ಬ್ರೇಕಿಂಗ್ ನ್ಯೂಸ್
14-02-23 04:41 pm HK News Desk ದೇಶ - ವಿದೇಶ
ಲಿಸ್ಬೆನ್, ಫೆ.14: ಪೋರ್ಚುಗಲ್ನಲ್ಲಿ 1950 ರಿಂದ 2022ರ ವರೆಗೆ ಕ್ಯಾಥೋಲಿಕ್ ಚರ್ಚ್ ಪಾದ್ರಿಗಳು ಸುಮಾರು 5,000 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆಸಿದ್ದಾರೆ ಎನ್ನುವ ವರದಿಯನ್ನು ತನಿಖಾ ಆಯೋಗ ಮುಂದಿಟ್ಟಿದೆ.
ಪಾದ್ರಿಗಳ ಲೈಂಗಿಕ ಕಿರುಕುಳದ ಬಗ್ಗೆ ಪೋರ್ಚುಗೀಸ್ ಕ್ಯಾಥೋಲಿಕ್ ಚರ್ಚ್ ಒಕ್ಕೂಟ ನೇಮಿಸಿದ್ದ ಸ್ವತಂತ್ರ ತನಿಖಾ ಆಯೋಗ ಲಿಸ್ಬೆನ್ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ಮಾಹಿತಿ ನೀಡಿದೆ. ಆಯೋಗವು ಕಳೆದ ಒಂದು ವರ್ಷದಲ್ಲಿ 500 ಸಂತ್ರಸ್ತೆಯರನ್ನು ಪತ್ತೆ ಹಚ್ಚಿ ಅವರ ಹೇಳಿಕೆಗಳನ್ನು ದಾಖಲಿಸಿದೆ. ಆಯೋಗದ ತನಿಖೆ ಪ್ರಕಾರ ಕ್ಯಾಥೋಲಿಕ್ ಚರ್ಚ್ ಪಾದ್ರಿಗಳು ಪೋರ್ಚುಗಲ್ನಲ್ಲಿ 1950 ರಿಂದ ಇಲ್ಲಿಯವರೆಗೆ ಸುಮಾರು 5000 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಕ್ಯಾಥೋಲಿಕ್ ಚರ್ಚ್ಗಳ ಪ್ರಾಬಲ್ಯ ಹೊಂದಿರುವ ಪೋರ್ಚುಗಲ್ನಲ್ಲಿ ಸಂತ್ರಸ್ತರು ಆರಂಭದಲ್ಲಿ ಹೇಳಿಕೆ ದಾಖಲಿಸಲು ಮುಂದೆ ಬಂದರಲಿಲ್ಲ. ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿಲ್ಲ. ಇದು ಭಯಾನಕ ಸಂಗತಿ ಎಂದು ಆಯೋಗ ಹೇಳಿದೆ.
ಮಕ್ಕಳ ಮಾನಸಿಕ ತಜ್ಞರೂ ಆಗಿರುವ ಸ್ವತಂತ್ರ ತನಿಖಾ ಆಯೋಗದ ಅಧ್ಯಕ್ಷ ಪೆಡ್ರೊ ಸ್ಟ್ರೆಚ್ಟ್ ಅವರು, ಕ್ಯಾಥೋಲಿಕ್ ಚರ್ಚ್ಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಕೇವಲ ಪೋರ್ಚುಗಲ್ಗೆ ಸಿಮೀತವಾಗಿಲ್ಲ. ಇದು ಕ್ಯಾಥೋಲಿಕ್ ಚರ್ಚ್ಗಳ ಪ್ರಭಾವ ಜಾಸ್ತಿ ಇರುವ ಜಗತ್ತಿನ ಇನ್ನೂ ಅನೇಕ ರಾಷ್ಟ್ರಗಳಲ್ಲಿ ಹೆಚ್ಚಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಸ್ವತಂತ್ರ ತನಿಖಾ ಆಯೋಗ ನೀಡಿರುವ ಈ ವರದಿ ಜಗತ್ತಿನ ಎಲ್ಲ ಕ್ಯಾಥೋಲಿಕ್ ಚರ್ಚ್ಗಳ ಮುಖ್ಯಸ್ಥರಾಗಿರುವ ಪೋಪ್ ಫ್ರಾನ್ಸಿಸ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
Catholic clergy in Portugal have abused nearly 5,000 children since 1950, an independent commission said on Monday after hearing hundreds of victims' accounts. Thousands of reports of paedophilia within the Catholic Church have surfaced around the world and Pope Francis is under pressure to tackle the scandal. The Portuguese inquiry, commissioned by the Church in the staunchly Catholic country, published its findings after hearing from more than 500 victims last year.
10-04-26 03:25 pm
HK News Desk
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
10-04-26 01:26 pm
HK News Desk
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
10-04-26 12:35 pm
Dinesh Kumar, Mangaluru
Besant Evening College, BPL Cricket: ಬೆಸೆಂಟ್...
07-04-26 01:22 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm