ತ್ರಿವಳಿ ರೈಲು ದುರಂತ ; 40 ಜನರ ಸಾವಿಗೆ ವಿದ್ಯುತ್ ಶಾಕ್ ಕಾರಣ ! 

06-06-23 08:18 pm       HK News Desk   ದೇಶ - ವಿದೇಶ

ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತ ಸಂದರ್ಭದಲ್ಲಿ ಬೋಗಿಗಳಲ್ಲಿ ವಿದ್ಯುತ್ ಪ್ರವಹಿಸಿ 40 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. 

ಭುವನೇಶ್ವರ್, ಜೂನ್ 6: ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತ ಸಂದರ್ಭದಲ್ಲಿ ಬೋಗಿಗಳಲ್ಲಿ ವಿದ್ಯುತ್ ಪ್ರವಹಿಸಿ 40 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. 

ಅಪಘಾತದಲ್ಲಿ ಒಟ್ಟು 278 ಪ್ರಯಾಣಿಕರು ಮೃತಪಟ್ಟಿದ್ದಾರೆ. ಇವರಲ್ಲಿ 40 ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಈ ಕಾರಣದಿಂದ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿರಬೇಕೆಂದು ಶಂಕಿಸಲಾಗಿದೆ. 

No Injury Marks, Bleeding, Nearly 40 on Coromandel Train 'Electrocuted' |  What May Have Happened

Odisha Train Accident: Passengers died due to electrocution! There are no  marks of injury on 40 dead bodies, know what is the truth

ಬಾಲೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಈ ಕುರಿತು ಮಾಹಿತಿಗಳಿವೆ. ರೈಲು ಮಾರ್ಗದಲ್ಲಿನ ವಿದ್ಯುತ್‌ ತಂತಿಗಳು ಅಪಘಾತದ ನಂತರ ತುಂಡಾಗಿ ಬಿದ್ದವು. ಅವು ಕೆಲ ಬೋಗಿಗಳಿಗೆ ತಗುಲಿದ್ದರಿಂದ ಒಳಗೆ ಸಿಲುಕಿದ ಪ್ರಯಾಣಿಕರಿಗೆ ವಿದ್ಯುತ್ ಪ್ರವಹಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Odisha train accident: Coromandel Express accidentally entered loop line  and hit goods train, says preliminary probe | Mint

Hundreds dead in India train crash, the nation's worst rail disaster in  decades – Queen City News

ಕುಮಾರ ನಾಯಕ್ ಪ್ರತಿಕ್ರಿಯಿಸಿ, 'ರೈಲುಗಳ ಡಿಕ್ಕಿಯಿಂದ ಹಲವು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಇನ್ನೂ ಕೆಲವರು ರೈಲು ಹಳಿಗಳ ಮೇಲ್ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ತುಂಡಾಗಿ ಬೋಗಿಯ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಹೌರಾ-ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್‌, ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ ಮತ್ತು ಗೂಡ್ಸ್ ರೈಲುಗಳ ನಡುವೆ ಜೂನ್ 2ರಂದು ಸಂಜೆ 7.20ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ಇದರಲ್ಲಿ 278 ಪ್ರಯಾಣಿಕರು ಮೃತಪಟ್ಟು, ಸುಮಾರು 1200 ಜನರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ವಂಸಕ ಕೃತ್ಯ ನಡೆದಿದೆ ಎಂಬ ರೈಲ್ವೆ ಮಂಡಳಿಯ ಶಿಫಾರಸಿನ ಮೇಲೆ ಸಿಬಿಐ ತನಿಖೆ ಆರಂಭಿಸಿದೆ.

At least 40 passengers of the ill-fated Coromandel Express are said to be electrocuted by snapped overhead cables as they did not have any external injury. The cables reportedly snapped after the Yesvantpur-Howrah Express crashed into the derailed bogies of the Coromandel train in Odisha’s Balasore. The claim made by a police officer, who oversaw the rescue operation, matches with the FIR that states electrocution as the cause of several deaths after live overhead cable