ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗಡೆ ; 76ಕ್ಕೂ ಹೆಚ್ಚು ಇತಿಯೋಪಿಯಾ ವಲಸಿಗರು ಸಾವು

04-08-25 05:11 pm       HK News Desk   ದೇಶ - ವಿದೇಶ

ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗಡೆಯಾಗಿದ್ದು, 70ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗಲ್ಫ್ ಆಫ್ ಏಡನ್ ಸಮುದ್ರದಲ್ಲಿ ಘಟನೆ ನಡೆದಿದ್ದು, ದುರಂತ ಸಂದರ್ಭದಲ್ಲಿ ಹಡಗಿನಲ್ಲಿ 157 ಮಂದಿಯಷ್ಟು ಪ್ರಯಾಣಿಕರು ಇದ್ದರೆಂದು ವಿಶ್ವಸಂಸ್ಥೆಯ ಮೈಗ್ರೇಶನ್ ಏಜನ್ಸಿ ಹೇಳಿದೆ.

ನವದೆಹಲಿ, ಆ.4 : ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗಡೆಯಾಗಿದ್ದು, 70ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗಲ್ಫ್ ಆಫ್ ಏಡನ್ ಸಮುದ್ರದಲ್ಲಿ ಘಟನೆ ನಡೆದಿದ್ದು, ದುರಂತ ಸಂದರ್ಭದಲ್ಲಿ ಹಡಗಿನಲ್ಲಿ 157 ಮಂದಿಯಷ್ಟು ಪ್ರಯಾಣಿಕರು ಇದ್ದರೆಂದು ವಿಶ್ವಸಂಸ್ಥೆಯ ಮೈಗ್ರೇಶನ್ ಏಜನ್ಸಿ ಹೇಳಿದೆ.

ಯೆಮೆನಿ ಅಧಿಕಾರಿಗಳು 76 ಶವಗಳನ್ನು ಮೇಲೆತ್ತಿದ್ದಾರೆ, 32 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಸಾವನ್ನಪ್ಪಿದವರಲ್ಲಿ ಇತಿಯೋಪಿಯಾದ ವಲಸಿಗರು ಹೆಚ್ಚಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ದಕ್ಷಿಣ ಯೆಮೆನ್ ಸಮುದ್ರ ಮಾರ್ಗದಲ್ಲಿ ವಲಸಿಗರನ್ನು ಹೊತ್ತುಕೊಂಡು ಸಾಗುತ್ತಿದ್ದಾಗ ಹಡಗು ಮುಳುಗಡೆಯಾಗಿದೆ. ಆಫ್ರಿಕದ ವಲಸಿಗರನ್ನು ಕೆಂಪು ಸಮುದ್ರ ಮಾರ್ಗದಲ್ಲಿ ಕಳ್ಳದಾರಿಯ ಮೂಲಕ ಗಲ್ಫ್ ದೇಶಗಳಿಗೆ ಒಯ್ಯುವುದಕ್ಕೆ ಬಳಸುತ್ತಿದ್ದರು.

ಯೆಮೆನ್- ಇತಿಯೋಪಿಯಾದಲ್ಲಿ ಜನರನ್ನು ಬೇರೆ ಬೇರೆ ಉದ್ದೇಶಕ್ಕೆ ಅಕ್ರಮವಾಗಿ ಸಾಗಾಟ ನಡೆಸಲಾಗುತ್ತದೆ. ಇತಿಯೋಪಿಯಾದಲ್ಲಿ ಅತಿ ಹೆಚ್ಚು ಬಡತನವಿದ್ದು, ಅಲ್ಲಿನ ಜನರನ್ನು ಆಮಿಷವೊಡ್ಡಿ ಒಯ್ಯಲಾಗುತ್ತದೆ. ಇದೇ ಉದ್ದೇಶಕ್ಕೆ ಪ್ಯಾಸೆಂಜರ್ ಹಡಗಿನ ಮೂಲಕ ಒಯ್ಯುತ್ತಿದ್ದಾಗ ದುರಂತ ಸಂಭವಿಸಿದೆ. ಪ್ರತಿ ವರ್ಷ ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳಿಗೆ ಕಾರ್ಮಿಕರಾಗಿ ದುಡಿಯಲು ಇತಿಯೋಪಿಯಾದಿಂದ ಸಾವಿರಾರು ಜನರನ್ನು ಒಯ್ಯಲಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಕೆಂಪು ಸಮುದ್ರದಲ್ಲಿ ಇಂತಹದ್ದೇ ದುರಂತಗಳಿಂದ 558 ಮಂದಿ ಮಡಿದಿದ್ದಾರೆ. ಬೋಟ್ ದುರಂತಗಳಲ್ಲಿಯೇ 462 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಎರಡು ಬೋಟ್ ಮುಳುಗಡೆಯಾಗಿ 180 ವಲಸಿಗರು ಸಾವನ್ನಪ್ಪಿದ್ದರು.

In a devastating maritime tragedy, more than 76 people have died after a passenger boat capsized near the coast of Yemen in the Gulf of Aden. According to the United Nations migration agency, the boat was carrying approximately 157 passengers, most of whom were migrants from Ethiopia.