನಾಟಕ

ಕರ್ನಾಟಕದಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಬಾರ್, ಪಬ್ ನಲ್ಲಿ ಕುಣಿಯುವುದಕ್ಕೆ ರಾಜ್ಯ ಸರಕಾರ ಬ್ರೇಕ್ ಹಾಕಿದೆ. ಕೋವಿಡ್ ಮಾರ್ಗಸೂಚಿಯಂತೆ ಹೊಸ ವರ್ಷ ಮತ್ತು ಕ್ರಿಸ್ಮಸ್ ಆಚರಣೆ ಮಾಡಬಹುದು.‌ ಆದರೆ ಓಪನ್ ಸಮಾರಂಭಗಳಲ್ಲಿ ಸೇರಿದಂತೆ ಬಾರ್, ಪಬ್ ಗಳಲ್ಲಿ ಡಿಜೆ ಹಾಕುವಂತಿಲ್ಲ.

ಬೆಂಗಳೂರು, ಡಿ.21 : ಕರ್ನಾಟಕದಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಬಾರ್, ಪಬ್ ನಲ್ಲಿ ಕುಣಿಯುವುದಕ್ಕೆ ರಾಜ್ಯ ಸರಕಾರ ಬ್ರೇಕ್ ಹಾಕಿದೆ. ಕೋವಿಡ್ ಮಾರ್ಗಸೂಚಿಯಂತೆ ಹೊಸ ವರ್ಷ ಮತ್ತು ಕ್ರಿಸ್ಮಸ್ ಆಚರಣೆ ಮಾಡಬಹುದು.‌ ಆದರೆ ಓಪನ್ ಸಮಾರಂಭಗಳಲ್ಲಿ ಸೇರಿದಂತೆ ಬಾರ್, ಪಬ್ ಗಳಲ್ಲಿ ಡಿಜೆ ಹಾಕುವಂತಿಲ್ಲ. ಡಿಸೆಂಬರ್‌ 30 ರಿಂದ ಜನವರಿ 2ರ ವರೆಗೆ ಹೊಸ ರೂಲ್ಸ್‌ ರಾಜ್ಯದಲ್ಲಿ ಇರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ರಾಜ್ಯದಲ್ಲಿ ಓಮಿಕ್ರಾನ್‌ ಹಾಗೂ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿ ಕೋವಿಡ್‌ ತಾಂತ್ರಿಕ ಸಮಿತಿಯ ಸಭೆ ನಡೆಸಿದ್ಧು ಸಭೆಯ ನಂತರ ಈ ಮಾಹಿತಿ ನೀಡಿದ್ದಾರೆ. ಸಾರ್ವಜನಿಕವಾಗಿ ಜನರು ಹೊಸ ವರ್ಷಾಚರಣೆ ಮಾಡುವಂತಿಲ್ಲ. ಅಲ್ಲದೇ ಕ್ಲಬ್‌, ಪಬ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಡಿಜೆ ಪಾರ್ಟಿ ಆಯೋಜನೆಗೆ ಅವಕಾಶವಿಲ್ಲ ಎಂದಿದ್ದಾರೆ.

ಅಪಾರ್ಟ್‌ಮೆಂಟ್‌ಗಳಲ್ಲಿಯೂ ಡಿಜೆ ಪಾರ್ಟಿ ಆಯೋಜಿಸುವಂತಿಲ್ಲ. ಪಬ್‌, ಬಾರ್‌, ಕ್ಲಬ್‌ಗಳಿಗೆ ಹೋಗುವವರು ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆಯನ್ನು ಪಡೆದಿರಬೇಕು. ಡಿಸೆಂಬರ್ 30ರಿಂದ ಜನವರಿ 2ರ ವರೆಗೆ ರಾಜ್ಯದಲ್ಲಿ ಹೊಸ ವರ್ಷಾಚರಣೆಯ ರೂಲ್ಸ್ ಜಾರಿಯಲ್ಲಿ ಇರಲಿದೆ. ಅಲ್ಲದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕ್ರಿಸ್‌ಮಸ್‌ ಆಚರಣೆಯನ್ನು ಮಾಡುವಂತೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ. 

ಎಂಜಿ ರೋಡ್, ಬ್ರಿಗೇಡ್ ರೋಡ್ ನಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ಅಲ್ಲದೇ ಬಾರ್‌ ಆಂಡ್‌ ರೆಸ್ಟೋರೆಂಟ್‌ಗಳಲ್ಲಿ ಶೇ. 50ರಷ್ಟು ಪ್ರವೇಶಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ದಿನೇ ದಿನೇ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈಗಾಗಲೇ ಕೇಂದ್ರ ಸರಕಾರ ಫೆಬ್ರವರಿ ತಿಂಗಳಲ್ಲಿ ಓಮಿಕ್ರಾನ್‌ ಸ್ಪೋಟವಾಗುವ ಸೂಚನೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕಠಿಣ ನಿಯಮ ಜಾರಿಗೆ ತರಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ. ‌

The Karnataka government on Tuesday said that no parties or mass gatherings would be permitted in the state from 30 December to 2 January in view of the Covid-19 scenario and the rising number of cases of the Omicron variant. We have restricted public celebration of new year, however, celebrations are permitted in clubs and restaurants with 50% seating capacity without any special event like DJ, Karnataka Chief Minister Basavaraj Bommai has said.