ಯೋಧನಿಂದಲೇ ಇಬ್ಬರು ಅಧಿಕಾರಿಗಳ ಹತ್ಯೆ ! 

27-06-22 08:04 pm       HK News Desk   ದೇಶ - ವಿದೇಶ

ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯಲ್ಲಿ ಸೋಮವಾರ ನಡೆದ ಗುಂಡಿನ ದಾಳಿನ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಹತ್ಯೆಗೀಡಾಗಿದ್ದಾರೆ.

ಚಂಡೀಗಢ, ಜೂ 27: ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯಲ್ಲಿ ಸೋಮವಾರ ನಡೆದ ಗುಂಡಿನ ದಾಳಿನ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಹತ್ಯೆಗೀಡಾಗಿದ್ದಾರೆ.

ಭಾರತೀಯ ಸೇನೆಗೆ ಸೇರಿರುವ ಯೋಧನಿಂದಲೇ ಇಬ್ಬರು ಅಧಿಕಾರಿಗಳ ಹತ್ಯೆಯಾಗಿದೆ. ತನ್ನ ಇಬ್ಬರು ಸಹೋದ್ಯೋಗಿಗಳನ್ನು ಯೋಧ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಈ ಸೇನಾ ಸಿಬ್ಬಂದಿ ಅವರು ಮಿರ್ಥಲ್ ಕಂಟೋನ್ಮೆಂಟ್‌ನಲ್ಲಿದ್ದರು.

ಮೃತ ಸಶಸ್ತ್ರ ಪಡೆಗಳ ಇಬ್ಬರು ಅಧಿಕಾರಿಗಳು ಮಲಗಿ ನಿದ್ರಿಸುತ್ತಿದ್ದ ವೇಳೆಯಲ್ಲಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಲೆಗೆ ಕಾರಣಗಳು ಇನ್ನೂ ಬಹಿರಂಗವಾಗಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ

An Army jawan reportedly opened indiscriminate firing killing his two colleagues at Mirthal cantonment in Punjab's Pathankot district in the wee hours of Monday.
According to police reports, Lokesh gunned down Havaldar Gauri Shankar and Havaldar Surya Kant at around 2.30am.