ಬ್ರೇಕಿಂಗ್ ನ್ಯೂಸ್
02-08-22 04:01 pm Mangalore Correspondent ದೇಶ - ವಿದೇಶ
ಕೇರಳ, ಆಗಸ್ಟ್ 2; ಕೇರಳದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ರಾಜ್ಯದ ವಿವಿಧ ಪ್ರದೇಶಗಳಲ್ಲಿ ನದಿ ಉಕ್ಕಿ ಹರಿದಿದೆ. ಹಲವೆಡೆ ಭೂಕುಸಿತವುಂಟಾಗಿದ್ದು ಭಾರತೀಯಯ ಹವಾಮಾನ ಇಲಾಖೆ (IMD) ಮಂಗಳವಾರ 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಕಾಸರಗೋಡಿನಲ್ಲಿ ಆಗಸ್ಟ್ 2 ಮತ್ತು 3ರಂದು ಆರೆಂಜ್ ಅಲರ್ಟ್ ಘೋಷಿಸಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಆಗಸ್ಟ್ 5ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ವಿವಿಧ ಜಿಲ್ಲೆ ಮತ್ತು ಪ್ರವಾಸಿ ತಾಣಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇಡುಕ್ಕಿಯ ಹೈರೇಂಜ್ ಪ್ರದೇಶಗಳಲ್ಲಿರುವ ಪ್ರವಾಸಿ ತಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ, ರಾಜ್ಯದಾದ್ಯಂತ 757 ಮಂದಿಯನ್ನು ಸಂತ್ರಸ್ತರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಇಂದು ಆಲಪ್ಪುಳ, ಕೋಟ್ಟಯಂ, ಇಡುಕ್ಕಿ, ಎರ್ನಾಕುಳಂ, ತ್ರಿಶ್ಶೂರ್, ಪಾಲಕ್ಕಾಡ್, ಮಲಪ್ಪುಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಕೇರಳ ಸರ್ಕಾರ ಟ್ವೀಟ್ ಮಾಡಿದೆ. ಮಂಗಳವಾರ 2 ವರ್ಷದ ಮಗು ಸೇರಿದಂತೆ ಮೂರು ಮಂದಿ ಮಳೆಯಿಂದಾಗಿ ಪ್ರಾಣಕಳೆದುಕೊಂಡಿದ್ದಾರೆ. ಕೋಟ್ಟಯಂನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಮಂಗಳವಾರ ಬೆಳಗ್ಗೆ ಕೋಟ್ಟಿಕ್ಕಲ್ ಚಪ್ಪತ್ ಪ್ರದೇಶದಲ್ಲಿ ಪತ್ತೆಯಾಗಿದೆ.
ತ್ರಿಶೂರ್ ಚಾಲಕ್ಕುಡಿ ನದಿ ನೀರಿನ ಮಟ್ಟ ಮಂಗಳವಾರ 5 ಮೀಟರ್ ಎತ್ತರಕ್ಕೆ ಏರಿದ್ದು, ನದಿ ಪ್ರದೇಶ, ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಪ್ರದೇಶಗಳಿಗೆ ಹೋಗುವಂತೆ ಜಿಲ್ಲಾಡಳಿತ ಸಲಹೆ ನೀಡಿದೆ.
ಕೇರಳದ ಏಳು ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಶೀಘ್ರದಲ್ಲೇ ಮಲಂಬುಳ ಡ್ಯಾಮ್ ಮತ್ತು ಪೊತುಂಡಿ ಡ್ಯಾಂ ತೆರೆಯಲಾಗುವುದು.
The India Meteorological Department (IMD) has issued red alert for 10 districts in Kerala for Tuesday. IMD has also issued a red alert in the same 10 districts for August 3 also as incessant rain continues to lash the southern state with reports of landslides and rising river water levels in some parts.
The red alert is issued in all the districts of the state barring Thiruvananthapuram, Kollam, Pathanamthitta and Kasaragod, where Orange alerts have been issued for August 2 and 3, according to an IMD district rainfall forecast issued for Kerala at 10am on Tuesday.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am