ಬ್ರೇಕಿಂಗ್ ನ್ಯೂಸ್
01-08-25 10:48 pm HK News Desk ದೇಶ - ವಿದೇಶ
ಮುಂಬೈ, ಆಗಸ್ಟ್ 1 : ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಕೇಸರಿ ಭಯೋತ್ಪಾದನೆ ಎನ್ನುವುದನ್ನು ಬಿಂಬಿಸಲು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ಆದೇಶ ಮಾಡಲಾಗಿತ್ತು. ಆಗಿನ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಮತ್ತು ಅವರ ಮೇಲಿನ ಅಧಿಕಾರಿಗಳು ನನಗೆ ಬಂಧನಕ್ಕೆ ಸೂಚಿಸಿದ್ದರು. ಆದರೆ ಭಾಗವತ್ ಅವರನ್ನು ಬಂಧಿಸುವುದು ನನ್ನ ಮಿತಿಯಲ್ಲಿ ಇರಲಿಲ್ಲ ಎಂದು ಮಹಾರಾಷ್ಟ್ರ ಎಟಿಎಸ್ ಘಟಕದಲ್ಲಿ ಇನ್ಸ್ ಪೆಕ್ಟರ್ ಆಗಿದ್ದು ನಿವೃತ್ತಿಯಾಗಿರುವ ಮೆಹಬೂಬ್ ಮುಜಾವರ್ ಹೇಳಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ ಕೋರ್ಟ್ ತೀರ್ಪಿನ ವಿಚಾರದಲ್ಲಿ ಇಂಡಿಯಾ ಟುಡೇ ಜೊತೆಗೆ ಮಾಹಿತಿ ಹಂಚಿಕೊಂಡಿರುವ ಮುಜಾವರ್, ದೇಶದಲ್ಲಿ ಕೇಸರಿ ಭಯೋತ್ಪಾದನೆ ಆಗುತ್ತಿರುವುದಾಗಿ ಬಿಂಬಿಸಲು ಷಡ್ಯಂತ್ರ ನಡೆದಿತ್ತು. ಅದಕ್ಕಾಗಿ ಮೋಹನ್ ಭಾಗವತ್, ರಾಮ್ ಕಲ್ಸಂಗ್ರಾ, ಸಂದೀಪ್ ಡಾಂಗೆ, ದಿಲೀಪ್ ಪಾಟಿದಾರ್ ಅವರನ್ನು ಬಂಧಿಸುವಂತೆ ಸೂಚಿಸಲಾಗಿತ್ತು. ಆದರೆ ಭಾಗವತ್ ಮಹಾರಾಷ್ಟ್ರದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು ಅಂಥವರನ್ನು ಬಂಧಿಸುವುದು ನನ್ನ ಸಾಮರ್ಥ್ಯ ಮೀರಿದ್ದಾಗಿತ್ತು. ಅದನ್ನು ನಿರಾಕರಿಸಿದ್ದಕ್ಕಾಗಿ ನನ್ನ ಮೇಲೆ ಕಮಿಷನರ್ ಪರಮ್ ಬೀರ್ ಸಿಂಗ್ ಹಗೆ ಸಾಧಿಸಿದ್ದರು.
ಇದಲ್ಲದೆ, ಚಾರ್ಜ್ ಶೀಟ್ ನಲ್ಲಿ ಸತ್ತ ವ್ಯಕ್ತಿಗಳನ್ನು ಜೀವಂತ ಇರುವಂತೆ ತೋರಿಸುವಂತೆ ನನಗೆ ಒತ್ತಡ ಹೇರಿದ್ದರು. ನಾನು ನಿರಾಕರಣೆ ಮಾಡಿದ್ದಕ್ಕೆ ಸುಳ್ಳು ಆರೋಪಗಳನ್ನು ಹೊರಿಸಿ ನನ್ನ ಮೇಲೆ ಕೇಸು ದಾಖಲಿಸಿದ್ದರು. ಆದರೆ ಎಲ್ಲ ಕೇಸುಗಳಿಂದಲೂ ನ್ಯಾಯಾಂಗ ಖುಲಾಸೆಗೊಳಿಸಿ ನನಗೆ ಮುಕ್ತಿ ನೀಡಿತ್ತು ಎಂದು ಮೆಹಬೂಬ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್, ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಎಲ್ಲ ಏಳು ಮಂದಿಯನ್ನ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಎನ್ಐಎ ಕೋರ್ಟ್ ಖುಲಾಸೆಗೊಳಿಸಿ ತೀರ್ಪು ನೀಡಿತ್ತು.
ಬಲಪಂಥೀಯ ಅಭಿನವ ಭಾರತ ಸಂಘಟನೆಗೆ ಸೇರಿದವರು ಮಾಲೆಗಾಂವ್ ಸ್ಫೋಟ ಕೃತ್ಯ ನಡೆಸಿದ್ದರು ಎಂದು ಎಟಿಎಸ್ ಪೊಲೀಸರು ಪ್ರಜ್ಞಾ ಸಿಂಗ್ ಸೇರಿ ಏಳು ಮಂದಿ ವಿರುದ್ಧ ಕೇಸು ದಾಖಲಿಸಿದ್ದರು. ಪ್ರಜ್ಞಾಗೆ ಸೇರಿದ್ದ ಮೋಟರ್ ಸೈಕಲ್ ನಲ್ಲಿ ಕರ್ನಲ್ ಪುರೋಹಿತ್ ಅವರು ಸ್ಫೋಟಕಗಳನ್ನು ಇಟ್ಟಿದ್ದರು ಎಂದು ಎಟಿಎಸ್ ಆರೋಪಿಸಿತ್ತು. ಆದರೆ ಆ ಮೋಟರ್ ಸೈಕಲ್ ಪ್ರಜ್ಞಾಗೆ ಸೇರಿದ್ದು ಅನ್ನುವುದನ್ನು ಸಾಬೀತುಪಡಿಸಲು ಪೊಲೀಸರು ವಿಫಲವಾಗಿದ್ದರು. ಅಲ್ಲದೆ, ಕರ್ನಲ್ ಪುರೋಹಿತ್ ಬಾಂಬ್ ಗಳನ್ನು ಇಟ್ಟಿದ್ದರು ಎಂಬುದನ್ನು ಸಾಬೀತುಪಡಿಸುವುದಕ್ಕೂ ಎಟಿಎಸ್ ವಿಫಲವಾಗಿತ್ತು. ಸುದೀರ್ಘ 17 ವರ್ಷಗಳ ಕಾಲ ಕೋರ್ಟಿನಲ್ಲಿ ವಿಚಾರಣೆ ನಡೆಸಲಾಗಿತ್ತು. ಮೊದಲು ಎಟಿಎಸ್ 2009ರಲ್ಲಿ ಸಾಧ್ವಿ ಸೇರಿದಂತೆ ಏಳು ಮಂದಿ ವಿರುದ್ಧ ಆರೋಪ ಪಟ್ಟಿ ಹಾಕಿದ್ದರೂ, ಸೂಕ್ತ ಸಾಕ್ಷ್ಯಗಳಿಲ್ಲ ಎಂದು ಮುಂಬೈ ಕೋರ್ಟ್ ಮರು ತನಿಖೆಗೆ ಆದೇಶ ಮಾಡಿತ್ತು. 20011ರಲ್ಲಿ ತನಿಖೆಯನ್ನು ಎನ್ಐಎ ತಂಡಕ್ಕೆ ವಹಿಸಲಾಗಿತ್ತು. 2017ರಲ್ಲಿ ಎನ್ಐಎ ತಂಡ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು.
2008ರಲ್ಲಿ ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿದ್ದ ಕಾಂಗ್ರೆಸ್ ಸರಕಾರ ದೇಶದಲ್ಲಿ ಕೇಸರಿ ಭಯೋತ್ಪಾದನೆ ಇದೆಯೆಂದು ಬಿಂಬಿಸಲು ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ ಹಿಂದು ಬಲಪಂಥೀಯರನ್ನು ಸಿಲುಕಿಸಿತ್ತು ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಈಗ ಎನ್ಐಎ ಕೋರ್ಟ್ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದಲ್ಲದೆ, ಉಗ್ರವಾದಕ್ಕೆ ಧರ್ಮ ಇಲ್ಲ, ಹಾಗಂತ ಕೇವಲ ಸಂಶಯದ ಮೇಲೆ ಆರೋಪಿಗಳಿಗೆ ಶಿಕ್ಷೆ ವಿಧಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
In a sensational revelation, former Maharashtra ATS Inspector Mehboob Mujawar has claimed that he was instructed to arrest Rashtriya Swayamsevak Sangh (RSS) chief Mohan Bhagwat in connection with the 2008 Malegaon blast case, but was later falsely implicated for refusing to comply.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
30-08-25 06:44 pm
HK News Desk
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
30-08-25 04:23 pm
Mangalore Correspondent
Golden Era of AI Business: YatiCorp Offers As...
30-08-25 04:11 pm
ಕೊಲ್ಲೂರಿಗೆ ಬಂದು ನದಿಗೆ ಸ್ನಾನಕ್ಕಿಳಿದಿದ್ದ ಬೆಂಗಳೂ...
30-08-25 12:55 pm
Mangalore Talapady, Speaker Khader Orders Pro...
30-08-25 11:55 am
Mangalore NSUI, FIR: ಗಣೇಶೋತ್ಸವಕ್ಕೆ ಕಾಂಗ್ರೆಸ್...
29-08-25 10:54 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm