ಬ್ರೇಕಿಂಗ್ ನ್ಯೂಸ್
02-06-22 10:13 pm HK News Desk ದೇಶ - ವಿದೇಶ
ವಾಷಿಂಗ್ಟನ್, ಜೂನ್ 2: ಹಾಲಿವುಡ್ ಸಿನಿಮಾ ರಂಗದ ಖ್ಯಾತ ಜೋಡಿಯಾದ ಜಾನಿ ಡೆಪ್ ಮತ್ತು ಆಂಬರ್ ಹರ್ಡ್ ಇಂದು ಮಾನನಷ್ಟ ಮೊಕದ್ದಮೆ ಕಾರಣದಿಂದಾಗಿ ಸಾಕಷ್ಟು ಸುದ್ದಿಯಾಗಿದ್ದಾರೆ. ಕೌಟುಂಬಿಕ ದೌರ್ಜನ್ಯ ಮತ್ತು ಮಾನನಷ್ಟ ಪ್ರಕರಣದ ತೀರ್ಪು ಹೊರ ಬಂದಿದ್ದು, ಅಚ್ಚರಿಯ ಸಂಗತಿ ಅಂದರೆ, ಇಬ್ಬರು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ.
ದಿ ರಮ್ ಡೈರಿ ಚಿತ್ರದ ಶೂಟಿಂಗ್ ವೇಳೆಯಲ್ಲಿ ಜಾನಿ ಡೆಪ್ ಅವರಿಗೆ ನಟಿ ಆಂಬರ್ ಹರ್ಡ್ ಪರಿಚಯವಾಗುತ್ತಾರೆ. ಪರಿಚಯವು ಸ್ನೇಹಕ್ಕೆ ತಿರುಗಿ, ಅದು ಪ್ರೇಮವಾಗಿ 2015ರಲ್ಲಿ ಈ ಜೋಡಿ ಮದುವೆ ಆಗುತ್ತದೆ. ಒಂದು ವರ್ಷ ಕೂಡ ಅವರು ಜತೆಯಾಗಿ ಇರುವುದಿಲ್ಲ. ಹೊಂದಾಣಿಕೆಯ ಕಾರಣದಿಂದಾಗಿ ಇಬ್ಬರೂ ವಿಚ್ಛೇದನ ಪಡೆಯಲು ಮುಂದಾಗುತ್ತಾರೆ. ಈ ವೇಳೆಯಲ್ಲಿ ಡ್ರಗ್ಸ್ ಮತ್ತು ಮದ್ಯದ ನಶೆಯಲ್ಲಿ ತಮ್ಮ ಮೇಲೆ ದೈಹಿಕ ದೌರ್ಜನ್ಯವಾಗಿದೆ ಎಂದು ಹರ್ಡ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ. ವಿಚ್ಛೇದನವನ್ನೂ ಪಡೆಯುತ್ತಾರೆ.
ಇದಾದ ನಂತರ 2018ರಲ್ಲಿ ಆಂಬರ್ ಹರ್ಡ್ ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆ ಮತ್ತು ತಮ್ಮ ದಾಂಪತ್ಯದಲ್ಲಿ ಬಿಟ್ಟ ಬಿರುಕಿನ ಕಾರಣವನ್ನು ಹಾಗೂ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಪತ್ರಿಕೆಯೊಂದರಲ್ಲಿ ಬರೆಯುತ್ತಾರೆ. ಜಾನಿ ಡೆಪ್ ತಮಗೆ ಏನೆಲ್ಲ ಹಿಂಸೆ ಕೊಟ್ಟ ಎನ್ನುವುದನ್ನು ಲೇಖನದಲ್ಲಿ ವಿವರಿಸುತ್ತಾರೆ. ಹಾಗಾಗಿ ಜಾನಿ ಡೆಪ್, ಮಾಜಿ ಪತ್ನಿಯ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಾರೆ.
ಆರು ವಾರಗಳ ಕಾಲ ನಡೆದ ವಿಚಾರಣೆಯಲ್ಲಿ ಮಾಜಿ ಪತ್ನಿಯು ಜಾನಿ ಡೆಪ್ ಅವರ ಮಾನಹಾನಿ ಮಾಡಿರುವುದು ಸಾಕ್ಷ್ಯಾಧಾರಗಳಿಂದ ರುಜುವಾತಾದ ಹಿನ್ನೆಲೆಯಲ್ಲಿ ಮಾಜಿಪತಿಗೆ 115 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಕೋರ್ಟ್ ಹೇಳಿದೆ. ಅಲ್ಲದೇ, ಮಾಜಿಪತ್ನಿಗೆ ಜಾನಿ ಕಿರುಕುಳ ನೀಡಿರುವ ಕೆಲ ಸಾಕ್ಷ್ಯಗಳು ದೊರೆತಿರುವುದರಿಂದ ಮಾಜಿಪತ್ನಿಗೆ ಜಾನಿ 15 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
ಪ್ರಭಾವಿ ವ್ಯಕ್ತಿಗಳ ಕೇಸ್ ;
ಆಂಬರ್ ಹರ್ಡ್ 2004ರಲ್ಲಿ ಹಾಲಿವುಡ್‌ಗೆ ಪದಾರ್ಪಣೆ ಮಾಡಿ ಇಲ್ಲಿಯವರೆಗೆ 36 ಸಿನಿಮಾಗಳಲ್ಲಿ ನಟಿಸಿದ್ದಾರೆ. ನೆವರ್ ಬ್ಯಾಕ್ ಡೌನ್, ಝಾಂಬೀಲ್ಯಾಂಡ್, ಆಕ್ವಾಮ್ಯಾನ್ ಮೊದಲಾದ ಇವರು ನಟಿಸಿದ ಸಿನಿಮಾಗಳು ಹಿಟ್ ಎನಿಸಿವೆ. 2011ರಲ್ಲಿ ಜಾನಿ ಡೆಪ್ ಜೊತೆ 'ದಿ ರಮ್ ಡೈರಿ' ಸಿನಿಮಾದಲ್ಲೂ ಇವರು ನಟಿಸಿದ್ದಾರೆ.
'ಪೈರೇಟ್ಸ್ ಆಫ್ ಕೆರಿಬಿಯನ್' ಸರಣಿಯ ಸಿನಿಮಾಗಳಲ್ಲಿ ಕ್ಯಾಪ್ಟನ್ ಜ್ಯಾಕ್ ಸ್ಪಾರೋ ಪಾತ್ರದ ಮೂಲಕ ಬಾಲಿವುಡ್‌ನ ದೊಡ್ಡ ಸೆಲಬ್ರಿಟಿ ಎನಿಸಿರುವ 58 ವರ್ಷದ ಜಾನಿ ಡೆಪ್ ಮತ್ತು 36 ವರ್ಷದ ಆಂಬರ್ ಹರ್ಡ್ ಪರಸ್ಪರ ಪ್ರೀತಿಸಿ 2015ರಲ್ಲಿ ಮದುವೆಯಾಗಿದ್ದರು.
ಮಹಿಳೆಯರಿಗೆ ಹಿನ್ನಡೆ, ಹರ್ಡ್ ಅಳಲು ;
ಜಾನಿ ಡೆಪ್‌ರ ಮಾಜಿ ಪತ್ನಿ ಆಂಬರ್ ಹರ್ಡ್ ಕೂಡ ಬಾಲಿವುಡ್ ನಟಿಯೇ ಆಗಿದ್ದಾರೆ. ಹಾಗಾಗಿ ಈ ಪ್ರಕರಣದ ಮೇಲೆ ಭಾರೀ ಕುತೂಹಲದ ಕಣ್ಣಿತ್ತು. ಏಳು ನ್ಯಾಯಾಧೀಶರ ತಂಡ ಬುಧವಾರ ನೀಡಿದ ತೀರ್ಪಿನ ಬಗ್ಗೆ ಆಂಬರ್ ಹರ್ಡ್ ನಿರಾಸೆ ವ್ಯಕ್ತಪಡಿಸಿದ್ದು, ಇದು ಮಹಿಳೆಯರಿಗೆ ಹಿನ್ನಡೆ ಎಂದು ಬಣ್ಣಿಸಿದ್ದಾರೆ.
'ಇವತ್ತು ವರ್ಣಿಸಲು ಸಾಧ್ಯವಿಲ್ಲದಷ್ಟು ನಿರಾಸೆ ಆಗಿದೆ. ಇಷ್ಟೊಂದು ಸಾಕ್ಷ್ಯಾಧಾರಗಳು ಇದ್ದರೂ ನನ್ನ ಮಾಜಿ ಪತಿಯ ಪ್ರಭಾವ, ಅಧಿಕಾರದ ಮುಂದೆ ಏನೂ ಮಾಡಲಾಗಲಿಲ್ಲವಲ್ಲ ಎಂದು ನೋವಾಗುತ್ತಿದೆ' ಎಂದು ಆಂಬರ್ ಹರ್ಡ್ ಹೇಳಿಕೆಯೊಂದರಲ್ಲಿ ತಿಳಿಸಿದ್ಧಾರೆ.
'ಈ ತೀರ್ಪು ಬೇರೆ ಮಹಿಳೆಯರಿಗೆ ಎಂಥ ಸಂದೇಶ ನೀಡುತ್ತದೆ ಎಂಬುದು ನೆನೆದು ಇನ್ನೂ ನಿರಾಶೆಯಾಗಿದೆ. ಇದು ಹಿನ್ನಡೆಯೇ. ಮಹಿಳೆ ವಿರುದ್ಧದ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಬೇಕೋ ಬೇಡವೋ ಎಂಬ ಸಂದಿಗ್ಧತೆ ಗಟ್ಟಿಯಾಗಿಸಿದೆ' ಎಂದು ೩೬ ವರ್ಷದ ನಟಿ ಹೇಳಿದ್ದಾರೆ.
Johnny Depp won a defamation suit Wednesday against his former wife Amber Heard after a jury found that she had defamed Depp in saying that he had abused her over the course of their relationship.Depp, who was not in court Wednesday due to a previously scheduled work commitment, sued for $50 million in damages over a 2018 opinion-editorial essay by Heard in The Washington Post, in which she said she had become a “public figure representing domestic abuse.”
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm