Delhi Goa flight over delay, IndiGo Flight, New Delhi: ದೆಹಲಿ-ಗೋವಾ ಇಂಡಿಗೋ ವಿಮಾನ ಸಂಚಾರ ವಿಳಂಬ ; ರೊಚಿಗೆದ್ದ ಪ್ಯಾಸೆಂಜರ್ ನಿಂದ ಪೈಲಟ್ ಮೇಲೆ ಹಲ್ಲೆ, ವಿಡಿಯೋ ವೈರಲ್ 

15-01-24 01:06 pm       HK News Desk   ದೇಶ - ವಿದೇಶ

ವಿಮಾನ ನಿರ್ಗಮನ ವಿಳಂಬವಾಗಲಿದೆ ಎಂದು ಅನೌನ್ಸ್ ಮಾಡುತ್ತಿದ್ದ ಪೈಲಟ್ ಮೇಲೆ ಪ್ರಯಾಣಿಕ ಹಲ್ಲೆ ನಡೆಸಿದ ಘಟನೆ ಇಂಡಿಯೋ ವಿಮಾನದಲ್ಲಿ ನಡೆದಿದೆ.

ನವದೆಹಲಿ, ಜ.15: ವಿಮಾನ ನಿರ್ಗಮನ ವಿಳಂಬವಾಗಲಿದೆ ಎಂದು ಅನೌನ್ಸ್ ಮಾಡುತ್ತಿದ್ದ ಪೈಲಟ್ ಮೇಲೆ ಪ್ರಯಾಣಿಕ ಹಲ್ಲೆ ನಡೆಸಿದ ಘಟನೆ ಇಂಡಿಯೋ ವಿಮಾನದಲ್ಲಿ ನಡೆದಿದೆ.

ಪೈಲಟ್​ ಮೇಲೆ ಹಲ್ಲೆಗೈದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ದೆಹಲಿ-ಗೋವಾ ಇಂಡಿಯೋ ವಿಮಾನದಲ್ಲಿ (6E-2175) ಪೈಲಟ್​ ಅನುಪ್ ಕುಮಾರ್ ಹಲ್ಲೆಗೊಳಗಾದವರು. ಭಾನುವಾರ ಮಧ್ಯಾಹ್ನ 1 ಗಂಟೆಗೆ ವಿಮಾನ ಸಂಚಾರದಲ್ಲಿ ವಿಳಂಬ ಆಗಲಿದೆ ಎಂದು ಘೋಷಣೆ ಮಾಡುತ್ತಿದ್ದಂತೆ, ಕುಪಿತಗೊಂಡ ಪ್ರಯಾಣಿಕ ಹಿಂಬದಿ ಸೀಟಿನಿಂದ ಓಡಿಬಂದು ಪೈಲಟ್​ಗೆ ಥಳಿಸಿರುವುದು ವಿಡಿಯೋದಲ್ಲಿದೆ. ವಿಮಾನ ಸಿಬ್ಬಂದಿ ಪ್ರಯಾಣಿಕನನ್ನು ಸಮಾಧಾನಪಡಿಸಲು ಯತ್ನಿಸುತ್ತಿರುವುದು ಮತ್ತು ಇನ್ನುಳಿದ ಪ್ರಯಾಣಿಕರಿಗೆ ಬೆಲ್ಟ್ ಹಾಕಿಕೊಳ್ಳುವಂತೆ ಮನವಿ ಮಾಡಿರುವುದು ವಿಡಿಯೋದಲ್ಲಿದೆ.

ಘಟನೆಯ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಮಾನಯಾನ ಭದ್ರತಾ ಸಂಸ್ಥೆಯ ಗಮನಕ್ಕೆ ಬಂದಿದೆ. ಆ ಬಳಿಕ ಈ ಕುರಿತು ತನಿಖೆ ಕೈಗೊಳ್ಳಲಾಗಿದೆ. ಇಂಡಿಗೋ ಕೂಡ ಪ್ರಯಾಣಿಕನ ವಿರುದ್ಧ ದೂರು ದಾಖಲಿಸಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಚಾರ ವ್ಯತ್ಯಯ ಬಗ್ಗೆ ವಿಮಾನದಲ್ಲಿ ಪೈಲಟ್ ಹೇಳುತ್ತಿದ್ದಂತೆ ಪ್ರಯಾಣಿಕ ಓಡಿಬಂದು ಹೊಡೆದಿದ್ದಾನೆ ಎಂದು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾನುವಾರ ದಟ್ಟ ಮಂಜು ಆವರಿಸಿದ್ದರಿಂದ ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಕೆಲ ಗಂಟೆಗಳ ಕಾಲ ಹಲವು ವಿಮಾನ ಸಂಚಾರ ವಿಳಂಬವಾಗಿ ಗೊಂದಲ ಸೃಷ್ಟಿಯಾಗಿತ್ತು.

In a disturbing incident, a passenger aboard an IndiGo Airlines flight assaulted the pilot while he was announcing the flight's delay on Sunday. A video of the incident on the Delhi to Goa flight went viral on social media on Monday, in which an angry passenger in a yellow hoodie is seen running toward the pilot and slapping him.