ಸಲ್ಮಾನ್ ಕೊಲ್ಲುವುದು ಜೀವನದ ಗುರಿ ; ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಬೆದರಿಕೆ 

18-03-23 09:46 pm       HK News Desk   ದೇಶ - ವಿದೇಶ

ಕುಖ್ಯಾತ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೊಮ್ಮೆ ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ. ತನ್ನ ಜೀವನದ ದೊಡ್ಡ ಗುರಿ ಸಲ್ಮಾನ್ ಖಾನ್​ನನ್ನು ಕೊಲ್ಲುವುದು ಎಂದು ಬಿಷ್ಣೋಯ್ ಹೇಳಿದ್ದಾನೆ. 

ಮುಂಬೈ, ಮಾ.18: ಕುಖ್ಯಾತ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೊಮ್ಮೆ ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ. ತನ್ನ ಜೀವನದ ದೊಡ್ಡ ಗುರಿ ಸಲ್ಮಾನ್ ಖಾನ್​ನನ್ನು ಕೊಲ್ಲುವುದು ಎಂದು ಬಿಷ್ಣೋಯ್ ಹೇಳಿದ್ದಾನೆ. 

ಬಿಷ್ಣೋಯ್ ಸಮುದಾಯ ಆರಾಧಿಸುವ ಕೃಷ್ಣಮೃಗವನ್ನು ಸಲ್ಮಾನ್ ಖಾನ್ ಬೇಟೆಯಾಡಿದ್ದು ಭಾರೀ ವಿವಾದಕ್ಕೆ ಒಳಗಾಗಿತ್ತು. ಈ ಬಗ್ಗೆ ಸಲ್ಮಾನ್ ಖಾನ್ ಬಹಿರಂಗ ಕ್ಷಮೆ ಕೇಳಬೇಕು, ಇಲ್ಲವಾದರೆ ಆತನನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. 

ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಬಿಕಾನೇರ್​ನ ನಮ್ಮ ದೇವಾಲಯಕ್ಕೆ ಹೋಗಿ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಇಲ್ಲದೇ ಇದ್ದರೆ ನನ್ನ ಗುರಿ ಸಲ್ಮಾನ್​ನನ್ನು ಕೊಲ್ಲುವುದು. ಸಲ್ಮಾನ್ ಸೆಕ್ಯುರಿಟಿ ತೆಗೆದರೆ ನಾನು ಕೊಲೆ ಮಾಡುತ್ತೇನೆ ಎಂದಿದ್ದಾನೆ.

ಸಲ್ಮಾನ್ ಖಾನ್ ಕ್ಷಮೆ ಕೇಳಿದರೆ ಅಲ್ಲಿಗೆ ವಿವಾದ ಮುಗಿಯುತ್ತದೆ. ಸಲ್ಮಾನ್ ದುರಹಂಕಾರಿ. ಮೂಸೆವಾಲ ಕೂಡಾ ಅದೇ ರೀತಿ ಇದ್ದ. ಸಲ್ಮಾನ್ ಖಾನ್ ಇಗೋ ಒಂದು ರೀತಿ ರಾವಣನಿಗಿಂತ ದೊಡ್ಡದು ಎಂದು ಬಿಷ್ಣೋಯ್ ಹೇಳಿದ್ದಾನೆ. ಕೃಷ್ಣ ಮೃಗವನ್ನು ಕೊಂದು ಸಲ್ಮಾನ್ ನಮ್ಮ ಸಮುದಾಯವನ್ನು ಅವಮಾನಿಸಿದ್ದಾನೆ. ಸಲ್ಮಾನ್ ವಿರುದ್ಧ ನಮ್ಮ ಸಮುದಾಯದ ಜನರಿಗೆ ಕೋಪವಿದೆ ಎಂದಿದ್ದಾನೆ ಕೆನಡಾದಲ್ಲಿ ನೆಲೆಸಿರುವ ಗ್ಯಾಂಗ್ ಸ್ಟರ್ ಬಿಷ್ಣೋಯ್.

A television channel today aired the second part of jailed gangster Lawrence Bishnoi’s interview even as the Punjab Police and central security agencies continue to be in the dark over the location where it was shot.