ಹೆಚ್‌1ಬಿ ಫೆಡರಲ್‌ ಏಜೆನ್ಸಿ ವೀಸಾ ರದ್ದು - ಟ್ರಂಪ್ ಆದೇಶ

04-08-20 10:22 am       Headline Karnataka News Network   ದೇಶ - ವಿದೇಶ

ಆರ್ಥಿಕ ಹಿಂಜರಿತದ ಕಾರಣಕ್ಕೆ ಈ ಹಿಂದೆ ಹೆಚ್‌1ಬಿ ವೀಸಾ ರದ್ದು ಮಾಡಿ ಆದೇಶಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇದೀಗ  ಹೆಚ್‌1ಬಿ ಫೆಡರಲ್‌ ಏಜೆನ್ಸಿ ವೀಸಾವನ್ನೂ ರದ್ದು ಮಾಡುವ ಆದೇಶಕ್ಕೆ ಸಹಿಹಾಕಿದ್ದಾರೆ.

ವಾಷಿಂಗ್ಟನ್‌: ಆರ್ಥಿಕ ಹಿಂಜರಿತದ ಕಾರಣಕ್ಕೆ ಈ ಹಿಂದೆ ಹೆಚ್‌1ಬಿ ವೀಸಾ ರದ್ದು ಮಾಡಿ ಆದೇಶಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇದೀಗ  ಹೆಚ್‌1ಬಿ ಫೆಡರಲ್‌ ಏಜೆನ್ಸಿ ವೀಸಾವನ್ನೂ ರದ್ದು ಮಾಡುವ ಆದೇಶಕ್ಕೆ ಸಹಿಹಾಕಿದ್ದಾರೆ. ಈ ಮೂಲಕ ಪ್ರತ್ಯಕ್ಷವಾಗಿಯೇ ಲಕ್ಷಾಂತರ ಭಾರತೀಯ ಉದ್ಯೋಗಿಗಳ ಕೆಲಸಕ್ಕೆ ಕಂಟಕವಾಗಿದ್ದಾರೆ.‌

ಕೊರೋನಾ ಮತ್ತು ಆ ಕಾರಣದಿಂದ ಉಂಟಾದ ಲಾಕ್‌ಡೌನ್‌ಗೆ ಇಡೀ ವಿಶ್ವದ ಆರ್ಥಿಕತೆ ತತ್ತರಿಸಿ ಹೋಗಿದೆ. ಪರಿಣಾಮ ವಿಶ್ವದ ದೊಡ್ಡಣ್ಣ ಎಂದು ಕರೆಯಲಾಗುವ ಅಮೆರಿಕದಲ್ಲೂ ನಿರುದ್ಯೋಗದ ಸಮಸ್ಯೆ ತಲೆದೋರಿದೆ ಎಂದರೆ ಆರ್ಥಿಕತೆಯ ಮೇಲೆ ಕೊರೋನಾ ಉಂಟು ಮಾಡಿರುವ ಆಘಾತವನ್ನು ಊಹಿಸಬಹುದು. ಹೀಗಾಗಿ ಅಮೆರಿಕದ ಉದ್ಯೋಗವನ್ನು ಅಮೆರಿಕದ ಯುವಕರಿಗೆ ನೀಡುವ ಸಲುವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೆಚ್‌1ಬಿ ಫೆಡರಲ್‌ ಏಜೆನ್ಸಿ ವೀಸಾ ರದ್ದು ಮಾಡುವ ಆದೇಶಕ್ಕೆ ಸಹಿಹಾಕಿದ್ದಾರೆ.‌

ಟ್ರಂಪ್‌ ಆಡಳಿತ ಕಳೆದ ಜೂನ್ 23 ರಂದೇ ಎಚ್ -1 ಬಿ ವೀಸಾಗಳನ್ನು ರದ್ದು ಮಾಡಿ ಆದೇಶಿಸಿದ್ದರು. ಈ ಮೂಲಕ ಲಕ್ಷಾಂತರ ಭಾರತೀಯ ಟೆಕ್ಕಿಗಳು ಕೆಲಸ ಕಳೆದುಕೊಳ್ಳುವ ಬೀತಿಯನ್ನು ಈಗಲೂ ಎದುರಿಸುತ್ತಿದ್ದಾರೆ. ಕೊರೋನಾ ಕಾರಣಕ್ಕೆ ಭಾರತಕ್ಕೆ ವಾಪಾಸ್‌ ಆಗಿದ್ದವರು ಹೆಚ್‌1ಬಿ ವೀಸಾ ರದ್ದಾದ ಕಾರಣ ಅನಿವಾರ್ಯವಾಗಿ ಭಾರತದಲ್ಲೇ ಉಳಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಡೊನಾಲ್ಡ್‌ ಟ್ರಂಪ್ ಫೆಡರಲ್ ಏಜೆನ್ಸಿಗಳ ವೀಸಾವನ್ನು ರದ್ದು ಮಾಡಿರುವುದು, ಇದೀಗ ಮತ್ತಷ್ಟು ಭಾರತೀಯ ಉದ್ಯೋಗಿಗಳು ಅತಂತ್ರಕ್ಕೆ ಸಿಲುಕುವಂತೆ ಮಾಡಿದೆ.