ಬ್ರೇಕಿಂಗ್ ನ್ಯೂಸ್
08-03-25 04:03 pm HK News Desk ದೇಶ - ವಿದೇಶ
ತಿರುವನಂತಪುರಂ, ಮಾ.8: ಕೇರಳ ಮೂಲದ ಇಬ್ಬರು ಯುವಕರನ್ನು ದುಬೈನಲ್ಲಿ ಗಲ್ಲಿಗೇರಿಸಲಾಗಿದೆ. ಪ್ರತ್ಯೇಕ ಎರಡು ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದ ಯುವಕರನ್ನು ಫೆ.28ರಂದು ಗಲ್ಲಿಗೇರಿಸಿದ್ದಾಗಿ ಅಲ್ಲಿನ ಅಧಿಕಾರಿಗಳು ಭಾರತದ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇನ್ನೂ 28 ಮಂದಿ ಭಾರತದ ಯುವಕರು ದುಬೈನಲ್ಲಿ ವಿವಿಧ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದು ಸಾವಿನ ದಿನ ಎದುರು ನೋಡುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯ ಚೀಮೇನಿ ನಿವಾಸಿ ಮುರಲೀಧರನ್ ಪಿ.ವಿ. ಮತ್ತು ಮಲಪ್ಪುರಂ ಜಿಲ್ಲೆಯ ಅರಂಗಿಲೊಟ್ಟು ನಿವಾಸಿ ಮಹಮ್ಮದ್ ರಿನಾಶ್ (29) ಮರಣ ದಂಡನೆಗೆ ಗುರಿಯಾದವರು. ಫುಟ್ಬಾಲ್ ಆಟಗಾರನಾಗಿದ್ದ ಮರಲೀಧರನ್ 2006ರಲ್ಲಿ ದುಬೈಗೆ ಉದ್ಯೋಗಕ್ಕೆ ತೆರಳಿದ್ದರು. ಅದಕ್ಕೂ ಮೊದಲೇ ಆತನ ತಂದೆ ಕೇಶವನ್ ಅಲ್ ಐನ್ ಎನ್ನುವ ಪ್ರದೇಶದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮುರಲೀಧರನ್ ಕೂಡ ದುಬೈಗೆ ತೆರಳಿ ಕೆಲಸ ಕಂಡುಕೊಂಡಿದ್ದರು. 2009ರಲ್ಲಿ ತನ್ನ ಜೊತೆಗಿದ್ದ ಮಲಪ್ಪುರಂ ಜಿಲ್ಲೆಯ ತಿರೂರ್ ಮೂಲದ ವ್ಯಕ್ತಿಯನ್ನು ಮರುಭೂಮಿಯಲ್ಲಿ ಕೊಂದು ಹೂತು ಹಾಕಿದ ಆರೋಪದಲ್ಲಿ ಮುರಳಿಯನ್ನು ಬಂಧಿಸಲಾಗಿತ್ತು.
ಆನಂತರ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದ ಮುರಲೀಧರನ್ ಅಲ್ ಐನ್ ಜೈಲಿನಲ್ಲೇ ಕೊಳೆಯುವಂತಾಗಿತ್ತು. ಈ ನಡುವೆ, ತಂದೆ ಕೇಶವನ್ ಅವರು ಮಲಪ್ಪುರಂ ಜಿಲ್ಲೆಯ ಸಂತ್ರಸ್ತ ವ್ಯಕ್ತಿಯ ಕುಟುಂಬವನ್ನು ಸಂಪರ್ಕಿಸಿ ಕ್ಷಮಾದಾನ ಕೊಡಿಸುವಂತೆ ಪ್ರಯತ್ನಪಟ್ಟಿದ್ದರು. ಆದರೆ ಅದು ಫಲ ನೀಡಿರಲಿಲ್ಲ. ಕೊನೆಗೆ, ಅಲ್ಲಿನ ಉನ್ನತ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
ಅಂಗವಿಕಲನನ್ನು ಕೊಂದಿದ್ದ ರಿನಾಶ್
ಮಹಮ್ಮದ್ ರಿನಾಶ್ ಮೇಲೆ ದುಬೈ ಪ್ರಜೆ, ಅಂಗವಿಕಲನಾಗಿದ್ದ ಅಬ್ದುಲ್ಲಾ ಝಿಯಾದ್ ರಶೀದ್ ಅಲ್ ಮನ್ಸೂರಿ ಎಂಬಾತನನ್ನು ಕೊಂದಿದ್ದ ಆರೋಪ ಇತ್ತು. 2022ರ ಫೆ.8ರಂದು ಆರೋಪಿ ರಿನಾಶ್ ಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ದುಬೈ ಮಾಧ್ಯಮ ವರದಿ ಪ್ರಕಾರ, ರಿನಾಶ್ ಮತ್ತು ಹೈದ್ರಾಬಾದ್ ಮೂಲದ ಯುವತಿ ಸಹೋದ್ಯೋಗಿಗಳಾಗಿದ್ದು, ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಆದರೆ ಯುವತಿಯನ್ನು ಅಲ್ ಮನ್ಸೂರಿ ಅದಕ್ಕೂ ಮೊದಲೇ ಮದುವೆಯಾಗಿದ್ದು, ಇವರ ಅಕ್ರಮ ಸಂಬಂಧ ಗೊತ್ತಾಗಿ ರಿನಾಶ್ ಜೊತೆಗೆ ಜಗಳವಾಡಿದ್ದ. ಒಂದು ದಿನ ಜಗಳ ತೀವ್ರಗೊಂಡು ರಿನಾಶ್ ಚೂರಿಯಿಂದ ತಿವಿದು ಅಲ್ ಮನ್ಸೂರಿಯನ್ನು ಕೊಂದಿದ್ದ. ಪ್ರಕರಣದಲ್ಲಿ ದುಬೈ ಪೊಲೀಸರು ರಿನಾಶ್ ನನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ತುರ್ತಾಗಿ ವಿಚಾರಣೆ ನಡೆಸಿದ ಕೋರ್ಟ್ ಒಂದೇ ವರ್ಷದಲ್ಲಿ ಗಲ್ಲು ಶಿಕ್ಷೆ ಪ್ರಕಟಿಸಿತ್ತು.
ಆನಂತರ, ಮಹಮ್ಮದ್ ರಿನಾಶ್ ಉಳಿಸುವುದಕ್ಕಾಗಿ ಆತನ ಕುಟುಂಬ ಇನ್ನಿಲ್ಲದ ಪರದಾಟ ಮಾಡಿತ್ತು. ಅಲ್ ಮನ್ಸೂರಿ ಕುಟುಂಬದವರನ್ನೂ ಸಂಪರ್ಕಿಸಿ ಕ್ಷಮೆ ನೀಡುವಂತೆ ಕೇಳಿಕೊಂಡಿತ್ತು. ಅಲ್ಲದೆ, ಭಾರತದ ವಿದೇಶಾಂಗ ಇಲಾಖೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೂ ಭೇಟಿಯಾಗಿ ರಿನಾಶ್ ತಾಯಿ ಲೈಲಾ ಕೈಲಾದ ಸಹಕಾರ ನೀಡುವಂತೆ ಕೇಳಿಕೊಂಡಿದ್ದರು. ದುಬೈನಲ್ಲಿ ವಕೀಲರನ್ನು ಮುಂದಿಟ್ಟು ಕೋರ್ಟಿನಲ್ಲಿ ವಾದಿಸುವುದಕ್ಕೂ ಪ್ರಯತ್ನಿಸಿದ್ದರು. ಆದರೆ ಒಂದು ಸಿಟ್ಟಿಂಗ್ ಮಾಡುವುದಕ್ಕೇ ಅಲ್ಲಿನ ವಕೀಲರು ಲಕ್ಷಕ್ಕೂ ಹೆಚ್ಚು ಚಾರ್ಜ್ ಮಾಡುತ್ತಿದ್ದುದರಿಂದ ರಿನಾಶ್ ಕುಟುಂಬ ಬೇಸತ್ತು ಹೋಗಿತ್ತು. ಫೆ.28ರಂದು ಇಬ್ಬರು ಯುವಕರ ಕುಟುಂಬಕ್ಕೂ ಮಾಹಿತಿ ನೀಡಿ ಗಲ್ಲು ಶಿಕ್ಷೆ ಜಾರಿ ಮಾಡಲಾಗಿದೆ. ಎರಡೂ ಕುಟುಂಬಸ್ಥರು ತಮ್ಮ ಮಕ್ಕಳ ಮೃತದೇಹ ಪಡೆದು ನೋವಿನಿಂದಲೇ ದುಬೈನಲ್ಲಿಯೇ ಅಂತ್ಯ ಸಂಸ್ಕಾರವನ್ನೂ ನೆರವೇರಿಸಿದ್ದಾರೆ.
ಉತ್ತರ ಪ್ರದೇಶದ ಮಹಿಳೆಗೂ ಗಲ್ಲು
ಇತ್ತೀಚೆಗೆ ಫೆ.15ರಂದು ಉತ್ತರ ಪ್ರದೇಶದ ಮೂಲದ 33 ವರ್ಷದ ಶಹಜಾದಿ ಖಾನ್ ಎಂಬ ಮಹಿಳೆಯೊಬ್ಬರನ್ನು ದುಬೈನಲ್ಲಿ ಗಲ್ಲಿಗೇರಿಸಲಾಗಿತ್ತು. ಶೆಹಜಾದಿ ದುಬೈನ ಅರಬ್ಬಿಯೊಬ್ಬರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದಾಗ ನಾಲ್ಕು ವರ್ಷದ ಮಗು ಅಕಸ್ಮಾತ್ ಸಾವಿಗೀಡಾಗಿತ್ತು. ಆದರೆ ಮಹಿಳೆಯ ನಿರ್ಲಕ್ಷ್ಯದಿಂದಲೇ ಮಗುವಿನ ಸಾವು ಸಂಭವಿಸಿದೆ ಎಂದು ಕುಟುಂಬ ದೂರು ನೀಡಿತ್ತು. ಮಗುವಿಗೆ ರೂಟೀನ್ ಎನ್ನುವ ರೀತಿ ವ್ಯಾಕ್ಸಿನ್ ನೀಡಲಾಗಿತ್ತು. ವ್ಯಾಕ್ಸಿನ್ ಕಾರಣದಿಂದ ಮಗುವಿಗೆ ಅನಾರೋಗ್ಯ ಉಂಟಾಗಿ ಸಾವು ಸಂಭವಿಸಿದ್ದರೂ, ಇದಕ್ಕೆ ಮನೆ ಕೆಲಸ ಮಾಡುತ್ತಿದ್ದ ಮಹಿಳೆಯೇ ಕಾರಣ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದರು. ಕೋರ್ಟ್ ಮಗುವಿನ ಸಾವಿಗೆ ಕಾರಣವಾಗಿದ್ದಾಳೆ ಎಂದು ಗಲ್ಲು ಶಿಕ್ಷೆ ನೀಡಿತ್ತು.
ಉತ್ತರ ಪ್ರದೇಶದಲ್ಲಿದ್ದ ಮಹಿಳೆಯ ತಂದೆ ಮಾಧ್ಯಮಕ್ಕೆ ಈ ಬಗ್ಗೆ ಹೇಳಿಕೊಂಡು ಅತ್ತಿದ್ದರು. ನಾವು ಭಾರತ ಸರಕಾರಕ್ಕೆ, ವಿದೇಶಾಂಗ ಇಲಾಖೆಗೆ ಮನವಿ ನೀಡಿದ್ದೇವೆ, ದುಬೈಗೆ ಹೋಗಿ ವಕೀಲರನ್ನು ಮುಂದಿಟ್ಟು ವಾದಿಸುವಷ್ಟು ತಾಕತ್ತು ಇಲ್ಲ. ಭಾರತ ಸರಕಾರ ನಮ್ಮ ಪರವಾಗಿ ನಿಂತಿಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ. ವಿದೇಶಾಂಗ ಇಲಾಖೆಯಿಂದ ಕ್ಷಮಾದಾನ ನೀಡುವಂತೆ ದುಬೈ ನ್ಯಾಯಾಲಯಕ್ಕೆ ಅರ್ಜಿ ಕಳಿಸಿದ್ದರೂ ಅಲ್ಲಿನ ನ್ಯಾಯಾಲಯ ಅದನ್ನು ಪರಿಗಣಿಸದೆ ಗಲ್ಲು ಶಿಕ್ಷೆ ಎತ್ತಿಹಿಡಿದಿತ್ತು.
Two Kerala men sentenced to death in murder cases in UAE have been executed. UAE authorities initiated the execution after informing the Ministry of External Affairs in India. The duo has been identified as Muhammad Rinash A from Kannur and Muraleedharan PV.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm