ಬ್ರೇಕಿಂಗ್ ನ್ಯೂಸ್
06-08-25 11:23 am Mangalore Correspondent ಕ್ರೈಂ
ಮಂಗಳೂರು, ಆ.6 : ಸೈಬರ್ ವಂಚಕರು ದಿನದಿಂದ ದಿನಕ್ಕೆ ಹೊಸ ನಮೂನೆಯಲ್ಲಿ ವಂಚಿಸುವುದಕ್ಕೆ ದಾರಿ ಹುಡುಕುತ್ತಿದ್ದಾರೆ. ಜನರನ್ನು ಯಾಮಾರಿಸಿ ಆಧುನಿಕ ತಂತ್ರಜ್ಞಾನ ಬಳಸಿ ಪೊಲೀಸರ ಕೈಗೂ ಸಿಗದಂತೆ ತಮ್ಮ ಕೃತ್ಯ ಎಸಗುತ್ತಿದ್ದಾರೆ. ಕೊರಿಯರ್ ಸಂಸ್ಥೆಯ ಹೆಸರಿನಲ್ಲಿ ಮೊಬೈಲ್ ಕರೆ ಮಾಡಿಯೂ ನಿಮ್ಮನ್ನು ಯಾಮಾರಿಸಿ ಮೊಬೈಲ್ ಸಂಖ್ಯೆಯನ್ನೇ ಹ್ಯಾಕ್ ಮಾಡಿ ಹಣ ಕಿತ್ತುಕೊಳ್ಳುವುದು ಹೊಸ ರೀತಿಯ ವಂಚನೆ ಎನ್ನೋ ವಿಚಾರ ಬೆಳಕಿಗೆ ಬಂದಿದೆ.
ಕೊರಿಯರ್ ಹೆಸರಲ್ಲಿ ಕರೆ ಮಾಡಿದವರು ಬ್ಯಾಂಕ್ ಡಾಕ್ಯುಮೆಂಟ್, ಎಲ್ಐಸಿ ದಾಖಲೆ ಕೊರಿಯರ್ ಬಂದಿದೆ, ಅಡ್ರೆಸ್ ಅದರಲ್ಲಿ ಸಮರ್ಪಕವಾಗಿಲ್ಲ ಇತ್ಯಾದಿ ಹೇಳುತ್ತಾರೆ. ಕೊರಿಯರ್ ಹುಡುಗ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದಾನೆ. ಆತನ ನಂಬರ್ ಹಾಕುತ್ತೇನೆ. ಆತನಿಗೆ ಕರೆ ಮಾಡಿ ಅಡ್ರಸ್ ಹೇಳಿ ಎಂದಷ್ಟೇ ಹೇಳಿ ಕರೆ ಕಡಿತ ಮಾಡುತ್ತಾರೆ. ಕೊರಿಯರ್ ಕಂಪನಿ ಹೆಸರಲ್ಲಿ ಕರೆ ಬಂದಿದ್ದನ್ನು ಸತ್ಯವೆಂದೇ ನಂಬಿ ಆತ ಕೊಟ್ಟ ಮೊಬೈಲ್ ನಂಬರ್ಗೆ ಕರೆ ಮಾಡಿದರೆ ನಮ್ಮ ಮೊಬೈಲ್ ಹ್ಯಾಕ್ ಆಗುತ್ತದೆ.
ರಾಜ್ಯದಲ್ಲಿ ಈ ರೀತಿ ಹೊಸ ನಮೂನೆಯಲ್ಲಿ ಕರೆ ಮಾಡಿ ಮೊಬೈಲ್ ಹ್ಯಾಕ್ ಮಾಡಿ ಹಣ ಕಿತ್ತುಕೊಳ್ಳುವುದು, ಜನರನ್ನು ಯಾಮಾರಿಸಿದ ಘಟನೆಗಳು ನಡೆದಿದ್ದು ನಾನಾ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾಗಿವೆ. ಈ ರೀತಿ ಅಪರಿಚಿತನ ಮಾತು ನಂಬಿ ಕರೆ ಮಾಡಿದವರ ಮೊಬೈಲನ್ನು ಸೈಬರ್ ವಂಚಕರು ಹ್ಯಾಕ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಮೊಬೈಲ್ ಸಂಪರ್ಕ ಲಿಸ್ಟ್ನಲ್ಲಿರುವ ಎಲ್ಲರಿಗೂ ಸೈಬರ್ ವಂಚಕರು ವಾಟ್ಸ್ ಆ್ಯಪ್ ಮೂಲಕ ತುರ್ತು ಹಣ ಬೇಕೆಂದು ವಿನಂತಿ ಕಳುಹಿಸಿದ್ದಾರೆ. ಅದರಲ್ಲಿ ಗೂಗಲ್ ಪೇ ನಂಬರ್ ಕೂಡ ನೀಡಿದ್ದು, ಕೆಲವರು ಆ ನಂಬರ್ಗೆ ಹಣ ಕಳುಹಿಸಿ ವಂಚನೆಗೂ ಒಳಗಾಗಿದ್ದಾರೆ. ಇದೊಂದು ಹೊಸ ಮಾದರಿಯ ವಂಚನೆಯಾಗಿದ್ದು ಜನರು ಜಾಗೃತರಾಗಬೇಕಾಗಿದೆ.
ಸೈಬರ್ ವಂಚಕರು ದಿನಕ್ಕೊಂದು ಮಾದರಿಯಲ್ಲಿ ಸಂದೇಶ ಕಳುಹಿಸಿ ಜನರನ್ನು ಯಾಮಾರಿಸಲು ನೋಡುತ್ತಾರೆ. ಆಮೂಲಕ ಉತ್ತರ ಭಾರತ ಅಥವಾ ವಿದೇಶದ ಎಲ್ಲೋ ಮೂಲೆಯಲ್ಲಿ ಕುಳಿತು ಕೋಟ್ಯಂತರ ರೂ. ವಂಚನೆ ಎಸಗುತ್ತಿದ್ದಾರೆ. ಪ್ರತಿನಿತ್ಯ ಇದೇ ರೀತಿ ಹತ್ತಾರು ಪ್ರಕರಣಗಳು ಸೈಬರ್ ಠಾಣೆಯಲ್ಲಿ ದಾಖಲಾಗುತ್ತಿದ್ದು, ಸಾರ್ವಜನಿಕರು ಎಚ್ಚರವಹಿಸಬೇಕಾಗಿದೆ.
ಸೈಬರ್ ವಂಚಕರು ತಮ್ಮ ವಹಿವಾಟು ಮಾಡೋದಕ್ಕಾಗಿಯೇ ನಕಲಿ ಬ್ಯಾಂಕ್ ಖಾತೆ ಮಾಡಿಸಿ, ಅದರಲ್ಲೇ ವ್ಯವಹರಿಸುತ್ತಾರೆ. ಸೈಬರ್ ವಂಚನೆಯ ಹಣ ವರ್ಗಾವಣೆಯಾದ ಕೆಲವೇ ಕ್ಷಣದಲ್ಲಿ ಆ ಖಾತೆಯಿಂದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸುತ್ತಾರೆ ಮತ್ತು ಅದಕ್ಕೆ ಬಳಸಿರುವ ಮೊಬೈಲ್ ಸಿಮ್, ಮೊಬೈಲ್ಗಳನ್ನೂ ನಾಶ ಮಾಡುತ್ತಾರೆ. ಇದರಿಂದಾಗಿ ಅವರ ಸಂಪರ್ಕ ದಾರಿಗಳನ್ನೇ ಮುಚ್ಚಿ ತಮ್ಮ ನೈಜತೆತನ್ನು ಮರೆ ಮಾಚುತ್ತಾರೆ. ಹೀಗಾಗಿ ಆಧುನಿಕ ಸೈಬರ್ ವಂಚಕರನ್ನು ಪತ್ತೆಹಚ್ಚುವುದೇ ಪೊಲೀಸರಿಗೆ ಸವಾಲಾಗಿದೆ.
ಸಿಬಿಐ ಅಧಿಕಾರಿಗಳೆಂದು ಫೋನ್ ಮಾಡಿ ಬೆದರಿಸುವುದು, ಷೇರ್ ಮಾರ್ಕೆಟ್- ಟ್ರೇಡಿಂಗ್ ಹೆಸರಲ್ಲಿ ಮೋಸ, ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ಆಸೆ ಹುಟ್ಟಿಸಿ ವಂಚನೆ, ನಕಲಿ ಕಸ್ಟಮರ್ ಕೇರ್ ಹೆಸರಲ್ಲಿ ಕರೆ ಮಾಡಿ ಯಾಮಾರಿಸಿ ವಂಚನೆ, ಕಡಿಮೆ ಬಡ್ಡಿಗೆ ಲೋನ್ ಕೊಡಿಸುವುದಾಗಿ ನಂಬಿಸಿ ಬ್ಲಾಕ್ಮೇಲ್ ಮಾಡುವ ಲೋನ್ ಏಪ್ಗಳು, ಓಎಲ್ಎಕ್ಸ್ ಆ್ಯಪ್ ಹೆಸರಲ್ಲಿ ವಂಚನೆ, ದೊಡ್ಡ ಮೊತ್ತದ ಗಿಫ್ಟ್ ಕಳಿಸುವ ನೆಪದಲ್ಲಿ ಮೋಸ, ಸರ್ಕಾರದ ಯೋಜನೆಗಳ ನೆಪದಲ್ಲಿ ಎಪಿಕೆ ಫೈಲ್ ಕಳಿಸಿ ಮೊಬೈಲ್ ಹ್ಯಾಕ್ ಮಾಡೋದು, ನಕಲಿ ಆನ್ಲೈನ್ ಗೇಮಿಂಗ್ ಆ್ಯಪ್ ಗಳಲ್ಲಿಯೂ ಸೈಬರ್ ವಂಚನೆಗಳಾಗುತ್ತಿದ್ದು ದಿನವೂ ಪೊಲೀಸ್ ಕೇಸುಗಳಾಗುತ್ತಿದ್ದರೂ ವಿದ್ಯಾವಂತರೇ ಮೋಸ ಹೋಗುತ್ತಿದ್ದಾರೆ.
ಸಂಶಯ ಬಂದಲ್ಲಿ ಸೈಬರ್ ಠಾಣೆಗೆ ಮಾಹಿತಿ ನೀಡಿ
ವಂಚನೆ ಪ್ರಕರಣ ನಡೆದ ಒಂದು ಗಂಟೆ ಅವಧಿ (ಗೋಲ್ಡನ್ ಟೈಮ್)ಯಲ್ಲಿ ಯಾವುದೇ ಹತ್ತಿರದ ಪೊಲೀಸ್ ಠಾಣೆ, ಸೈಬರ್ ಠಾಣೆಗೆ ಅಥವಾ 1930 ನಂಬರ್ಗೆ ಕರೆ ಮಾಡಿ ದೂರು ನೀಡಬಹುದು. ಅಪರಿಚಿತನ ಕರೆಯ ಬಗ್ಗೆ ಸಂಶಯ ಬಂದರೂ ಸೈಬರ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ಕೇಳಬಹುದು. ಮಂಗಳೂರು ನಗರ ಸೈಬರ್ ಠಾಣೆಯನ್ನು ಯಾವುದೇ ಸಾರ್ವಜನಿಕರು ಸಂಪರ್ಕಿಸಿ (0824-22208000) ದೂರು ಅಥವಾ ಮಾಹಿತಿ ಕೇಳಬಹುದು. ಮಂಗಳೂರು ಸಿಇಎನ್ ವಿಭಾಗ ಸಹಾಯಕ ಪೊಲೀಸ್ ಆಯುಕ್ತರು(6362806114) ಅಥವಾ ಪೊಲೀಸ್ ನಿರೀಕ್ಷಕರು (9480802341) ಅವರನ್ನೂ ಸಂಪರ್ಕ ಮಾಡಬಹುದು.
Cybercriminals are constantly inventing new methods to deceive the public, using modern technology to carry out their crimes without being easily traced. A new type of cyber fraud has come to light in which simply calling an unknown number shared over the phone can lead to mobile hacking and financial loss.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 01:06 pm
Wecare
Puttur Doctor Dr Keerthana Joshi, Suicide, Ma...
05-08-25 10:34 pm
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
06-08-25 11:23 am
Mangalore Correspondent
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm