ಬ್ರೇಕಿಂಗ್ ನ್ಯೂಸ್
07-01-25 06:32 pm HK News Desk ದೇಶ - ವಿದೇಶ
ಟಿಬೆಟ್ನಲ್ಲಿ ಉಂಟಾದ ಭೂಕಂಪನವು ನೇಪಾಳ ಸೇರಿದಂತೆ ಭಾರತದ ದೆಹಲಿ, ಉತ್ತರ ಪ್ರದೇಶ ಹಾಗೂ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಕಂಪನ ಸೃಷ್ಠಿಸಿತ್ತು ಎನ್ನಲಾಗಿದೆ. ಇನ್ನು ಕೇಂದ್ರ ಭೂ ವಿಜ್ಞಾನ ಸಚಿವಾಲಯವು ಟಿಬೆಟ್‌ನ ಕ್ಸಿಜಾಂಗ್‌ನಲ್ಲಿ ಬೆಳಿಗ್ಗೆ 6:35 ಕ್ಕೆ 10 ಕಿ.ಮೀ ಆಳದಲ್ಲಿ ಭಾರಿ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.
ಚೀನಾದ ಮಾಧ್ಯಮಗಳ ಪ್ರಕಾರ ಭೂಕಂಪನದಿಂದ ಹಲವಾರು ಕಟ್ಟಡಗಳು ಹಾನಿಗೊಳಗಾಗಿವೆ ಎನ್ನಲಾಗಿದೆ. “ಡಿಂಗ್ರಿ ಕೌಂಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಬಲವಾದ ಕಂಪನಗಳನ್ನು ಅನುಭವಿಸಿದವು ಮತ್ತು ಭೂಕಂಪನದ ಸಮೀಪವಿರುವ ಅನೇಕ ಕಟ್ಟಡಗಳು ಕುಸಿದಿವೆ” ಎಂದು ಚೀನಾದ ಸರ್ಕಾರಿ ಒಡೆತನದ ಸಿಸಿಟಿವಿ ವಾಹಿನಿಯು ಪ್ರಸಾರ ಮಾಡಿದೆ.
ಒಟ್ಟು ಆರು ಬಾರಿ ಭೂಕಂಪನ;
ಒಂದೂವರೆ ಗಂಟೆ ಅವಧಿಯೊಳಗೆ ಆರು ಭೂಕಂಪ ಸಂಭವಿಸಿವೆ ಎಂದು ಹೇಳಲಾಗಿದೆ. ಬೆಳಗ್ಗೆ 6:35ಕ್ಕೆ ಸಂಭವಿಸಿದ 7.1 ತೀವ್ರತೆಯ ಭೂಕಂಪದ ನಂತರವೂ ಕಂಪನಗಳು ನಿಂತಿಲ್ಲ. ಒಂದರ ಹಿಂದೆ ಒಂದರಂತೆ ಭೂಕಂಪನದಿಂದ ಜನರು ಭಯಭೀತರಾಗಿದ್ದಾರೆ. ಟಿಬೆಟ್‌ನ ದೂರದ ಹಿಮಾಲಯ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ ನಂತರ “ಜನರು ಸಾವನ್ನಪ್ಪಿದ್ದಾರೆ” ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ, ನೆರೆಯ ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಭಾರತದ ಹಲವಾರು ಭಾಗಗಳಲ್ಲಿ ಸಹ ಕಂಪನಗಳು ಸಂಭವಿಸಿವೆ.
ಮಂಗಳವಾರ ಬೆಳಗ್ಗೆ 6:35ಕ್ಕೆ ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪನದ ಅನುಭವವಾಗಿದೆ. ಭಾರತ ಮಾತ್ರವಲ್ಲದೆ ನೇಪಾಳ, ಬಾಂಗ್ಲಾದೇಶ ಮತ್ತು ಚೀನಾ ಕೂಡ ಇದರ ಪ್ರಭಾವಕ್ಕೆ ಒಳಗಾಗಿದೆ. ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ ಚಳಿಯ ರಾತ್ರಿಯಲ್ಲಿ ಮನೆಯಲ್ಲಿ ಮಲಗಿದ್ದವರು ನಿದ್ದೆ ಕಳೆದುಕೊಂಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ಜನರು ಭಯದಿಂದ ಮನೆಯಿಂದ ಹೊರಬಂದು ರಸ್ತೆಯಲ್ಲೇ ಕಾಲ ಕಳೆದಿದ್ದಾರೆ. ಬಿಹಾರದ ಮುಜಾಫರ್‌ಪುರ, ಮೋತಿಹಾರಿ, ಬೆಟ್ಟಿಯಾ, ಮುಂಗೇರ್, ಅರಾರಿಯಾ, ಸೀತಾಮರ್ಹಿ, ಗೋಪಾಲ್‌ಗಂಜ್, ವೈಶಾಲಿ, ನಾವಡಾ ಮತ್ತು ನಳಂದಾ ಸೇರಿದಂತೆ ಬಿಹಾರದ ಹಲವು ಭಾಗಗಳಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಕಂಪನದ ಅನುಭವವಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಹಲವು ದೇಶಗಳಲ್ಲಿ ಕಂಪಿಸಿದ ಭೂಮಿ
ಭೂಕಂಪವು 7.1 ರ ಪ್ರಾಥಮಿಕ ತೀವ್ರತೆಯನ್ನು ಹೊಂದಿತ್ತು ಮತ್ತು ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಕೆಳಗೆ ಅಪ್ಪಳಿಸಿತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಇದು ಅತ್ಯಂತ ಆಳವಿಲ್ಲದ ಭೂಕಂಪವಾಗಿದೆ. ಹಲವು ದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಬಲವಾಗಿ ಭೂಮಿ ಅಲುಗಾಡಿರುವ ಹಲವಾರು ವರದಿಗಳನ್ನು ಹಂಚಿಕೊಳ್ಳಲಾಗಿದೆ. ಟಿಬೆಟ್, ನೇಪಾಳ (ರಾಜಧಾನಿ ಕಠ್ಮಂಡು ಸೇರಿದಂತೆ) ಮತ್ತು ಭಾರತ, ಭೂತಾನ್ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.
A series of nine earthquakes, including a massive 7.1 magnitude tremor, struck the Tibet autonomous region early Tuesday morning, leaving at least 95 people dead. The earthquakes, which occurred within an hour, caused widespread destruction in Tibet and strong tremors were felt across Nepal, India, Bhutan, and parts of China.
08-01-25 03:39 pm
Bangalore Correspondent
VHMP virus, CM Siddaramaiah: ಎಚ್ಎಂಪಿವಿ ಆತಂಕಾರ...
08-01-25 11:43 am
No emergecy in China, Virus News Kannada; ಚೀನ...
06-01-25 09:41 pm
Chamarajanagar, Heart Attack School Student:...
06-01-25 06:53 pm
Bangalore Suicide, Software engineer family:...
06-01-25 02:03 pm
07-01-25 06:32 pm
HK News Desk
ಹಾರ್ಟ್ ಅಟ್ಯಾಕ್ ಆಗಿ ಸತ್ತಿದ್ದಾನೆಂದು ತಿಳಿದು ಅಂತ್...
05-01-25 09:41 pm
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
08-01-25 06:13 pm
Mangaluru Correspondent
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
Mangalore University, Phd Admission: ಮಂಗಳೂರು...
07-01-25 10:22 pm
Vice President Jagdeep Dhankhar, Dharmasthala...
07-01-25 09:15 pm
08-01-25 05:58 pm
Mangaluru Correspondent
Cyber Fruad, CBI, Udupi, Karkala: ಸಿಬಿಐ ಹೆಸ್ರ...
08-01-25 03:14 pm
Mangalore crime, Court: ಸ್ನಾನ ಮಾಡುತ್ತಿದ್ದ ಅಪ್...
07-01-25 03:50 pm
Digital Arrest, I4C database, Cyber Frau: ಸೈಬ...
06-01-25 05:37 pm
Mangalore Robbery, Singari Beedi owner, Crime...
04-01-25 11:31 am