ಎರಡು ತಲೆ ಹಾವನ್ನು ನೀವು ಒಮ್ಮೆಯಾದರೂ ನೋಡಿದ್ದೀರಾ?

10-08-20 05:10 am       Headline Karnataka News Network   ದೇಶ - ವಿದೇಶ

ಕೊಳಕು ಮಂಡಲ ಹಾವಿನ ಪ್ರಭೇದ ಭಾರತದಲ್ಲಿ ಇರುವ ಅತ್ಯಂತ ವಿಷಪೂರಿತ ಹಾವುಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರ ದಲ್ಲಿ ಎರಡು ತಲೆಯಿರುವ ಕೊಳಕು ಮಂಡಲದ ಹಾವೊಂದನ್ನು ಪತ್ತೆಯಾಗಿದೆ. 

ಮುಂಬಯಿ, ಆಗಸ್ಟ್‌ 10: ಎರಡು ತಲೆಯ ಹಾವುಗಳ ಬಗ್ಗೆ ಕೇಳಿರ್ತೇವೆ. ಆದರೆ ನೋಡಿರುವುದು ಅತ್ಯಂತ ಅಪರೂಪ. ಆದರೆ ಮಹಾರಾಷ್ಟ್ರ ದಲ್ಲಿ ಎರಡು ತಲೆಯಿರುವ ಕೊಳಕು ಮಂಡಲದ ಹಾವೊಂದನ್ನು ಪತ್ತೆಯಾಗಿದೆ. 

ಕೊಳಕು ಮಂಡಲ ಹಾವಿನ ಪ್ರಭೇದ  ಭಾರತದಲ್ಲಿ ಇರುವ ಅತ್ಯಂತ ವಿಷಪೂರಿತ ಹಾವುಗಳಲ್ಲಿ ಒಂದಾಗಿದೆ. ಈಗ ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಈ ಹಾವು 11 ಸೆಂಮೀ ಉದ್ದವಿದ್ದು, ತಲಾ 2 ಸೆಂಮೀ ಇರುವ ಎರಡು ತಲೆಗಳನ್ನು ಹೊಂದಿದೆ.

 

ಕಲ್ಯಾಣ್‌ ನಿವಾಸಿಯೊಬ್ಬರು, ಈ ಹಾವನ್ನು ತಮ್ಮ ಮನೆಯ ಅಂಗಳದಲ್ಲಿ ನೋಡುತ್ತಲೇ ಹಾವು ಹಿಡಿಯುವವರನ್ನು ಕರೆದಿದ್ದಾರೆ.  ಈ ಹಾವನ್ನು ಇಲ್ಲಿನ ಪರೇಲ್‌ನಲ್ಲಿರುವ ಹಫ್‌ಕೈನ್‌ ಸಂಸ್ಥೆಗೆ ನೀಡಲಾಗಿದೆ. ಈ ಹಾವಿನ ವಿಡಿಯೋ ವನ್ನು ಅರಣ್ಯ ಇಲಾಖೆಯ ಐ ಎಫ್ ಎಸ್ ಅಧಿಕಾರಿ ಸುಶಾಂತಾ ನಂದಾ ಪೋಸ್ಟ್ ಮಾಡಿದ್ದಾರೆ. ಅವರ ಪ್ರಕಾರ ಅಸಹಜವಾದ ವಂಶವಾಹಿಗಳ ಕಾರಣ ಎರಡು ತಲೆಯ ಹಾವುಗಳು ಬದುಕುಳಿಯುವ ಸಾಧ್ಯತೆಗಳು ಬಹಳ ಕಡಿಮೆ ಇವೆ ಎಂದು ಹೇಳಿದ್ದಾರೆ.