ಬ್ರೇಕಿಂಗ್ ನ್ಯೂಸ್
14-06-22 10:10 pm HK News Desk ದೇಶ - ವಿದೇಶ
ಮುಂಬೈ, ಜೂನ್ 14 : ಐಪಿಎಲ್ ಮುಂದಿನ ಅವಧಿಯ ಪ್ರಸಾರದ ಹಕ್ಕನ್ನು ಬಿಸಿಸಿಐ ಹರಾಜು ಹಾಕಿದ್ದು, 2023-27ರ ವರೆಗಿನ ಐದು ವರ್ಷಗಳ ಮಾಧ್ಯಮ ಪ್ರಸಾರದ ಹಕ್ಕನ್ನು ಬರೋಬ್ಬರಿ 48,390 ಕೋಟಿ ರೂಪಾಯಿಗೆ ಬಿಕರಿ ಮಾಡಿದೆ. ಭಾರತ ಉಪಖಂಡದಲ್ಲಿ ಟಿವಿ ಪ್ರಸಾರದ ಹಕ್ಕನ್ನು ಡಿಸ್ನಿ ಸ್ಟಾರ್ ಕಂಪನಿಯು ಖರೀದಿಸಿದೆ.
2018ಕ್ಕೆ ಹೋಲಿಸಿದರೆ, ಪ್ರಸಾರದ ಹಕ್ಕಿನ ಮೊತ್ತವು ಈ ಬಾರಿ ಮೂರು ಪಟ್ಟು ಹೆಚ್ಚಾಗಿದೆ. 2018-22ರ ಅವಧಿಗೆ 16,347 ಕೋಟಿ ರೂಪಾಯಿಗೆ ಬಿಸಿಸಿಐ ಟಿವಿ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಕಂಪನಿಗೆ ಮಾರಿತ್ತು. ಈ ಬಾರಿ ಸ್ಟಾರ್ ಸ್ಪೋರ್ಟ್ಸ್ ಗುತ್ತಿಗೆಯಿಂದ ಹೊರಬಂದಿದ್ದು, ಡಿಸ್ನಿ ಸ್ಟಾರ್ ಹೊಸದಾಗಿ ಗುತ್ತಿಗೆಯನ್ನು ಪಡೆದಿದೆ. ಅದರಲ್ಲೂ ಈ ಬಾರಿ ಡಿಜಿಟಲ್ ಪ್ರಸಾರದ ರೇಟಿಂಗ್ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿದೆ. ಡಿಜಿಟಲ್ ಪ್ರಸಾರದ ಹಕ್ಕನ್ನು 23,758 ಕೋಟಿ ರೂಪಾಯಿಗೆ ವಯಕಾಂ 18 ಖರೀದಿಸಿದರೆ, ಟಿವಿ ಪ್ರಸಾರದ ಹಕ್ಕು 23,575 ಕೋಟಿ ರೂ.ಗೆ ಡಿಸ್ನಿ ಸ್ಟಾರ್ ಪಾಲಾಗಿದೆ. ಐದು ವರ್ಷಗಳಲ್ಲಿ ಒಟ್ಟು 410 ಕ್ರಿಕೆಟ್ ಮ್ಯಾಚ್ ನಡೆಯಲಿದ್ದು, ಪ್ರತೀ ಪಂದ್ಯಕ್ಕೆ 57.40 ಕೋಟಿ ರೂ.ನಂತೆ ಖರೀದಿ ಪ್ರಕ್ರಿಯೆ ನಡೆದಿದೆ.
ಕ್ರೀಡಾ ಜಗತ್ತಿನಲ್ಲಿ ಐಪಿಎಲ್ ಹೊಸ ಮೈಲಿಗಲ್ಲಿನತ್ತ ಹೊರಳಿದೆ. ಐಪಿಎಲ್ ಬೆಳವಣಿಗೆಯನ್ನು ಇವತ್ತು ಕೆಂಪಕ್ಷರಗಳಲ್ಲಿ ಬರೆದಿಡುವಂಥದ್ದು. ಯಾಕಂದ್ರೆ, ಐಪಿಎಲ್ ಕ್ರೀಡೆಯು ಜಗತ್ತಿನಲ್ಲಿಯೇ ಎರಡನೇ ಅತಿ ಹೆಚ್ಚು ಸಿರಿವಂತ ಕ್ರೀಡೆಯಾಗಿ ಮಾರ್ಪಟ್ಟಿದೆ. ಬ್ರಾಂಡ್ ಐಪಿಎಲ್ ಪ್ರಸಾರದ ಹಕ್ಕು ಈ ಬಾರಿ ಇ-ಹರಾಜಿನಲ್ಲಿ 48 ಸಾವಿರ ಕೋಟಿಗೆ ಸೇಲ್ ಆಗಿರುವುದು ದೊಡ್ಡ ಮೈಲಿಗಲ್ಲು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಮುಂಬೈನಲ್ಲಿ ಮೂರು ದಿನಗಳ ಕಾಲ ನಡೆದ ಹರಾಜಿನಲ್ಲಿ ಡಿಸ್ನಿ ಸ್ಟಾರ್ ಮತ್ತು ವಯಾಕಾಂ ಭಾರೀ ಪೈಪೋಟಿ ನೀಡುವಷ್ಟರ ಮಟ್ಟಿಗೆ ಹರಾಜಿಗಿಳಿದಿತ್ತು. ಹೀಗಾಗಿ ಪ್ರಸಾರದ ಹಕ್ಕಿನ ಮೌಲ್ಯವೂ ಹೆಚ್ಚಾಗಿದೆ. 2017ರಲ್ಲಿ ಡಿಜಿಟಲ್ ಪ್ರಸಾರದ ಹಕ್ಕನ್ನು ಫೇಸ್ಬುಕ್ ಕಂಪನಿ ಕೇವಲ 3900 ಕೋಟಿಗೆ ಪಡೆದಿತ್ತು. ಈ ಬಾರಿ ಡಿಜಿಟಲ್ ಪ್ರಸಾರದ ರೇಟಿಂಗ್ 12 ಪಟ್ಟು ಬೆಳವಣಿಗೆ ಆಗಿದ್ದು, ಅತಿ ಹೆಚ್ಚು ಮೌಲ್ಯಕ್ಕೆ ಸೇಲ್ ಆಗಿರುವುದು ವಿಶೇಷ.
ಭಾರತೀಯ ಉಪಖಂಡ ಹೊರತುಪಡಿಸಿ ಹೊರ ದೇಶಗಳಲ್ಲಿ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕನ್ನು ವಯಾಕಾಂ 18 ಮತ್ತು ಟೈಮ್ಸ್ ಇಂಟರ್ನೆಟ್ ಪಡೆದಿದೆ. ಆಸ್ಟ್ರೇಲಿಯಾ, ಯುಕೆ ಮತ್ತು ಸೌತ್ ಆಫ್ರಿಕಾದಲ್ಲಿ ವಯಾಕಾಂ 18 ಪ್ರಸಾರದ ಗುತ್ತಿಗೆ ಪಡೆದರೆ, ಗಲ್ಫ್ ಮತ್ತು ಉತ್ತರ ಆಫ್ರಿಕಾ ರಾಷ್ಟ್ರಗಳು ಹಾಗೂ ಅಮೆರಿಕದಲ್ಲಿ ಟೈಮ್ಸ್ ಇಂಟರ್ನೆಟ್ ಪ್ರಸಾರದ ಗುತ್ತಿಗೆ ಪಡೆದಿದೆ. ಈ ಬಾರಿ ಬಿಸಿಸಿಐ ನಾಲ್ಕು ಪ್ಯಾಕೇಜ್ ಮಾಡಿ ಪ್ರಸಾರದ ಹಕ್ಕನ್ನು ಹರಾಜಿಗಿಟ್ಟಿತ್ತು. ಪ್ಯಾಕೇಜ್ ಎಯಲ್ಲಿ ಭಾರತೀಯ ಉಪಖಂಡದ ಟಿವಿ ಪ್ರಸಾರದ ಹಕ್ಕನ್ನು ಪ್ರತಿ ಪಂದ್ಯಕ್ಕೆ 49 ಕೋಟಿ, ಪ್ಯಾಕೇಜ್ ಬಿಯಲ್ಲಿ ಭಾರತೀಯ ಉಪಖಂಡದಲ್ಲಿ ಡಿಜಿಟಲ್ ಹಕ್ಕನ್ನು ಪ್ರತಿ ಪಂದ್ಯಕ್ಕೆ 33 ಕೋಟಿ, ಪ್ಯಾಕೇಜ್ ಸಿಯಲ್ಲಿ ನಾನ್ ಎಕ್ಸ್ ಕ್ಲುಸಿವ್ 18 ಪಂದ್ಯಗಳ ಸೀಸನ್ ಪ್ರಸಾರದ ಹಕ್ಕನ್ನು ಪ್ರತೀ ಪಂದ್ಯಕ್ಕೆ 16 ಕೋಟಿ, ಪ್ಯಾಕೇಜ್ ಡಿಯಲ್ಲಿ ವಿದೇಶದಲ್ಲಿ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕನ್ನು ಪ್ರತೀ ಪಂದ್ಯಕ್ಕೆ ಮೂರು ಕೋಟಿ ರೂಪಾಯಿಗೆ ಹರಾಜಿಗಿಟ್ಟಿತ್ತು.
ಆದರೆ ಈ ಬಾರಿ ಬಿಸಿಸಿಐ 2017ರಂತೆ ಒಟ್ಟಾರೆ ಗುತ್ತಿಗೆ ವಹಿಸಿಕೊಳ್ಳಲು ಅವಕಾಶ ನೀಡಿರಲಿಲ್ಲ. ಕಳೆದ ಬಾರಿ ಸ್ಟಾರ್ ಇಂಡಿಯಾ 16,347 ಕೋಟಿಗೆ ಒಟ್ಟು ಟಿವಿ ಪ್ರಸಾರದ ಹಕ್ಕನ್ನು ಗುತ್ತಿಗೆ ಪಡೆದಿದ್ದರೆ, ಫೇಸ್ಬುಕ್ ಕಂಪನಿಯು ಡಿಜಿಟಲ್ ಹಕ್ಕನ್ನು ಕೇವಲ 3900 ಕೋಟಿಗೆ ಪಡೆದಿತ್ತು. ಡಿಜಿಟಲ್ ಹಕ್ಕಿನ ಮೇಲೆ ಫೇಸ್ಬುಕ್ಕಿನದ್ದೇ ಅತಿ ಹೆಚ್ಚು ಬಿಡ್ಡಿಂಗ್ ಆಗಿತ್ತು. ಈ ಬಾರಿ ಪ್ಯಾಕೇಜ್ ಎಯನ್ನು ಗುತ್ತಿಗೆ ಪಡೆದವರಿಗೆ ಮಾತ್ರ ಪ್ಯಾಕೇಜ್ ಬಿ ಮೇಲೆ ಬಿಡ್ ಹಾಕಲು ಅನುಮತಿಯಿತ್ತು. ಎ ಮತ್ತು ಬಿ ಪ್ಯಾಕೇಜ್ ಗೆದ್ದವರಿಗೆ ಪ್ಯಾಕೇಜ್ ಸಿ ಮೇಲೆ ಬಿಡ್ ಮಾಡಲು ಅವಕಾಶ ನೀಡಲಾಗಿತ್ತು. ಹಾಗಾಗಿ, ಬಿಡ್ಡಿಂಗ್ ದರ ಭಾರೀ ಏರಿಕೆಯಾಗಿತ್ತು. ಪ್ರಸಾರ ಮಾಧ್ಯಮದ ಜಾಗತಿಕ ದಿಗ್ಗಜ ಕಂಪನಿಗಳು ಭಾಗವಹಿಸಿದ್ದವು. ಹೀಗಾಗಿ ಮಾರುಕಟ್ಟೆ ಬೆಲೆಯೂ ಭಾರೀ ಏರಿಕೆ ಕಂಡಿತ್ತು. ಇದರಿಂದ ಬಿಸಿಸಿಐ ಭರಪೂರ ಲಾಭ ಮಾಡಿಕೊಂಡಿದೆ.
The Board of Control for Cricket in India announced on Tuesday it has sold the broadcast rights of the IPL for the next five seasons to global media giants for an eye-popping Rs 48,390 crore ($6.2 billion).Star, owned by US behemoth Disney, bought the TV rights while Viacom18 – a joint venture between Indian tycoon Mukesh Ambani’s Reliance and US group Paramount Global – picked up the streaming rights, the BCCI said.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm