ಹಿಜಾಬ್ ಮಾನಸಿಕತೆಗೆ ಗೊಬ್ಬರ, ನೀರು ಹಾಕುವುದನ್ನು ಬಿಡಿ, 99 ಶೇ. ಜನ ಪರೀಕ್ಷೆ ಬರೆದಿದ್ದಾರೆ, 1 ಶೇ. ಜನ ಹಿಜಾಬ್ ನಾಟಕ ಆಡುತ್ತಿದ್ದಾರೆ ! 

23-04-22 05:01 pm       HK Desk news   ಕರ್ನಾಟಕ

ರಾಜ್ಯದಲ್ಲಿ 99 ಶೇಕಡಾ ಜನ ಕೋರ್ಟ್ ಆದೇಶ ಪಾಲಿಸಿದ್ದಾರೆ, ಸಮವಸ್ತ್ರ ಒಪ್ಪಿಕೊಂಡು ಪರೀಕ್ಷೆ ಬರೆದಿದ್ದಾರೆ.‌ ಕೇವಲ 1 ಶೇ. ಜನರು ಈ ವಿಷಯವನ್ನ ಜೀವಂತ ಇಡಲು ಬರುತ್ತಾರೆ.‌

ಚಿಕ್ಕಮಗಳೂರು, ಎ.23 : ರಾಜ್ಯದಲ್ಲಿ 99 ಶೇಕಡಾ ಜನ ಕೋರ್ಟ್ ಆದೇಶ ಪಾಲಿಸಿದ್ದಾರೆ, ಸಮವಸ್ತ್ರ ಒಪ್ಪಿಕೊಂಡು ಪರೀಕ್ಷೆ ಬರೆದಿದ್ದಾರೆ.‌ ಕೇವಲ 1 ಶೇ. ಜನರು ಈ ವಿಷಯವನ್ನ ಜೀವಂತ ಇಡಲು ಬರುತ್ತಾರೆ.‌ ಅವರ ನಾಟಕ ಕ್ಯಾಮರಾ ಆಕಡೆ ತಿರುಗಲಿ ಎಂದು. ಅವರನ್ನ ಕೆಲವರು ಹೀರೋ, ಹೀರೋಯಿನ್ ರೀತಿ ಬಿಂಬಿಸುತ್ತಿದ್ದಾರೆ. ನಿಮಗೆ ಯಾವ್ದು ದೊಡ್ದು, ಪರೀಕ್ಷೆಯೋ... ಹಿಜಬ್ಬೋ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ. 

ಪರೀಕ್ಷೆ ದೊಡ್ದದು ಅನ್ನುವ 99% ಜನ ಪರೀಕ್ಷೆ ಬರೆದಿದ್ದಾರೆ.‌ ಹಿಜಾಬ್ ದೊಡ್ದು ಅನ್ನುವವರು ಕ್ಯಾಮರಾ ಮುಂದೆ ನಾಟಕ ಆಡ್ತಿದ್ದಾರೆ. 99% ಜನ ಸರ್ಕಾರದ ನಿಲುವು, ಕೋರ್ಟ್ ತೀರ್ಪು ಒಪ್ಪಿಕೊಂಡಿದ್ದಾರೆ, ಅವರಿಗೆ ಸ್ವಾಗತ. ಕೆಲವರು ಹಿಜಾಬ್ ಜೀವಂತವಾಗಿಡಲು ಷಡ್ಯಂತ್ರ ನಡೆಸಿದ್ದಾರೆ, ಅವರ ಮಾನಸಿಕತೆ ಅದು.‌ 

Two Students Walk Out of Karnataka PUC Exams Over Hijab Row

1983 ರಿಂದ ಇಲ್ಲದ ಈ ಚಳುವಳಿ ಈಗ ಏಕೆ ಶುರುವಾಗುತ್ತೆ. ಇವತ್ತು ಹಿಜಾಬ್ ದೊಡ್ದು ಅಂತಾರೆ, ನಾಳೆ ಸಂವಿಧಾನವೇ ಬೇಡ ಅಂತಾರೆ. ಸಂವಿಧಾನ ಬೇಡ ನಮಗೆ ಷರಿಯಾನೇ ಬೇಕು ಅಂತಾರೆ. ಆ ಮಾನಸಿಕತೆಗೆ ಗೊಬ್ಬರ-ನೀರು ಹಾಕುವುದನ್ನ ಕಾಂಗ್ರೆಸ್ ಬಿಡಬೇಕು. ಈ ಮಾನಸಿಕತೆಗೆ, ಖಿಲಾಫತ್ ಚಳುವಳಿಗೆ ಗೊಬ್ಬರ-ನೀರು ಹಾಕಿದ್ದರಿಂದ ದೇಶ ವಿಭಜನೆ ಆಯ್ತು. ಈ ಹಿಜಾಬ್ ಗೆ ಗೊಬ್ಬರ-ನೀರು ಹಾಕಿ ಮತ್ತೊಂದು ವಿಭಜನೆಗೆ ಅವಕಾಶ ಮಾಡಬಾರದು. ಮತಾಂಧತೆಯ ಮೂಲಕ ದೇಶ ಒಡೆಯುವುದೇ ಅವರ ಸಂಚು. ಭಾರತದ ವಿಭಜನೆಯನ್ನ ಇದೇ ಮತಾಂಧತೆ ಮಾಡಿದ್ದು ಎಂದು ವಿಶ್ಲೇಷಣೆ ಮಾಡಿದ್ದಾರೆ ಸಿ.ಟಿ.ರವಿ.

99% of students in the state follow a court order and accept uniforms. Only 1% of people want to keep the hijab thing alive. BJP national general secretary and legislator City Ravi said that the drama should be turned on their side.Commenting on the students who returned to the exam without wearing a hijab in small children, he said that some people who went back to the exam without leaving the exam are like hero and heroin. He asked if you have a hijab or a test. The big hijab is the drama in front of the camera. He added that 99 per cent of the people accepted the government's stand and the court verdict.