ಬ್ರೇಕಿಂಗ್ ನ್ಯೂಸ್
01-03-23 02:10 pm HK News Desk ದೇಶ - ವಿದೇಶ
ಟೆಂಪೆ, ಮಾ.1: ಪ್ರಯಾಣಿಕ ರೈಲು ಮತ್ತು ಸರಕು ಸಾಗಣೆ ರೈಲುಗಳ ನಡುವೆ ಗ್ರೀಸ್ನಲ್ಲಿ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಕನಿಷ್ಠ 32 ಮಂದಿ ಮೃತಪಟ್ಟಿದ್ದು, ಸುಮಾರು 85 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬುಧವಾರ ಬೆಳಗಿನ ಜಾವ ಈ ದುರ್ಘಟನೆ ನಡೆದಿದೆ.
ಟೆಂಪೆ ಪ್ರದೇಶದಲ್ಲಿ ಸಂಭವಿಸಿದ ದುರಂತದಲ್ಲಿ, ಎರಡೂ ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದ ರಭಸಕ್ಕೆ ಅನೇಕ ಬೋಗಿಗಳು ಹಳಿ ತಪ್ಪಿದ್ದು, ಕನಿಷ್ಠ ಮೂರು ಕೋಚ್ಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಅಪಘಾತ ಬಹಳ ಭೀಕರವಾಗಿದೆ. ಪ್ರಯಾಣಿಕ ರೈಲಿನ ಮುಂದಿನ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಅವುಗಳಲ್ಲಿ ಮೊದಲ ಎರಡು ಬೋಗಿಗಳು ಬಹುತೇಕ ಸಂಪೂರ್ಣ ನಾಶಗೊಂಡಿವೆ ಎಂದು ಥೆಸ್ಸಾಲಿ ಪ್ರದೇಶದ ಗವರ್ನರ್ ಕೊನ್ಸ್ಟಾಂಟಿನಸ್ ಅಗೋರಸ್ಟೊಸ್ ಸ್ಥಳೀಯ ಸುದ್ದಿ ಸಂಸ್ಥೆ ಸ್ಕೈ ಟಿವಿಗೆ ತಿಳಿಸಿದ್ದಾರೆ.
ಸುಮಾರು 250 ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ತೆಗೆಯಲಾಗಿದೆ. ರೈಲಿನಲ್ಲಿ ಅಂದಾಜು 350 ಮಂದಿ ಪ್ರಯಾಣಿಸುತ್ತಿದ್ದರು.
ನಜ್ಜುಗುಜ್ಜಾದ ರೈಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ. ಎರಡು ರೈಲುಗಳ ಅಪಘಾತದ ಭೀಕರತೆ ತೀವ್ರವಾಗಿದ್ದರಿಂದ ರಕ್ಷಣಾ ಕಾರ್ಯಗಳಿಗೆ ತೊಡಕು ಉಂಟಾಗಿದೆ ಎಂದು ಅಗ್ನಿಶಾಮಕ ವಿಭಾಗದ ವಕ್ತಾರ ವಸಿಲ್ಸ್ ವಾರ್ತಾಕೋಯಿಯಾನಿಸ್ ತಿಳಿಸಿದ್ದಾರೆ.
ಅಪಘಾತದ ನಂತರ ಬೆಂಕಿ ಅವಘಡ ಕೂಡ ಉಂಟಾಗಿದ್ದರಿಂದ, ದಟ್ಟನೆಯ ಹೊಗೆ ಆವರಿಸಿತ್ತು. ಛಿದ್ರಗೊಂಡ ಲೋಹದ ತುಂಡುಗಳನ್ನು ತೆರವುಗೊಳಿಸಿ, ಅವಶೇಷಗಳ ನಡುವಿನಿಂದ ಜನರನ್ನು ಹೊರಗೆ ತೆಗೆಯುವುದು ಸವಾಲಿನ ಕೆಲಸವಾಗಿತ್ತು. ಅವಶೇಷಗಳು ಮತ್ತು ರೈಲ್ವೆ ಬೋಗಿಗಳನ್ನು ತೆರವುಗೊಳಿಸಲು ಕ್ರೇನ್ಗಳನ್ನು ಬಳಸಲಾಗುತ್ತಿದೆ. ಅಪಘಾತದ ಸ್ಥಳದ ಸುತ್ತಲೂ ಅವಶೇಷಗಳು ಹರಡಿಕೊಂಡಿವೆ. ರಕ್ಷಣಾ ಕಾರ್ಯಾಚರಣೆಗೆ ಸೇನೆಯ ನೆರವನ್ನು ಕೂಡ ಕೇಳಲಾಗಿದೆ ಎಂದು ಗವರ್ನರ್ ಹೇಳಿದ್ದಾರೆ.
ಇಂಟರ್ಸಿಟಿ ಪ್ಯಾಸೆಂಜರ್ ರೈಲು ಅಥೆನ್ಸ್ನಿಂದ ಥೆಸ್ಸಾಲೊಂನಿಕಿ ಉತ್ತರ ನಗರಕ್ಕೆ ಪ್ರಯಾಣಿಸುತ್ತಿತ್ತು. ಅತಿ ವೇಗದಲ್ಲಿ ಸಾಗುತ್ತಿದ್ದ ರೈಲು, ಕೇಂದ್ರ ಗ್ರೀಸ್ನ ಲಾರಿಸ್ಸಾ ನಗರದ ಹೊರಗೆ ಸರಕು ಸಾಗಣೆ ರೈಲಿಗೆ ಅಪ್ಪಳಿಸಿದೆ. ಘರ್ಷಣೆಯಿಂದ ಕೆಲವೇ ಸೆಕೆಂಡುಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ತಪ್ಪಿಸಿಕೊಳ್ಳಲೂ ಅವಕಾಶವಿಲ್ಲದಂತೆ ಕೆಲವು ಅಗ್ನಿ ಜ್ವಾಲೆಯಲ್ಲಿ ಬೆಂದು ಸುಟ್ಟು ಹೋಗಿದ್ದಾರೆ. ಗಾಯಾಳುಗಳಲ್ಲಿ ಕೂಡ ಬಹುತೇಕರು ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ.
Two trains collided head-on in Greece killing at least 32 people and injuring 85 late on Tuesday night, the fire brigade said, but the cause of the deadliest rail crash in Greece in decades remained unclear.An intercity passenger train travelling from Athens to the northern city of Thessaloniki collided at high speed with a cargo train outside the city of Larissa in central Greece, said the governor of the Thessaly region.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm