ಬ್ರೇಕಿಂಗ್ ನ್ಯೂಸ್
01-11-22 02:00 pm HK News Desk ದೇಶ - ವಿದೇಶ
ಅಹ್ಮದಾಬಾದ್, ನ.1: ಮೋರ್ಬಿ ತೂಗು ಸೇತುವೆ ಕುಸಿತದ ಸಂತ್ರಸ್ತರನ್ನು ಭೇಟಿ ಮಾಡಲು ಗುಜರಾತಿನ ಮೋರ್ಬಿಯ ಸಿವಿಲ್ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ತರಾತುರಿಯಲ್ಲಿ ಆಸ್ಪತ್ರೆ ಕಟ್ಟಡವನ್ನು ದುರಸ್ತಿ ಪಡಿಸುವ ಫೋಟೊ, ವಿಡಿಯೋಗಳನ್ನು ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳು ಟ್ವೀಟ್ ಮಾಡಿದ್ದು ನೇರವಾಗಿ ವಾಗ್ದಾಳಿ ನಡೆಸಿವೆ.
ಸಿವಿಲ್ ಆಸ್ಪತ್ರೆಗೆ ಬಣ್ಣ ಬಳಿಯುವ ಮತ್ತು ಟೈಲ್ಸ್ ಹಾಕುವ ಚಿತ್ರಗಳನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಬಂದಾಗ ಉತ್ತಮ ಚಿತ್ರಗಳು ಬರಬೇಕಲ್ಲಾ.. ಅದಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದೆ. ದುರಸ್ತಿ ಕಾರ್ಯವನ್ನು "ದುರಂತದ ಘಟನೆ" ಎಂದು ಕರೆದಿರುವ ಕಾಂಗ್ರೆಸ್, "ಅವರಿಗೆ ಇದರಿಂದ ನಾಚಿಕೆಯಾಗುವುದಿಲ್ಲ! ಅನೇಕ ಜನರು ಸತ್ತರೂ, ಅವರು ತಮ್ಮ ಪ್ರಚಾರ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ದೂಷಿಸಿದೆ.
ಮೋರ್ಬಿಯ ಸೇತುವೆ ದುರಂತದಲ್ಲಿ 141 ಮಂದಿ ಸಾವನ್ನಪ್ಪಿದ್ದಾರೆ. ನಿಜವಾದ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ಬಿಜೆಪಿಯವರು ಫೋಟೋಶೂಟ್ ಮಾಡುವ ಮೂಲಕ ಎಲ್ಲವನ್ನೂ ಮುಚ್ಚಿಡಬೇಕಾಗಿದೆ ಎಂದು ಆಪ್ ಆರೋಪಿಸಿದೆ. ಒಂದು ಕಡೆ ಮೋರ್ಬಿ ತೂಗು ಸೇತುವೆ ದುರಂತದಲ್ಲಿ ನೂರಾರು ಮಂದಿ ಸಾವಿನ ಮನೆ ಸೇರಿದ್ದಾರೆ. ಇನ್ನೊಂದು ಕಡೆಯಲ್ಲಿ ಪ್ರಧಾನಿ ಮೋದಿ ಭೇಟಿ ನೀಡುತ್ತಾರೆ ಎನ್ನುವ ಆತುರದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಅಲಂಕರಿಸಲಾಗುತ್ತಿದೆ. ಜನರ ಆರೋಗ್ಯಕ್ಕಿಂತ ಪ್ರಧಾನಿ ಮೋದಿ ಫೋಟೋಶೂಟ್ ಮುಖ್ಯವಾಯಿತೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಮೋರ್ಬಿ ಆಸ್ಪತ್ರೆಯಲ್ಲಿ ಪುನರ್ ನಿರ್ಮಾಣ ಹಾಗೂ ಸುಣ್ಣ ಬಣ್ಣ ಬಳೆಯುತ್ತಿರುವ ಫೋಟೋಗಳನ್ನು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಉಲ್ಲೇಖಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಗುಜರಾತ್ನ ಮೋರ್ಬಿಯ ಸಿವಿಲ್ ಆಸ್ಪತ್ರೆಯ ಗೋಡೆಗಳಿಗೆ ಬಣ್ಣವನ್ನು ಬಳಿಯಲಾಗುತ್ತಿದೆ. "ಮೋರ್ಬಿ ಸಿವಿಲ್ ಆಸ್ಪತ್ರೆಗೆ ರಾತ್ರೋರಾತ್ರಿ ಬಣ್ಣ ಬಳಿಯಲಾಗುತ್ತಿದೆ, ಆದ್ದರಿಂದ ನಾಳೆ ಪ್ರಧಾನಿ ಮೋದಿಯವರ ಫೋಟೋಶೂಟ್ ಸಮಯದಲ್ಲಿ ಕಟ್ಟಡದ ಕಳಪೆ ಸ್ಥಿತಿಯು ಬಹಿರಂಗಗೊಳ್ಳುವುದಿಲ್ಲ" ಎಂದು ಎಎಪಿ ಹಿಂದಿಯಲ್ಲಿ ಹೇಳಿದೆ.
मोरबी का सिविल अस्पताल 'शहंशाह' के स्वागत को तैयार है।
— Congress (@INCIndia) November 1, 2022
ये है गुजरात का मॉडल।
एक तरफ मौत का हाहाकार है, दूसरी तरफ 'राजा जी' का इवेंट रचा जा रहा है।
संवेदनाएं मर चुकी हैं। pic.twitter.com/V4wAShMXwj
The government hospital at Morbi has got a makeover ahead of Prime Minister Narendra Modi's visit to the facility to meet those injured in Sunday's suspension bridge collapse which claimed 135 lives. Workers were seen cleaning and painting a portion of the 300-bed hospital, which is a ground plus two-storey structure of three wings, ahead of Modi's visit later Tuesday.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm