India and Pakistan, Ceasefire: ಮೂರೇ ದಿನದಲ್ಲಿ ಗೋಣು ಬಗ್ಗಿಸಿದ ಪಾಕ್, ಕದನ ವಿರಾಮಕ್ಕೆ ಕೇಳಿಕೊಂಡ ಮಿಲಿಟರಿ ಜನರಲ್, ಭವಿಷ್ಯದಲ್ಲಿ ಉಗ್ರ ಕೃತ್ಯ ನಡೆದರೆ ಯುದ್ಧಕ್ಕೆ ಕರೆ ಕೊಟ್ಟಂತೆ, ಸದ್ಯಕ್ಕೆ ಕದನಕ್ಕೆ ತೆರೆ !

10-05-25 08:28 pm       HK News Desk   ದೇಶ - ವಿದೇಶ

ಮೂರೇ ದಿನದಲ್ಲಿ ಬಿದ್ದ ಪೆಟ್ಟಿಗೆ ಪಾಕಿಸ್ತಾನವು ಗೋಣು ಬಗ್ಗಿಸಿದ್ದು ಭಾರತೀಯ ಸೇನೆಗೆ ಕದನ ವಿರಾಮಕ್ಕೆ ಕೇಳಿಕೊಂಡಿದೆ. ಇದಕ್ಕೆ ಉಭಯ ದೇಶಗಳು ಒಪ್ಪಿಕೊಂಡಿದ್ದು, ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಘೋಷಿಸಲಾಗಿದೆ ಎಂದು ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹೇಳಿದ್ದಾರೆ.

ನವದೆಹಲಿ, ಮೇ 10 : ಮೂರೇ ದಿನದಲ್ಲಿ ಬಿದ್ದ ಪೆಟ್ಟಿಗೆ ಪಾಕಿಸ್ತಾನವು ಗೋಣು ಬಗ್ಗಿಸಿದ್ದು ಭಾರತೀಯ ಸೇನೆಗೆ ಕದನ ವಿರಾಮಕ್ಕೆ ಕೇಳಿಕೊಂಡಿದೆ. ಇದಕ್ಕೆ ಉಭಯ ದೇಶಗಳು ಒಪ್ಪಿಕೊಂಡಿದ್ದು, ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಘೋಷಿಸಲಾಗಿದೆ ಎಂದು ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹೇಳಿದ್ದಾರೆ.

ಪಾಕಿಸ್ತಾನದ ಮಿಲಿಟರಿ ಜನರಲ್ ಭಾರತದ ಮಿಲಿಟರಿ ಜನರಲ್ ಅವರಿಗೆ ಅಪರಾಹ್ನ 3.30 ಗಂಟೆಗೆ ಕರೆ ಮಾಡಿದ್ದು, ಎರಡೂ ಕಡೆಯಿಂದ ಗುಂಡಿನ ದಾಳಿ ಮತ್ತು ಸೇನಾ ಸಂಘರ್ಷ ನಿಲ್ಲಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸಂಜೆ 5 ಗಂಟೆಯಿಂದ ನೆಲ, ವಾಯು ಅಥವಾ ಸಮುದ್ರ ಮಾರ್ಗದಲ್ಲಿ ಸಂಘರ್ಷ ನಡೆಸದಿರಲು ನಿರ್ಧಾರಕ್ಕೆ ಬರಲಾಗಿದೆ ಎಂದು ವಿಕ್ರಂ ಮಿಸ್ರಿ ತಿಳಿಸಿದ್ದಾರೆ. ಎರಡೂ ಕಡೆಯಿಂದ ಸಂಘರ್ಷ ನಿಲ್ಲಿಸುವ ಬಗ್ಗೆ ಮಾತುಕತೆ ನಡೆದಿದ್ದು, ಮೇ 12ರಂದು ಈ ಬಗ್ಗೆ ಮತ್ತೊಮ್ಮೆ ಮಾತುಕತೆ ನಡೆಯಲಿದೆ ಎಂದು ಮಿಸ್ರಿ ತಿಳಿಸಿದ್ದಾರೆ.

ಭಾರತವು ಕದನ ವಿರಾಮಕ್ಕೆ ಒಪ್ಪಿಗೆ ನೀಡುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ತನ್ನ ಮಾತುಕತೆಯ ಫಲವಾಗಿ ಉಭಯ ದೇಶಗಳು ಶಾಂತಿ ಒಪ್ಪಂದಕ್ಕೆ ಬಂದಿವೆ ಎಂದಿದ್ದಾರೆ. ಸೇನಾ ಮೂಲಗಳ ಪ್ರಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮತ್ತು ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಜೊತೆಗೆ ಅಮೆರಿಕದ ಅಧಿಕಾರಿಗಳು ಹಲವು ದಿನಗಳಿಂದ ಮಾತುಕತೆ ನಡೆಸಿದ್ದರು. ಇದೀಗ ಪಾಕಿಸ್ತಾನದ ಕಡೆಯಿಂದಲೇ ನೇರ ಕರೆ ಬಂದಿದ್ದರಿಂದ ಭಾರತವೇ ಕದನ ವಿರಾಮಕ್ಕೆ ಒಪ್ಪಿಗೆ ನೀಡಿರುವುದಾಗಿ ತಿಳಿದುಬಂದಿದೆ.

ಮತ್ತೊಂದೆಡೆ ಅಮೆರಿಕವು ಐಎಂಎಫ್ ಮೂಲಕ ಒಂದು ಬಿಲಿಯನ್ ಡಾಲರ್ ಸಾಲವನ್ನು ಪಾಕಿಸ್ತಾನಕ್ಕೆ ನೀಡುವ ಮೂಲಕ ಕದನ ವಿರಾಮಕ್ಕೆ ಬರುವಂತೆ ಪರೋಕ್ಷ ಒತ್ತಡ ಹಾಕಿತ್ತು. ಇದಲ್ಲದೆ, ಸದ್ಯಕ್ಕೆ ಪಾಕಿಸ್ತಾನಕ್ಕೆ ಪೆಟ್ಟು ಕೊಟ್ಟಿದ್ದು ಸಾಕು, ಭವಿಷ್ಯದಲ್ಲಿ ಏನಾದರೂ ಭಯೋತ್ಪಾದಕ ಕೃತ್ಯ ನಡೆದಲ್ಲಿ ಯುದ್ಧಕ್ಕೆ ಆಹ್ವಾನ ಕೊಟ್ಟಂತೆ ಅಂದುಕೊಳ್ಳಿ ಎನ್ನುವ ಸಲಹೆಯನ್ನೂ ಭಾರತಕ್ಕೆ ಅಮೆರಿಕದ ವಕ್ತಾರರು ನೀಡಿದ್ದರು. ಇದೇ ಮಾತನ್ನು ಆಧರಿಸಿ ಭಾರತೀಯ ಮಿಲಿಟರಿ ವಕ್ತಾರರು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದಾರೆ.

India and Pakistan have agreed to a ceasefire on land, sea and air effective from 5 pm today, Foreign Secretary Vikram Misri announced today. Soon after the announcement, Prime Minister Narendra Modi chaired a high-level meeting at his residence. The meeting was attended by Defence Minister Rajnath Singh among others.