ಬ್ರೇಕಿಂಗ್ ನ್ಯೂಸ್
15-03-23 01:54 pm HK News Desk ದೇಶ - ವಿದೇಶ
ಮುಂಬೈ, ಮಾ.15 : ಹೊಸದಾಗಿ ಪರಿಚಯಿಸಲಾದ ಸೆಮಿ-ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಿಸಿದ ಸುರೇಖಾ ಯಾದವ್ ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಕುರಿತು ಕೇಂದ್ರ ರೈಲ್ವೆ ಸಚಿವಾಲಯ ಮಾಹಿತಿ ನೀಡಿದ್ದು, ಸೋಮವಾರ ಮುಂಬೈನ ಸೊಲ್ಲಾಪುರ ನಿಲ್ದಾಣ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಸೆಮಿ ಹೈಸ್ಪೀಡ್ ರೈಲನ್ನು ಸುರೇಖಾ ಯಾದವ್ ಅವರು ಪೈಲಟ್ ಮಾಡಿದರು. ರೈಲು ಮಾರ್ಚ್ 13 ರಂದು ಸರಿಯಾದ ಸಮಯಕ್ಕೆ ಸೊಲ್ಲಾಪುರ ನಿಲ್ದಾಣದಿಂದ ಹೊರಟಿತು ಮತ್ತು ನಿಗದಿತ ಸಮಯಕ್ಕೆ ಆಗಮನಕ್ಕೆ ಐದು ನಿಮಿಷಗಳ ಮೊದಲು CSMT ತಲುಪಿತು ಎಂದು ಕೇಂದ್ರ ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
450-ಕಿಮೀ ದೂರದ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ, ಸುರೇಖಾ ಯಾದವ್ ಅವರನ್ನು CSMT ನಲ್ಲಿ ಪ್ಲಾಟ್‌ಫಾರ್ಮ್ ಸಂಖ್ಯೆ 8 ರಲ್ಲಿ ಸನ್ಮಾನಿಸಲಾಯಿತು. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, 'ವಂದೇ ಭಾರತ್ - ನಾರಿ ಶಕ್ತಿಯಿಂದ ನಡೆಸಲ್ಪಡುತ್ತಿದೆ. ಶ್ರೀಮತಿ ಸುರೇಖಾ ಯಾದವ್, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್" ಎಂದು ಟ್ವೀಟ್ ಮಾಡಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಆಗುವ ಮೂಲಕ ಸುರೇಖಾ ಯಾದವ್ ತಮ್ಮ ಕೇಂದ್ರ ರೈಲ್ವೆಯ ಹಿರಿಮೆಗೆ ಮತ್ತೊಂದು ಗರಿಯನ್ನು ಮೂಡಿಸಿಕೊಂಡಿದ್ದಾರೆ ಎಂದು ಕೇಂದ್ರ ರೈಲ್ವೆ ಹೇಳಿದೆ.
ವೇಗದ ರೈಲು, ಸುಧಾರಿತ ತಂತ್ರಜ್ಞಾನ: ಸುರೇಖಾ ಯಾದವ್ ;
ಅತ್ಯಾಧುನಿಕ ವಂದೇ ಭಾರತ್ ರೈಲು ಚಾಲನೆಯ ಮೊದಲ ಅನುಭವದ ಬಗ್ಗೆ ಸುರೇಖಾ ಯಾದವ್ ಅವರನ್ನು ಕೇಳಿದಾಗ, "ವಂದೇ ಭಾರತ್ ವೇಗದ ರೈಲು, ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ. ಆದ್ದರಿಂದ ಸಾಂಪ್ರದಾಯಿಕ ರೈಲುಗಳಿಗೆ ಹೋಲಿಸಿದರೆ ಹೆಚ್ಚು ಜಾಗರೂಕತೆಯ ಅಗತ್ಯವಿದೆ. ವಂದೇ ಭಾರತ್ ರೈಲನ್ನು ಚಲಾಯಿಸಲು ನೀಡಿದ ಅವಕಾಶಕ್ಕಾಗಿ ಅವರು ಕೃತಜ್ಞತೆ” ಎಂದು ಹೇಳಿದ್ದಾರೆ.
ಯಾರು ಈ ಸುರೇಖಾ ಯಾದವ್?
ಪಶ್ಚಿಮ ಮಹಾರಾಷ್ಟ್ರದ ಸತಾರಾ ಮೂಲದವರಾಗಿರುವ ಸುರೇಖಾ ಯಾದವ್ ಅವರು 1988 ರಲ್ಲಿ ಭಾರತದ ಮೊದಲ ಮಹಿಳಾ ರೈಲು ಚಾಲಕರಾದರು. ಇಲಾಖೆಯಲ್ಲಿ ಅವರು ಸಲ್ಲಿಸಿರುವ ಸೇವೆ ಮತ್ತು ಸಾಧನೆಗಾಗಿ ಈವರೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವರು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸುರೇಖಾ ಅವರು ಸೆಂಟ್ರಲ್ ರೈಲ್ವೆಗೆ ಸೇರುವ ಮೊದಲು ಎಲೆಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಪಡೆದಿದ್ದರು. ವಂದೇ ಭಾರತ್ ರೈಲಿನಲ್ಲಿ ಚಾಲಕರಾಗಿ ನಿಯೋಜನೆಗೊಳ್ಳುವ ಮೊದಲು, ಅವರು ಫೆಬ್ರವರಿ 2023 ರಲ್ಲಿ ರೈಲ್ವೇ ಇನ್ಸಿಟ್ಯೂಟ್ ವಡೋದರಾದಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ.
ಸಿಎಸ್‌ಎಂಟಿ-ಸೋಲಾಪುರ ಮತ್ತು ಸಿಎಸ್‌ಎಂಟಿ-ಸಾಯಿನಗರ ಶಿರಡಿ ಮಾರ್ಗಗಳಲ್ಲಿ ಕೇಂದ್ರ ರೈಲ್ವೇ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಿದೆ, ಇವುಗಳಿಗೆ ಫೆಬ್ರವರಿ 10, 2023 ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದರು.
ರೈಲ್ವೆ ಅಧಿಕಾರಿಗಳ ಪ್ರಕಾರ, ಹೊಸ ಮಾರ್ಗಗಳಲ್ಲಿ ಲೋಕೋ ಪೈಲಟಿಂಗ್ ಸಮಗ್ರ ಕಲಿಕೆಯನ್ನು ಒಳಗೊಂಡಿರುತ್ತದೆ ಮತ್ತು ರೈಲು ಪ್ರಯಾಣದ ಸಮಯದಲ್ಲಿ ಸಿಬ್ಬಂದಿ ಪ್ರತಿ ಕ್ಷಣವೂ ಜಾಗರೂಕರಾಗಿರಬೇಕು. "ಸಿಬ್ಬಂದಿ ಕಲಿಕೆಯ ಪ್ರಕ್ರಿಯೆಯು ಸಿಗ್ನಲ್ ಪಾಲನೆ, ಹೊಸ ಉಪಕರಣಗಳನ್ನು ಕೈಗೆತ್ತಿಕೊಳ್ಳುವುದು, ಇತರ ಸಿಬ್ಬಂದಿ ಸದಸ್ಯರೊಂದಿಗೆ ಸಮನ್ವಯತೆ, ರೈಲಿನ ಚಾಲನೆಗೆ ಎಲ್ಲಾ ನಿಯತಾಂಕಗಳನ್ನು ಪಾಲಿಸುವುದು" ಎಂದು ಪ್ರಕಟಣೆ ತಿಳಿಸಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಎರಡು ನಗರಗಳ ನಡುವಿನ ಸಂಪರ್ಕವನ್ನು ಸುಧಾರಿಸಿದೆ. ಸೋಲಾಪುರದ ಸಿದ್ಧೇಶ್ವರ, ಅಕ್ಕಲಕೋಟ, ತುಳಜಾಪುರ, ಸೋಲಾಪುರ ಸಮೀಪದ ಪಂಡರಾಪುರ ಮತ್ತು ಪುಣೆ ಜಿಲ್ಲೆಯ ಅಳಂದಿಯಂತಹ ಪ್ರಮುಖ ಯಾತ್ರಾ ಕೇಂದ್ರಗಳಿಗೆ ಪ್ರಯಾಣಿಸಲು ಅನುಕೂಲವಾಗಿಸಿದೆ.
Vande Bharat - powered by Nari Shakti.
— Ashwini Vaishnaw (@AshwiniVaishnaw) March 13, 2023
Smt. Surekha Yadav, the first woman loco pilot of Vande Bharat Express. pic.twitter.com/MqVjpgm4EO
Surekha Yadav, Asia’s first woman loco pilot has become the first female to operate the newly-introduced semi-high-speed Vande Bharat Express train. A native of Satara district in the western Maharashtra, Ms. Yadav piloted the Vande Bharat Express train between Solapur station and Chhatrapati Shivaji Maharaj Terminus (CSMT) in Mumbai on March 13, 2023 (Monday). The train reached the CSMT five minutes before the scheduled arrival time after completing a more than 450-km long journey. She was felicitated at platform number 8 at the CSMT.
23-03-23 11:31 am
Bangalore Correspondent
ಉರಿಗೌಡ- ನಂಜೇಗೌಡರ ಬಗ್ಗೆ ದಾಖಲೆ ಇದೆ, ಕಾಲ್ಪನಿಕ ಪಾ...
21-03-23 09:55 pm
ದೂರು ನೀಡಲು ಬಂದಿದ್ದ ಯುವತಿ ಜೊತೆಗೆ ಕೊಡಿಗೇಹಳ್ಳಿ ಠ...
21-03-23 09:36 pm
ಒಂದು ಕೋಟಿ ಲಂಚ ಆರೋಪ ; ಪ್ರಕರಣ ರದ್ದು ಕೋರಿ ಹೈಕೋರ್...
21-03-23 07:25 pm
ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎ...
21-03-23 02:18 pm
23-03-23 10:30 pm
HK News Desk
ಆರ್ಥಿಕ ಕುಸಿತಕ್ಕೆ ನಲುಗುತ್ತಿದೆ ಟೆಕ್ ಕಂಪನಿ 'ಆಕ್...
23-03-23 09:31 pm
ಪಾಕ್ ಗಡಿಭಾಗದಲ್ಲಿ ಶಾರದಾ ಮಂದಿರ ಮರು ಸ್ಥಾಪನೆ ; ಸ್...
22-03-23 10:00 pm
ದೆಹಲಿಯಲ್ಲಿ ಮೋದಿ ಹಠಾವೋ, ದೇಶ್ ಬಚಾವೋ ಪೋಸ್ಟರ್ ; ಪ...
22-03-23 02:53 pm
ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್...
22-03-23 12:28 pm
23-03-23 10:57 pm
Mangalore Correspondent
ಮಾ.25ರಂದು ಮೋರ್ಲ- ಬೋಳದಲ್ಲಿ ಲವ-ಕುಶ ಜೋಡುಕರೆ ಕಂಬಳ...
23-03-23 10:00 pm
ತಲೆ ಗಟ್ಟಿ ಇದೆಯೆಂದು ಗಡಾಯಿಕಲ್ಲಿಗೆ ತಾಗಿಸಿದರೆ ತಲೆ...
23-03-23 05:08 pm
ಕರಾವಳಿ, ಚಿಕ್ಕಮಗಳೂರು, ಹಾಸನದಲ್ಲಿ ಮಾ.23ರಿಂದಲೇ ರಂ...
22-03-23 10:31 pm
ಪೌರ ಕಾರ್ಮಿಕರ ಮುಷ್ಕರ ಹತ್ತನೇ ದಿನಕ್ಕೆ ; ಕಸದ ರಾಶಿ...
22-03-23 09:02 pm
23-03-23 04:18 pm
Mangalore Correspondent
ಪೊಲೀಸರಿಂದಲೇ ಕಿಡ್ನಾಪ್, 40 ಲಕ್ಷಕ್ಕೆ ಬೇಡಿಕೆ ; ಮಾ...
23-03-23 02:16 pm
ಮಿನಿ ಕಂಟೇನರ್ ನಲ್ಲಿ ಸಾಗಿಸುತ್ತಿದ್ದ 9 ಕೇಜಿ ಅಕ್ರಮ...
23-03-23 01:38 pm
ಐಶ್ವರ್ಯ ರಜನಿಕಾಂತ್ ಮನೆಯಲ್ಲಿ ಕಳ್ಳತನ ; 18 ವರ್ಷದಿ...
23-03-23 12:15 pm
ಬಸ್ ಚಾಲಕನಿಂದ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ...
22-03-23 06:46 pm