ಬ್ರೇಕಿಂಗ್ ನ್ಯೂಸ್
21-04-23 11:04 pm HK News Desk ದೇಶ - ವಿದೇಶ
ನವದೆಹಲಿ, ಎ.21: ಕೋರ್ಟ್ ಆವರಣದಲ್ಲಿಯೇ ಮಹಿಳೆಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಸಾಕೇತ್ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ವಕೀಲನ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಯೊಬ್ಬ ಮಹಿಳೆ ಮೇಲೆ ಗುಂಡು ಹಾರಿಸಿದ್ದಾನೆ.
ಕೋರ್ಟ್ ಆವರಣದಲ್ಲಿ ಮಹಿಳೆ ಮೇಲೆ ನಾಲ್ಕು ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿದ್ದು, ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋರ್ಟ್‌ನಲ್ಲಿ ಗುಂಡಿನ ದಾಳಿ ನಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೂಲಗಳ ಪ್ರಕಾರ ಆರೋಪಿಯು ಕ್ರಿಮಿನಲ್ ಹಿನ್ನೆಲೆಯವನಾಗಿದ್ದು ಪೂರ್ವ ದ್ವೇಷದಿಂದ ಕೃತ್ಯ ಎಸಗಿದ್ದಾನೆ.
ಹಣಕಾಸು ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹಿಳೆ, ಸಾಕೇತ ನ್ಯಾಯಾಲಯಕ್ಕೆ ತೆರಳಿದ್ದರು. ಆಗ ವಕೀಲನ ಸೋಗಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಬಂದೂಕಿನಿಂದ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಋತ್ಯ ದಿಲ್ಲಿಯ ದ್ವಾರಕಾದಲ್ಲಿ ಕೆಲವು ದಿನಗಳ ಹಿಂದಷ್ಟೇ ವಕೀಲರೊಬ್ಬರನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ದಾಳಿಕೋರರು ವಕೀಲರ ವೇಷದಲ್ಲಿ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಿದ್ದರು. ಕಳೆದ ವರ್ಷ ರೋಹಿಣಿ ಕೋರ್ಟ್ ರೂಂ ಒಳಗೆ ಗ್ಯಾಂಗ್‌ಸ್ಟರ್ ಜಿತೇಂದರ್ ಮಾನ್ ಅಲಿಯಾಸ್ ಗೋಗಿಯನ್ನು ಪೊಲೀಸರ ಸಮ್ಮುಖದಲ್ಲಿಯೇ ಗುಂಡು ಹಾರಿಸಿ ಕೊಲ್ಲಲಾಗಿತ್ತು. ವಕೀಲರ ದಿರಿಸಿನಲ್ಲಿ ಬಂದಿದ್ದ ಇಬ್ಬರು ಹಂತಕರು, ಸೆ.24ರಂದು ಗೋಗಿ ಮೇಲೆ ಹಲವು ಸುತ್ತು ಗುಂಡುಗಳನ್ನು ಹಾರಿಸಿದ್ದರು. ಪ್ರತಿದಾಳಿ ನಡೆಸಿದ್ದ ಪೊಲೀಸರು, ಇಬ್ಬರೂ ದಾಳಿಕೋರರನ್ನು ಸ್ಥಳದಲ್ಲಿಯೇ ಕೊಂದಿದ್ದರು.
A woman was injured after being shot inside a court complex in Delhi this morning, the police have said. She was immediately taken to the hospital by a police officer and the accused, who was dressed as a lawyer, has been arrested, they added. The accused has been identified as Kameshwar Singh, police said. The incident took place in the district court in Saket in south Delhi.
21-07-25 05:56 pm
HK News Desk
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm