ಇನ್ಮುಂದೆ ಮದುವೆ ನೋಂದಣಿ ಅಧಿಕಾರ ಪಿಡಿಓಗಳಿಗೆ ; ಗ್ರಾಪಂ ಮಟ್ಟದಲ್ಲಿ ಮದುವೆ ರಿಜಿಸ್ಟರ್ ಗೆ ಅವಕಾಶ 

17-04-22 03:31 pm       Bengaluru Correspondent   ಕರ್ನಾಟಕ

ರಾಜ್ಯದಲ್ಲಿ ಮದುವೆ ನೋಂದಣಿ ಅಧಿಕಾರವನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು, ಎ.17 : ರಾಜ್ಯದಲ್ಲಿ ಮದುವೆ ನೋಂದಣಿ ಅಧಿಕಾರವನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈವರೆಗೂ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್‌) ಕಚೇರಿಗಳಲ್ಲಿ ಮಾತ್ರ ವಿವಾಹ ನೋಂದಣಿ ಮಾಡಲು ಅವಕಾಶ ಇತ್ತು. ಹೀಗಾಗಿ ವಿವಾಹ ನೋಂದಣಿ ಮಾಡಿಸಿಕೊಳ್ಳಲು ತಾಲೂಕು ಕೇಂದ್ರಗಳಿಗೆ ಬರಬೇಕಾಗಿತ್ತು. ಸರ್ಕಾರದ ಹೊಸ ತೀರ್ಮಾನದಿಂದಾಗಿ ಗ್ರಾಮ ಪಂಚಾಯತಿ ಕಚೇರಿಗಳಲ್ಲೇ ವಿವಾಹ ನೋಂದಣಿ ಮಾಡಿಕೊಳ್ಳಲು ಅವಕಾಶ ಸಿಗಲಿದೆ. 

ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶನಿವಾರ ಆದೇಶ ಹೊರಡಿಸಿದ್ದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಓಗಳಿಗೆ ಮದುವೆ ನೋಂದಣಿ ಅಧಿಕಾರ ನೀಡಲಾಗಿದೆ. ಇದರಿಂದ ಮದುವೆ ನೋಂದಣಿಗಾಗಿ ಹಳ್ಳಿಯ ಜನ ತಾಲೂಕು ಕೇಂದ್ರಕ್ಕೆ ಅಲೆದಾಡುವುದು ತಪ್ಪಲಿದೆ. ಈ ಹಿಂದೆಯೇ ಜನನ- ಮರಣದ ನೋಂದಣಿ ಅಧಿಕಾರವನ್ನೂ ‍‍‍ಪಿಡಿಒಗಳಿಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿತ್ತು.

The government has given the marriage registration authority in the state to the Gram Panchayat Development Officers (PDO). So far, the marriage has to be registered only in the Sub-Registrar's offices at the District and Taluk centers.They had to come to the taluk centers to get the marriage registered . The new decision of the government will give them the opportunity to register their marriage at Gram Panchayat headquarters. This will also prevent the heat flowing to the center of the taluk.