ಬ್ರೇಕಿಂಗ್ ನ್ಯೂಸ್
25-05-22 10:00 pm HK News Desk ದೇಶ - ವಿದೇಶ
ನವದೆಹಲಿ, ಮೇ 25: ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್ ಗೆ ದೆಹಲಿಯ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ದೇಶದ್ರೋಹ ಮತ್ತು ಉಗ್ರವಾದಿ ಕೃತ್ಯಗಳಿಗೆ ಫಂಡಿಂಗ್ ಮಾಡುತ್ತಿದ್ದ ಆರೋಪದಲ್ಲಿ ಎನ್ಐಎ ಅಧಿಕಾರಿಗಳು 2019ರಲ್ಲಿ ಯಾಸಿನ್ ಮಲಿಕ್ ನನ್ನು ಬಂಧಿಸಿದ್ದರು.
ಮೇ 19ರಂದು ಯಾಸಿನ್ ಮಲಿಕ್ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ ಎಂದು ದೆಹಲಿಯ ಕೋರ್ಟ್ ತೀರ್ಪು ನೀಡಿತ್ತು. ಮೇ 25ರ ಬುಧವಾರ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದು, ಯಾಸಿನ್ ಮಲಿಕ್ ವಿರುದ್ಧ ಜೀವಾವಧಿ ಶಿಕ್ಷೆ ತೀರ್ಪಿತ್ತಿದೆ. ಬುಧವಾರ ಬೆಳಗ್ಗೆ ಭಾರೀ ಭದ್ರತೆಯ ನಡುವೆ ಯಾಸಿನನ್ನು ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಕೋರ್ಟಿನಲ್ಲಿ ನ್ಯಾಯಾಧೀಶರ ಮುಂದೆ ಇಂದು ಕೂಡ ಹಿಂದಿನಂತೆಯೇ ವಾದ ಮಂಡಿಸಿದ್ದಾನೆ.
ನಾನೊಬ್ಬ ಮಹಾತ್ಮ ಗಾಂಧೀಜಿಯ ತತ್ವಗಳ ಅನುಯಾಯಿ. ಯಾವತ್ತು ಕೂಡ ಗಾಂಧೀಜಿ ತತ್ವಗಳನ್ನು ಮೀರಿದ ತಪ್ಪುಗಳನ್ನು ಮಾಡಿಲ್ಲ. ನಾನು ಏಳು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿದ್ದೇನೆ. 1994ರ ನಂತರ ಯಾವುದೇ ಏಜನ್ಸಿಯೂ ನನ್ನನ್ನು ಉಗ್ರವಾದಿ ಕೃತ್ಯಗಳಿಗೆ ಬೇಕಾದ ವ್ಯಕ್ತಿಯೆಂದು ಗುರುತಿಸಿರಲಿಲ್ಲ ಎಂದು ಯಾಸಿನ್ ಮಲಿಕ್ ನ್ಯಾಯಾಧೀಶರ ಮುಂದೆ ಹೇಳಿದ್ದಾನೆ.
ಪ್ರತ್ಯೇಕತವಾದ ಹೆಸರಲ್ಲೇ ಉಗ್ರವಾದ !
1999ರಲ್ಲಿ ಮೊದಲ ಬಾರಿಗೆ ಕಾಶ್ಮೀರದಲ್ಲಿ ಜನರನ್ನು ದಂಗೆ ಎಬ್ಬಿಸಲು ಪ್ರಚೋದನೆ ನೀಡುತ್ತಿದ್ದ ಕಾರಣಕ್ಕೆ ಪೊಲೀಸರು ಬಂಧಿಸಿದ್ದರು. ಆನಂತರ ಬಿಡುಗಡೆಯಾಗಿದ್ದ ಯಾಸಿನ್, 2002ರಲ್ಲಿ ಉಗ್ರವಾದಿ ವಿರೋಧಿ ಕಾಯ್ದೆಯಡಿ ಮತ್ತೆ ಬಂಧನಕ್ಕೊಳಗಾಗಿ ಒಂದು ವರ್ಷ ಕಾಲ ಜೈಲಿನಲ್ಲಿದ್ದ. 2007ರಲ್ಲಿ ಜೆಕೆಎಲ್ಎಫ್ ಹೆಸರಲ್ಲಿ ಹೊಸ ಪಾರ್ಟಿ ಸ್ಥಾಪಿಸಿ ಕಾಶ್ಮೀರದಾದ್ಯಂತ ಸಂಚರಿಸಿ ಸಂಚಲನ ಎಬ್ಬಿಸಿದ್ದ. ಜನರನ್ನು ಭಾರತ ಸರಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದ. ಸಫರ್ ಇ-ಆಝಾದಿ (ಸ್ವಾತಂತ್ರ್ಯಕ್ಕಾಗಿ ಪಯಣ) ಹೆಸರಲ್ಲಿ ಕಾಶ್ಮೀರದ 3500 ಪ್ರದೇಶಗಳಿಗೆ ತೆರಳಿ ಜನರನ್ನು ಸಂಘಟಿಸಿದ್ದ. ಭಾರತ ವಿರೋಧಿ ಧೋರಣೆ ಬೆಳೆಸಿಕೊಳ್ಳುವಂತೆ ಜನರನ್ನು ಪ್ರಚೋದಿಸುತ್ತಿದ್ದ.
2013ರ ಫೆಬ್ರವರಿಯಲ್ಲಿ ಪಾಕಿಸ್ಥಾನದ ಇಸ್ಲಮಾಬಾದ್ ನಲ್ಲಿ ಲಷ್ಕರ್ ಇ-ತೊಯ್ಬಾದ ಮುಖಂಡ ಮುಹಮ್ಮದ್ ಸಯೀದ್ ಜೊತೆಗೆ ಪ್ರತಿಭಟನೆ ಒಂದರಲ್ಲಿ ಕಾಣಿಸಿಕೊಂಡಿದ್ದ. 2016ರ ಜನವರಿಯಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರಾಂತ್ಯವನ್ನು ಪಾಕಿಸ್ಥಾನದ ಜೊತೆ ವಿಲೀನ ಮಾಡುವುದರ ವಿರುದ್ಧ ಆಗಿನ ಪ್ರಧಾನಿ ನವಾಜ್ ಶರೀಫ್ ಗೆ ಪತ್ರ ಬರೆದಿದ್ದ. 2017ರಲ್ಲಿ ಕಾಶ್ಮೀರದಲ್ಲಿ ದೊಂಬಿ ಎಬ್ಬಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪ್ರತ್ಯೇಕತಾವಾದಿ ಪ್ರಮುಖರಾದ ಯಾಸಿನ್ ಮಲಿಕ್ ಸೇರಿದಂತೆ ಇತರ ನಾಲ್ಕು ಮಂದಿಯ ವಿರುದ್ಧ ಕೇಸು ದಾಖಲಿಸಿದ್ದರು. 2019ರ ಫೆಬ್ರವರಿ 26ರಂದು ಯಾಸಿನ್ ಮನೆಗೆ ದಾಳಿ ನಡೆಸಿದ ಅಧಿಕಾರಿಗಳು, ಉಗ್ರವಾದ ಕೃತ್ಯಗಳಿಗೆ ಫಂಡಿಂಗ್ ಮಾಡುತ್ತಿದ್ದ ಬಗ್ಗೆ ಇಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. 2019ರ ಎಪ್ರಿಲ್ 10ರಂದು ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ನನ್ನು ಎನ್ಐಎ ಕಡೆಗೂ ಬಂಧಿಸಿತ್ತು.
Kashmiri leader Yasin Malik was on Wednesday sentenced to life imprisonment by a Delhi court in connection with a terror funding case. Malik had earlier pleaded guilty to all the charges, including those under the stringent Unlawful Activities Prevention Act (UAPA) in the case. The NIA court awarded life imprisonment based on section 121 (waging war against India) of the IPC and section 17 (raising funds for terror act) of the UAPA.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 11:04 pm
Mangalore Correspondent
Muneer Katipalla, Mangalore, Anupam Agarwal;...
27-11-24 09:36 pm
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm