ಕೋವಿಡ್ ಸೆಂಟರ್​ನಲ್ಲಿ ಬೆಂಕಿ ಅವಘಡ: 7 ಮಂದಿ ಸಾವು

09-08-20 04:24 am       Headline Karnataka News Network   ದೇಶ - ವಿದೇಶ

ತಾತ್ಕಾಲಿಕ ವಾಗಿ ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗಿದ್ದ ಹೋಟೆಲ್ ವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿ 7 ಮಂದಿ ಮೃತಪಟ್ಟ ಘೋರ ಅಗ್ನಿ  ದುರಂತ ನಡೆದಿದೆ.

ವಿಜಯವಾಡ(ಆ. 09): ತಾತ್ಕಾಲಿಕ ವಾಗಿ ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗಿದ್ದ ಹೋಟೆಲ್ ವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿ 7 ಮಂದಿ ಮೃತಪಟ್ಟ ಘೋರ ಅಗ್ನಿ  ದುರಂತ ನಡೆದಿದೆ.

ಕೊರೋನಾ ಸೋಂಕಿತ ರೋಗಿಗಳು ಈ ಹೋಟೆಲ್ ನಲ್ಲಿ ತಂಗಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಗಳನ್ನು  ಬಳಿಕ ಈ ಹೋಟೆಲ್ ನಲ್ಲಿ ಇರಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಲ್ಲರೂ ಮಲಗಿದ್ದ ವೇಳೆ ಬೆಂಕಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ.

ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು 20 ಮಂದಿಯನ್ನು ಘಟನಾ ಸ್ಥಳದಿಂದ ಪಾರು ಮಾಡಲಾಗಿದೆ. ಇನ್ನೂ ಹಲವರು ಈ ಹೋಟೆಲ್ ಕಟ್ಟಡದಲ್ಲಿ ಸಿಲುಕಿದ್ದಾರೆ. ಅಗ್ನಿಶಾಮದ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಒಟ್ಟು 30 ರೋಗಿಗಳು ಇಲ್ಲಿ ದಾಖಲಾಗಿದ್ದರೆನ್ನಲಾಗಿದೆ.

ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ. ಇದೇ ವೇಳೆ, ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಗಳನ್ನ ಚುರುಕುಗೊಳಿಸಿ, ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿದ್ಧಾರೆ. ಹಾಗೆಯೆ, ಈ ದುರ್ಘಟನೆ ಸಂಭವಿಸಲು ಕಾರಣ ಏನೆಂದು ಪತ್ತೆ ಹಚ್ಚಲು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ.

Video: