ಬ್ರೇಕಿಂಗ್ ನ್ಯೂಸ್
04-10-22 05:24 pm HK News Desk ದೇಶ - ವಿದೇಶ
ಶ್ರೀನಗರ, ಅ.4: ಜಮ್ಮು ಕಾಶ್ಮೀರದಲ್ಲಿ ಬಂಧೀಖಾನೆ ಇಲಾಖೆಯ ಡಿಜಿಪಿ ಆಗಿದ್ದ ಹೇಮಂತ್ ಕುಮಾರ್ ಲೋಹಿಯಾ ಎಂಬ ಐಪಿಎಸ್ ಅಧಿಕಾರಿಯನ್ನು ಅವರ ಮನೆಯಲ್ಲೇ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಮನೆಯ ಹೊರಭಾಗದಲ್ಲಿ ಅಂಗರಕ್ಷಕರು ಇರುವಂತೆಯೇ ಮನೆಯ ಒಳಗೆ ಕೆಲಸದಾಳುವೇ ಈ ಕೃತ್ಯ ಎಸಗಿದ್ದಾನೆ ಎನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ.
ಮನೆಯಲ್ಲಿ ಕೆಲಸದಾಳು ಆಗಿದ್ದ ಜಾಸಿರ್ ಎಂಬಾತ ಹಂತಕನಾಗಿದ್ದು, ಮನೆಯ ಒಳಗೆ ಎಣ್ಣೆಯನ್ನು ಬೀಳಿಸಿ ಜಾರಿ ಬಿದ್ದ 57 ವರ್ಷದ ಡಿಜಿಪಿ ದರ್ಜೆಯ ಅಧಿಕಾರಿ ಹೇಮಂತ್ ಕುಮಾರ್ ಲೋಹಿಯಾ ಅವರನ್ನು ಮೊದಲಿಗೆ ಕತ್ತು ಹಿಸುಕಿ ಉಸಿರುಕಟ್ಟಿಸಿ ಕೊಲೆ ಮಾಡಿದ್ದು, ಬಳಿಕ ಬಾಟಲನ್ನು ಒಡೆದು ಅದರ ಚೂರಿನಲ್ಲಿ ಕತ್ತನ್ನು ಸೀಳಿದ್ದಾನೆ. ಆನಂತರ, ಮೈಗೆ ಬೆಂಕಿ ಹಚ್ಚಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಕೆಲಹೊತ್ತಿನಲ್ಲಿ ಮನೆಯ ಒಳಗಿಂದ ಬೆಂಕಿ ಬರುತ್ತಿರುವುದನ್ನು ಕಂಡು ಹೊರಗಿದ್ದ ಅಂಗರಕ್ಷಕರು ಬಾಗಿಲು ತೆಗೆಯಲು ನೋಡಿದ್ದಾರೆ. ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಬಳಿಕ ಒಡೆದು ನೋಡಿದಾಗ ಡಿಜಿಪಿಯನ್ನು ಕೊಲೆ ಮಾಡಲಾಗಿತ್ತು. ಅರೆ ಬರೆ ಸುಟ್ಟ ರೀತಿಯಲ್ಲಿ ಹೇಮಂತ್ ಕುಮಾರ್ ಅವರ ಶವ ಪತ್ತೆಯಾಗಿದೆ. ಹತ್ಯೆ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆರೋಪಿ ಜಾಸಿರ್ ಕೃತ್ಯದ ಬಳಿಕ ಓಡಿ ಹೋಗುತ್ತಿರುವುದು ಕಂಡುಬಂದಿದೆ.

ಗೃಹ ಸಚಿವರಿಗೆ ಗಿಫ್ಟ್ ಎಂದ ಉಗ್ರರು
ಇದೇ ವೇಳೆ, ಲಷ್ಕರ್ ಇ-ತೊಯ್ಬಾ ಸಂಘಟನೆಯ ಭಾರತೀಯ ಘಟಕ ಪೀಪಲ್ಸ್ ಏಂಟಿ ಫಾಸಿಸ್ಟ್ ಫೋರ್ಸ್ (ಪಿಎಎಫ್ಎಫ್) ಕೃತ್ಯವನ್ನು ತಾನೇ ಮಾಡಿದ್ದಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇದು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಗೃಹ ಸಚಿವ ಅಮಿತ್ ಷಾಗೆ ನೀಡುತ್ತಿರುವ ಸಣ್ಣ ಗಿಫ್ಟ್. ನಮ್ಮ ಸಂಘಟನೆಯ ಗುಪ್ತಚರ ತಂಡ ಈ ಕೃತ್ಯ ಎಸಗಿದೆ. ಇತ್ತೀಚೆಗೆ ಸ್ಥಳೀಯರಲ್ಲದ ವ್ಯಕ್ತಿಗಳ ಮೇಲೆ ನಡೆಸುತ್ತಿರುವ ದಾಳಿಗಳನ್ನೂ ತಮ್ಮದೇ ಸಂಘಟನೆ ಮಾಡುತ್ತಿದೆ. ಇಂಥ ಪ್ರತಿ ದಾಳಿ ಯಾವುದೇ ಸಂದರ್ಭದಲ್ಲಿ ಯಾವುದೇ ಹೈ ಪ್ರೊಫೈಲ್ ವ್ಯಕ್ತಿಗಳ ಮೇಲೂ ಆಗಬಹುದು ಎಂದು ಹೇಳಿಕೆ ನೀಡಿದೆ.
ಯಾಸಿರ್ ಜಮ್ಮು ಕಾಶ್ಮೀರದ ರಾಮಬನ್ ಜಿಲ್ಲೆಯ ನಿವಾಸಿಯಾಗಿದ್ದು, ಆರು ತಿಂಗಳ ಹಿಂದೆ ಡಿಜಿಪಿ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಪ್ರಾಥಮಿಕ ಮಾಹಿತಿಯಲ್ಲಿ ಯಾವುದೇ ಉಗ್ರವಾದಿ ಕೃತ್ಯ ಎಂದು ಕಂಡುಬಂದಿಲ್ಲ. ಆರೋಪಿಯ ಮಾನಸಿಕ ಸ್ಥಿತಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಜಮ್ಮು ಮತ್ತು ರಾಜೌರಿ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಕಡಿತ ಮಾಡಲಾಗಿದೆ ಎಂದು ಜಮ್ಮು ವಲಯ ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ್ದಾರೆ.
Lashkar-e-Taiba's Indian offshoot, the People's Anti-Fascist Force (PAFF), has claimed responsibility for the killing of Jammu and Kashmir DGP (Prisons Department) Hemant Kumar Lohia. Lohia, 57, was found dead at his home on the outskirts of Jammu on Monday, October 3. Police said his throat was slit and burn injuries were present on his body.Police said Lohia’s domestic help, identified as Yasir, is suspected as the main culprit. A manhunt has been launched for the suspect. Police sources said CCTV footage recovered from the crime scene shows the suspect running away shortly after the murder.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 01:09 pm
Mangalore Correspondent
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm