ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್‌ ಷಾ ದಾಖಲೆ ; ಎಲ್.ಕೆ ಆಡ್ವಾಣಿಯನ್ನು ಹಿಂದಿಕ್ಕಿದ ಮೋಟಾ ಭಾಯ್‌ 

05-08-25 06:59 pm       HK News Desk   ದೇಶ - ವಿದೇಶ

ದೇಶದ ಗೃಹ ಸಚಿವರಾಗಿ 2,258 ದಿನಗಳ ಕಾಲ ಅಧಿಕಾರದಲ್ಲಿ ಮುಂದುವರಿಯುವ ಮೂಲಕ ಅಮಿತ್‌ ಷಾ ಅವರು ಭಾರತದಲ್ಲಿ ದೀರ್ಘ ಕಾಲ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ನವದೆಹಲಿ, ಆ.5 : ದೇಶದ ಗೃಹ ಸಚಿವರಾಗಿ 2,258 ದಿನಗಳ ಕಾಲ ಅಧಿಕಾರದಲ್ಲಿ ಮುಂದುವರಿಯುವ ಮೂಲಕ ಅಮಿತ್‌ ಷಾ ಅವರು ಭಾರತದಲ್ಲಿ ದೀರ್ಘ ಕಾಲ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ನರೇಂದ್ರ ಮೋದಿಯವರ ಎರಡನೇ ಅವಧಿಯ ಸರ್ಕಾರದಲ್ಲಿ 2019ರ ಮೇ 30ರಂದು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಇದುವರೆಗೆ ಅಮಿತ್‌ ಷಾ ಆ ಹುದ್ದೆಯಲ್ಲಿ 2,258 ದಿನಗಳನ್ನು ಪೂರೈಸಿದ್ದಾರೆ. ತನ್ಮೂಲಕ ಮಾರ್ಚ್ 19, 1998ರಿಂದ ಮೇ 22, 2004ರ ವರೆಗೆ 2,256 ದಿನಗಳ ಕಾಲ ದೇಶದ ಗೃಹ ಸಚಿವರಾಗಿ ಹುದ್ದೆ  ಅಲಂಕರಿಸಿದ್ದ ಬಿಜೆಪಿಯ ಹಿರಿಯ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರ ದಾಖಲೆಯನ್ನು ಅಮಿತ್‌ ಷಾ ಹಿಂದಿಕ್ಕಿದ್ದಾರೆ. 

ಈ ಮೊದಲು 1955ರ ಜನವರಿ 10ರಿಂದ 1961ರ ಮಾರ್ಚ್ 7ರ ವರೆಗೆ ಕೇಂದ್ರ ಗೃಹ ಸಚಿವರಾಗಿದ್ದ ಕಾಂಗ್ರೆಸ್ ನಾಯಕ ಗೋವಿಂದ್ ವಲ್ಲಭ್ ಪಂತ್ ಅವರನ್ನೂ ಅಮಿತ್ ಷಾ ಹಿಂದಿಕ್ಕಿದ್ದು, ಅವರು ಆರು ವರ್ಷ 56 ದಿನಗಳ ಕಾಲ ಆ ಹುದ್ದೆಯಲ್ಲಿದ್ದರು. ಅಮಿತ್ ಷಾ 2019ರ ಮೇ 30ರಂದು ಕೇಂದ್ರ ಗೃಹ ಸಚಿವರಾದ ಬಳಿಕ ಮೋದಿಯವರ ಮೂರನೇ ಅವಧಿಯಲ್ಲೂ ಗೃಹ ಸಚಿವರಾಗಿ ಮುಂದುವರಿದಿದ್ದಾರೆ. 2024ರ ಜೂನ್ 10ರಂದು ಎರಡನೇ ಬಾರಿ ಅಧಿಕಾರ ವಹಿಸಿಕೊಂಡಿರುವ ಅಮಿತ್‌ ಷಾ ಗೃಹ ಸಚಿವಾಲಯದ ಜೊತೆಗೆ, ಕೇಂದ್ರ ಸಹಕಾರ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ದೇಶದ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದವರು

  • ಸರ್ದಾರ್ ವಲ್ಲಭಭಾಯಿ ಪಟೇಲ್: 2 ಸೆಪ್ಟೆಂಬರ್ 1946 -15 ಡಿಸೆಂಬರ್ 1950
  • ಸಿ.ರಾಜಗೋಪಾಲಾಚಾರಿ: 26 ಡಿಸೆಂಬರ್ 1950 -25 ಅಕ್ಟೋಬರ್ 1951
  • ಕೈಲಾಶ್ ನಾಥ್ ಕಟ್ಜು: ನವೆಂಬರ್ 5, 1951 -ಜನವರಿ 10, 1955
  • ಗೋವಿಂದ ವಲ್ಲಭ ಪಂತ್: ಜನವರಿ 10, 1955 -ಮಾರ್ಚ್ 7, 1961
  • ಲಾಲ್ ಬಹದ್ದೂರ್ ಶಾಸ್ತ್ರಿ: 4 ಏಪ್ರಿಲ್ 1961 - 29 ಆಗಸ್ಟ್ 1963
  • ಗುಲ್ಜಾರಿಲಾಲ್ ನಂದಾ: 29 ಆಗಸ್ಟ್ 1963 - 14 ನವೆಂಬರ್ 1966
  • ಯಶವಂತರಾವ್ ಚವಾಣ್: 14 ನವೆಂಬರ್ 1966 - 27 ಜೂನ್ 1970
  • ಇಂದಿರಾ ಗಾಂಧಿ: ಜೂನ್ 27, 1970 - ಫೆಬ್ರವರಿ 04, 1973
  • ಉಮಾ ಶಂಕರ್ ದೀಕ್ಷಿತ್: 4 ಫೆಬ್ರವರಿ 1973 - 10 ಅಕ್ಟೋಬರ್ 1974
  • ಕೆ. ಬ್ರಹ್ಮಾನಂದ ರೆಡ್ಡಿ: 10 ಅಕ್ಟೋಬರ್ 1974 - 24 ಮಾರ್ಚ್ 1977
  • ಚರಣ್ ಸಿಂಗ್: 4 ಮಾರ್ಚ್ 1977 - 01 ಜುಲೈ 1978
  • ಮೊರಾರ್ಜಿ ದೇಸಾಯಿ: ಜುಲೈ 1, 1978 - ಜುಲೈ 28, 1979
  • ಯಶವಂತರಾವ್ ಚವಾಣ್: ಜುಲೈ 01, 1978 - ಜುಲೈ 28, 1979
  • ಗ್ಯಾನಿ ಜೈಲ್ ಸಿಂಗ್: ಜನವರಿ 14, 1980 - ಜೂನ್ 22, 1982
  • ರಾಮಸ್ವಾಮಿ ವೆಂಕಟರಾಮನ್: 22 ಜೂನ್ 1982 - 2 ಸೆಪ್ಟೆಂಬರ್ 1982
  • ಪ್ರಕಾಶ್ ಚಂದ್ರ ಸೇಥಿ: 2 ಸೆಪ್ಟೆಂಬರ್ 1982 - 19 ಜುಲೈ 1984
  • ಪಿ.ವಿ. ನರಸಿಂಹ ರಾವ್: ಜುಲೈ 19, 1984 - ಡಿಸೆಂಬರ್ 31, 1984
  • ಶಂಕರರಾವ್ ಚವಾಣ್: 31 ಡಿಸೆಂಬರ್ 1984 - 12 ಮಾರ್ಚ್ 1986
  • ಪಿ.ವಿ. ನರಸಿಂಹ ರಾವ್: ಮಾರ್ಚ್ 12, 1986 - ಮೇ 12, 1986
  • ಸರ್ದಾರ್ ಬೂಟಾ ಸಿಂಗ್: 12 ಮೇ 1986- 2 ಡಿಸೆಂಬರ್ 1989
  • ಮುಫ್ತಿ ಮೊಹಮ್ಮದ್ ಸಯೀದ್: ಡಿಸೆಂಬರ್ 2, 1989 - ನವೆಂಬರ್ 10, 1990
  • ಚಂದ್ರಶೇಖರ್: ನವೆಂಬರ್ 10, 1990- ಜೂನ್ 21, 1991
  • ಶಂಕರರಾವ್ ಚವಾಣ್: 21 ಜೂನ್ 1991 - 16 ಮೇ 1996
  • ಮುರಳಿ ಮನೋಹರ್ ಜೋಶಿ: 16 ಮೇ 1997 - 1 ಜೂನ್ 1996
  • ಇಂದ್ರಜಿತ್ ಗುಪ್ತಾ: 29 ಜೂನ್ 1996 - 19 ಮಾರ್ಚ್ 1998
  • ಲಾಲ್ ಕೃಷ್ಣ ಅಡ್ವಾಣಿ: 19 ಮಾರ್ಚ್ 1998 - 22 ಮೇ 2004
  • ಶಿವರಾಜ್ ಪಾಟೀಲ್: 22 ಮೇ 2004 - 30 ನವೆಂಬರ್ 2008
  • ಪಿ. ಚಿದಂಬರಂ: 30 ನವೆಂಬರ್ 2008 - 31 ಜುಲೈ 2012
  • ಸುಶೀಲ್‌ಕುಮಾರ್ ಶಿಂಧೆ: ಜುಲೈ 31, 2012 - ಮೇ 26, 2014
  • ರಾಜನಾಥ್ ಸಿಂಗ್: 27 ಮೇ 2014 - 29 ಮೇ 2019
  • ಅಮಿತ್ ಷಾ: 30 ಮೇ 2019ರಿಂದ..

Amit Shah has now become the longest-serving Union Home Minister in India’s history, having completed 2,258 days in office. This surpasses the previous record held by senior BJP leader L.K. Advani, who served for 2,256 days from March 19, 1998, to May 22, 2004.