ಬ್ರೇಕಿಂಗ್ ನ್ಯೂಸ್
21-09-22 10:06 pm HK News Desk ದೇಶ - ವಿದೇಶ
ನವದೆಹಲಿ, ಸೆ.21: ಹಿಜಾಬ್ ಕುರಿತ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ 9ನೇ ದಿನಕ್ಕೆ ಕಾಲಿಟ್ಟಿದ್ದು, ಕರ್ನಾಟಕ ಸರಕಾರದ ಪರವಾಗಿ ರಾಜ್ಯದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಬುಧವಾರ ವಾದ ಮಂಡಿಸಿದ್ದಾರೆ. ಹಿಜಾಬ್ ಧಾರಣೆ ಎನ್ನುವುದು ಮೂಲಭೂತ ಹಕ್ಕಿನ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹಾಗಾಗಿ ಸಂವಿಧಾನದ ಕಲಂ 25ರ ಧಾರ್ಮಿಕ ಸ್ವಾತಂತ್ರ್ಯದಡಿ ಹಿಜಾಬ್ ಧಾರಣೆ ಬರುವುದಿಲ್ಲ ಎಂದು ವಾದಿಸಿದ್ದಾರೆ.
ಸಂವಿಧಾನದ ಆರ್ಟಿಕಲ್ 25ರಡಿ ಎಲ್ಲ ಧಾರ್ಮಿಕ ಆಚರಣೆಗಳನ್ನು ಮೂಲಭೂತ ಹಕ್ಕೆಂದು ಹೇಳಿಲ್ಲ. ಎಲ್ಲ ರೀತಿಯ ಧಾರ್ಮಿಕ ಆಚರಣೆಯನ್ನು ಧಾರ್ಮಿಕ ಹಕ್ಕೆಂದು ಪರಿಗಣಿಸಲಾಗಿಲ್ಲ ಎಂದು ಹೇಳಿದ ನಾವದಗಿ, ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದರು. ತ್ರಿವಳಿ ತಲಾಖ್ ಮತ್ತು ಗೋಹತ್ಯೆ ವಿಚಾರವನ್ನು ಇಸ್ಲಾಮಿನ ಧಾರ್ಮಿಕ ಆಚರಣೆಯೆಂದು ಪರಿಗಣಿಸಿಲ್ಲ. ಇದೀಗ ಹಿಜಾಬ್ ಧಾರಣೆಯು ಅತ್ಯಗತ್ಯ ಧಾರ್ಮಿಕ ಆಚರಣೆಯೆಂದು ಸಾಬೀತು ಮಾಡಬೇಕಿದೆ. ಆಗಮಾತ್ರ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದಡಿ ರಕ್ಷಣೆ ಲಭ್ಯವಾಗುತ್ತದೆ ಎಂದು ಹೇಳಿದರು.
ಹಿಜಾಬ್ ಧಾರಣೆಯು ಮೂಲಭೂತ ಹಕ್ಕಿನಡಿ ಬರುವುದಿಲ್ಲವಾದ್ದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಯೊಳಗೆ ಹಿಜಾಬ್ ನಿಷೇಧ ಮಾಡಿದ್ದು ಸರಿಯಾಗಿಯೇ ಇದೆ. ಶಾಲೆ, ಕಾಲೇಜುಗಳಲ್ಲಿ ಸರಕಾರ ಹಿಜಾಬ್ ನಿಷೇಧಿಸಿರುವುದನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕರ್ನಾಟಕ ಸರಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮೂಡಿಸುವ ಉದ್ದೇಶದಿಂದ ಸಮವಸ್ತ್ರ ನೀತಿ ಜಾರಿಗೆ ತಂದಿದ್ದು ತರಗತಿಯೊಳಗೆ ಮಾತ್ರ ಹಿಜಾಬ್ ನಿಷೇಧ ಮಾಡಿದೆ. ಶಾಲೆ ಆವರಣ ಅಥವಾ ಕಾಲೇಜು ಆವರಣಕ್ಕೆ ಹಿಜಾಬ್ ಧರಿಸಿ ಬರಬಹುದು. ಕೇವಲ ತರಗತಿಯ ಒಳಗೆ ಮಾತ್ರ ಹಿಜಾಬ್ ಧರಿಸುವಂತಿಲ್ಲ ಎಂದು ಹೇಳಿರುವುದು. ಇದರಲ್ಲಿ ತಪ್ಪೆಂದು ಕಂಡುಬರುವುದಿಲ್ಲ. ಎಲ್ಲರೂ ಸಮಾನರು ಅನ್ನುವ ದೃಷ್ಟಿಯಿಂದ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.
The Supreme Court on Wednesday asked the counsel appearing for the petitioners in the Karnataka hijab ban controversy to wrap up their rebuttal arguments within an hour tomorrow, saying “we are losing our patience". The apex court, which heard submissions in the matter for the ninth day, said it would give just one hour to the lawyers for the petitioners to conclude their arguments on Thursday. “We will give one hour time to all of you. You finish that. Now, it is an overdose of hearing," a bench of Justices Hemant Gupta and Sudhanshu Dhulia told senior advocate Huzefa Ahmadi.
18-10-25 09:11 pm
HK News Desk
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
ಆರೆಸ್ಸೆಸ್ ಚಟುವಟಿಕೆ ಕಡಿವಾಣಕ್ಕೆ ಕೌಂಟರ್ ; ಸಾರ್ವಜ...
17-10-25 05:27 pm
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಬ್ರೇಕ...
16-10-25 09:04 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
18-10-25 07:26 pm
Mangalore Correspondent
Ullal, Someshwara, Pillar: ಸೋಮೇಶ್ವರ ಪಿಲಾರಿನಲ್...
17-10-25 09:36 pm
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
ಪ್ರಿಯಾಂಕ ಖರ್ಗೆ ಮಾತು ಸರಿಯಾಗಿಯೇ ಇದೆ, ಸಮಾಜದಲ್ಲಿ...
16-10-25 05:09 pm
18-10-25 03:48 pm
Mangalore Correspondent
Fake Gold Scam, Belthangady Anugraha Society:...
18-10-25 03:27 pm
Illegal Arms Case, Mahesh Shetty Timarodi: ಅಕ...
18-10-25 01:52 pm
ಪ್ರೀತಿ ನಿರಾಕರಿಸಿದ ಕಾಲೇಜು ಯುವತಿಯನ್ನು ನಡುರಸ್ತೆಯ...
17-10-25 03:27 pm
Vitla Honeytrap case, Police, Mangalore: ಬಶೀರ...
17-10-25 03:23 pm