ಬ್ರೇಕಿಂಗ್ ನ್ಯೂಸ್
09-01-26 05:47 pm Mangalore Correspondent ಕರಾವಳಿ
ಮಂಗಳೂರು, ಜ.9 : ಉದ್ಯೋಗ ಖಾತ್ರಿ ಯೋಜನೆಗೆ ಗಾಂಧೀಜಿ ಹೆಸರು ತೆಗೆದು ರಾಮನ ಹೆಸರನ್ನು ಯಾಕೆ ತಂದಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ತಂದಿದ್ದ ಐತಿಹಾಸಿಕ ಕಾನೂನನ್ನು ರಾಜ್ಯಗಳ, ಸಂಸದರ ಅಭಿಪ್ರಾಯ ಕೇಳದೇ ತಿದ್ದುಪಡಿ ಮಾಡಿದ್ದಾರೆ. ದೇಶದಲ್ಲಿ 12 ಕೋಟಿ ಕಾರ್ಮಿಕರು ಇದರಲ್ಲಿ ನೋಂದಣಿಗೊಂಡಿದ್ದು, 53 ಶೇ. ಮಹಿಳೆಯರಿದ್ದಾರೆ. ಇವರೆಲ್ಲರ ಬದುಕಿಗೆ ಬೆಂಕಿಯಿಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕರ್ನಾಟಕದಲ್ಲಿ 72 ಲಕ್ಷ ಸಕ್ರಿಯ ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಪಡೆದು ನೋಂದಣಿಯಾಗಿದ್ದಾರೆ. ಈ ಪೈಕಿ 36 ಲಕ್ಷ ಮಹಿಳೆಯರಿದ್ದಾರೆ. ಇವರ ಉದ್ಯೋಗ ಖಾತ್ರಿಯನ್ನೇ ಕಸಿದುಕೊಳ್ಳಲಾಗಿದೆ. ವರ್ಷಕ್ಕೆ ನೂರು ಉದ್ಯೋಗ ಕೊಡಲಾಗದಿದ್ದರೆ ಅವರಿಗೆ ದುಡ್ಡು ಕೊಡಬೇಕು ಅಂತ ಕಾನೂನಿನಲ್ಲಿದೆ. ಇನ್ನು ಇವರಿಗೆ ಉದ್ಯೋಗವಾಗಲೀ, ದುಡ್ಡು ಆಗಲೀ ಸಿಗುತ್ತಾ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಮಹಿಳಾ ಸಬಲೀಕರಣ, ಜನಪರ ಚಿಂತನೆಯೇ ಇಲ್ಲ. ಇವರು 11 ವರ್ಷದಲ್ಲಿ ಒಂದಾದ್ರೂ ಜನಪರ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ.. ಕನಿಷ್ಠ ಕೂಲಿ ನೀಡುವ ರೋಜಗಾರ್ ಯೋಜನೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐತಿಹಾಸಿಕ ಯೋಜನೆ. ಯುಪಿಎ ಸರ್ಕಾರ ಉದ್ಯೋಗದ ಹಕ್ಕು, ಮಾಹಿತಿ ಹಕ್ಕು, ಅರಣ್ಯ ವಾಸಿಗಳ ಹಕ್ಕು, ಆಹಾರದ ಹಕ್ಕು ಹೀಗೆ ಅನೇಕ ಜನಪರ ಕಾನೂನುಗಳನ್ನು ಜಾರಿಗೆ ತಂದಿದೆ. ಇವರು ಒಂದಾದರೂ ಜನಪರ ಯೋಜನೆ ಮಾಡಿದ್ದಾರೆಯೇ? 11 ವರ್ಷದಲ್ಲಿ ಇವರು ತಂದ ಒಂದು ಜನಪರ ಯೋಜನೆ ಹೇಳಲಿ. ಡಿ ಮಾನಿಟೈಸೇಶನ್ ಮೂಲಕ ಎಲ್ಲರಿಗೂ ತೊಂದರೆ ಕೊಡುವ ಕೆಲಸ ಮಾಡಿದ್ದಾರೆ.
ಗಾಂಧೀಜಿ ಹೆಸರಿನಲ್ಲಿ ಯೋಜನೆ ಇತ್ತು. ಅದನ್ನು ತೆಗೆದು ರಾಮನನ್ನು ಯಾಕೆ ಜೋಡಿಸಿಕೊಂಡರೋ ಗೊತ್ತಿಲ್ಲ. 2019ರಲ್ಲಿ ದೇಶದ ವಿವಿಧ ಕಡೆ ಬರಗಾಲ ಬಂದಿದ್ದಾಗ 19 ಕೋಟಿ ಜನ ಉದ್ಯೋಗ ಖಾತ್ರಿಯಡಿ ನೆರವು ಪಡೆದರು. ಮೋದಿಯವರ ಕ್ರೂರ ಕಣ್ಣು ಇಂತಹದಕ್ಕೆ ಯಾಕೆ ಬೀಳುತ್ತೋ ಗೊತ್ತಿಲ್ಲ. ನೂರು ಇದ್ದುದನ್ನು 125 ಕೂಲಿ ಮಾಡಿದ್ದೀವಿ ಅಂತ ಹೇಳೋದು ಅಷ್ಟೇ, ಇಲ್ಲಿ ಕಾನೂನನ್ನೇ ದುರ್ಬಲ ಮಾಡಿದ್ದಾರೆ. ಕಾಂಗ್ರೆಸ್ ತಂದ ಉದ್ಯೋಗ ಖಾತ್ರಿ ಬಿಲ್ ಅನ್ನು ಮೋದಿ ಕೊಂದಾಕಿದ್ದಾರೆ.
ಪ್ರತಿ ವರ್ಷ 100 ದಿವಸ ಉದ್ಯೋಗ ಕೊಡಬೇಕೆಂದು ಕಾನೂನು ಇತ್ತು. ಅದಕ್ಕೆ ಕೇಂದ್ರ ಸರ್ಕಾರವೇ ಅನುದಾನ ಕೊಡ್ತಾ ಇತ್ತು, ಅನುಷ್ಠಾನ ಮಾತ್ರ ರಾಜ್ಯಕ್ಕೆ ಇತ್ತು. ಆದರೆ ಈಗ ಅದನ್ನು ಕಡಿತಗೊಳಿಸಿ ರಾಜ್ಯ ಸರ್ಕಾರದ 40 ಪರ್ಸೆಂಟ್ ಪಾಲು ಕೇಳಿದ್ದಾರೆ, ಹಾಗಾದ್ರೆ ಹೆಸರು ಬದಲಾವಣೆ ಮಾಡಿದ್ದು ಯಾಕಾಗಿ..? ಯಾಕೆ ಕೇಂದ್ರ ಸರ್ಕಾರಕ್ಕೆ ಹಣ ಕೊಡಲಾಗದಷ್ಟು ದಿವಾಳಿ ಆಗಿದೆಯೇ? ಹಣ ಕೊಡಲಾಗದ ಆರ್ಥಿಕ ಸಂಕಷ್ಟ ಇರುವ ರಾಜ್ಯಗಳಿವೆ, ಹಾಗಾದ್ರೆ ಅವರೇನು ಮಾಡಬೇಕು ಎಂದು ಪ್ರಶ್ನಿಸಿದರು.
ಉದ್ಯೋಗ ಕೇಳಿ ಬಂದವರಿಗೆ ಕೆಲಸ ಕೊಡಕ್ಕಾಗದಿದ್ದರೆ ದುಡ್ಡು ಕೊಡಬೇಕೆಂದು ಆ ಕಾನೂನಿನಲ್ಲಿ ಇದೆ. ಇವರು ಪ್ರವಾಹ ಬಂದರೂ ಅನುದಾನ ಕೊಡ್ತಾ ಇಲ್ಲ, ಇಂತದರಲ್ಲಿ ಗ್ರಾಮ ಪಂಚಾಯಿತಿಗಳಿಗೆ ಆಧಾರವಾಗಿದ್ದ ಈ ಯೋಜನೆಯನ್ನೇ ಕಡಿತ ಮಾಡಿದ್ದಾರೆ. ರಾಜ್ಯದಲ್ಲಿ ಆರು ಸಾವಿರ ಕೋಟಿಯಷ್ಟು ಪ್ರತಿ ವರ್ಷ ಉದ್ಯೋಗ ಖಾತ್ರಿಯಡಿ ಖರ್ಚಾಗ್ತಾ ಇತ್ತು, ಉದ್ಯೋಗ ಸಿಗ್ತಾ ಇತ್ತು. ಈಗ ಯಾಕೆ ಚೇಂಜ್ ಮಾಡ್ತಿದೀರಿ. ಅದು ಸರಿ ಇಲ್ಲ ಎಂದಾದರೆ ತೆಗೆದು ಹಾಕಿ. ಸರಿ ಇಲ್ಲ ಎಂದು ಹೇಳಿಬಿಡಿ. ನಾವು ರಾಜ್ಯದಿಂದ 40 ಪರ್ಸೆಂಟ್ ಕೊಡಬೇಕು ಅಂದ್ರೆ ನಿಮ್ಗೆ ಯಾಕೆ ಕ್ರೆಡಿಟ್ ಕೊಡಬೇಕು.
ಆಯುಷ್ಮಾನ್ ಭಾರತ್ ಯೋಜನೆಯಲ್ಲು 75 ಶೇ. ದುಡ್ಡು ರಾಜ್ಯದ್ದು, 25 ಶೇಕಡಾ ಪಾಲು ಕೇಂದ್ರದ್ದು. ಆದರೆ ಹೆಸರು ಮಾತ್ರ ಕೇಂದ್ರಕ್ಕೆ. ಮೋದಿಯ ಫೋಟೋ ಹಾಕಿ ನಮ್ಮ ದುಡ್ಡು ಕೇಳುತ್ತಾರೆ ಎಂದು ಕಟಕಿಯಾಡಿದ ಗುಂಡೂರಾವ್, ಇವರ ಕಾನೂನಿನಲ್ಲಿ ಯಾವ ವರ್ಕ್ ಸೇರಿಸುವುದಕ್ಕು ರಾಜ್ಯದ ಬಳಿ ಕೇಳಂಗಿಲ್ಲ. ಒಂದು ವೇಳೆ ಕಾಮಗಾರಿಗೆ ಉದ್ದೇಶಕ್ಕಿಂತ ಹೆಚ್ಚು ಖರ್ಚಾದರೆ ರಾಜ್ಯ ಸರ್ಕಾರ ಭರಿಸಬೇಕಂತೆ. ಹಿಂದೆ ಕಾಮಗಾರಿಯನ್ನು ನಿರ್ಧರಿಸಲು ಗ್ರಾಪಂಗೆ ಅವಕಾಶ ಇತ್ತು, ಈಗ ಅದನ್ನೂ ತೆಗೆದು ಹಾಕಿದ್ದಾರೆ. ಸೆಕ್ಷನ್ 19 ಡಿ ಪ್ರಕಾರ ಗ್ರಾಮಸಭೆ ಶಿಫಾರಸು ಮಾಡಬಹುದಿತ್ತು, ಈಗ ಸಲಹೆ ಮಾತ್ರ ಅಂತೆ. ನಿರ್ಧಾರ ಇವರೇ ಮಾಡೋದಂತೆ. ಇಲ್ಲಿ ಗ್ರಾಮ ಪಂಚಾಯತಿ ಸ್ವಾತಂತ್ರ್ಯವನ್ನೇ ಕಸಿದುಕೊಂಡಿದ್ದಾರೆ. ಇದು ಉದ್ಯೋಗ ಖಾತ್ರಿ ಸ್ಕೀಮ್ ಅಲ್ಲ, ಉದ್ಯೋಗ ವಂಚನೆಯ ಯೋಜನೆ. ಇದರ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಎಲ್ಲ ರೀತಿಯ ಹೋರಾಟ ಕೈಗೆತ್ತಿಕೊಳ್ಳಲಿದೆ. ರಾಜ್ಯದಲ್ಲಿ ಈ ಯೋಜನೆ ಜಾರಿ ವಿರುದ್ಧ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಅಗತ್ಯ ಬಿದ್ದರೆ ವಿಶೇಷ ಅಧಿವೇಶನವನ್ನೂ ಕರೆಯುತ್ತೇವೆ. ವಿಬಿ ರಾಮ್ ಜಿ ಯೋಜನೆಯನ್ನು ಹಿಂಪಡೆದು ಹಿಂದಿನ ಮಹಾತ್ಮ ಗಾಂಧಿ ರೋಜಗಾರ್ ಯೋಜನೆಯನ್ನೇ ಜಾರಿಗೆ ತರಲು ಹೋರಾಟ ಮಾಡ್ತೀವಿ ಎಂದರು.
ದಕ್ಷಿಣ ಕನ್ನಡದಲ್ಲಿ ಒಂದು ಲಕ್ಷ ಹತ್ತು ಸಾವಿರ ಜಾಬ್ ಕಾರ್ಡ್ ಇದೆ, ಅಷ್ಟು ಕಾರ್ಮಿಕರು ಈ ಯೋಜನೆಯಡಿ ನೋಂದಣಿಗೊಂಡಿದ್ದಾರೆ. 2024-25ರಲ್ಲಿ 60 ಕೋಟಿ ವೆಚ್ಚದ ಕಾಮಗಾರಿ ಆಗಿದೆ. ಇದು ನಾಳೆ ಜೀರೋಗೆ ಬರುತ್ತದೆ. ಆಮೂಲಕ ಗ್ರಾಪಂ ಆರ್ಥಿಕತೆಯ ಶಕ್ತಿಯನ್ನೇ ತೆಗೆದುಹಾಕಿದ್ದಾರೆ, ನಾಳೆ ಏನಾಗುತ್ತೆ ನೋಡಿ. ಜನರೇ ಎಚ್ಚರಗೊಂಡು ತಿರುಗಿ ಬೀಳಲಿದ್ದಾರೆ ಎಂದು ಹೇಳಿದರು ಸಚಿವ ದಿನೇಶ್ ಗುಂಡೂರಾವ್. ಸುದ್ದಿಗೋಷ್ಟಿಯಲ್ಲಿ ಶಶಿಧರ್ ಹೆಗ್ಡೆ, ಪದ್ಮರಾಜ್ ಪೂಜಾರಿ, ಲಾವಣ್ಯ ಬಳ್ಳಾಲ್, ಮನೋರಾಜ ರಾಜೀವ, ಶುಭೋದಯ ಆಳ್ವ, ವಿಕಾಸ್ ಶೆಟ್ಟಿ ಮತ್ತಿತರರಿದ್ದರು.
Health and District In-charge Minister Dinesh Gundu Rao has accused the Modi-led central government of weakening and “killing” the employment guarantee scheme by diluting the law brought by the Congress. Addressing a press conference in Mangaluru, he said the changes threaten the livelihoods of nearly 12 crore registered workers across the country, more than half of them women.
09-01-26 04:42 pm
Bangalore Correspondent
ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ...
09-01-26 02:05 pm
ಕನಕಪುರ ತಾಲೂಕಿನಲ್ಲಿ 63 ಅಕ್ರಮ ಲೇಔಟ್, 28 ಪಿಜಿಗಳ...
08-01-26 11:06 pm
ಪೊಲೀಸರ ಸಭೆ ನಡೆಸಲು ಡಿ.ಕೆ.ಶಿ. ಯಾರು? ರಾಜ್ಯದಲ್ಲಿ...
08-01-26 10:45 pm
ಸಿಎಂ ಕುರ್ಚಿ ಕದನಕ್ಕೆ ದಿಢೀರ್ ಬ್ರೇಕ್ ; ಡಿಕೆಶಿಗೆ...
08-01-26 09:36 pm
09-01-26 11:00 pm
HK News Desk
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
ಮಹಾರಾಷ್ಟ್ರ ನಗರಸಭೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ;...
08-01-26 03:12 pm
09-01-26 09:18 pm
Mangalore Correspondent
ಉದ್ಯೋಗ ಖಾತ್ರಿ ಯೋಜನೆಯನ್ನೇ ಮೋದಿ ಕೊಂದಾಕಿದ್ದಾರೆ,...
09-01-26 05:47 pm
ಪಿಎಂ ಕೇರ್ ಫಂಡ್ ಹೆಸರಲ್ಲಿ ಖಾಸಗಿ ಟ್ರಸ್ಟಿಗೆ ಸಾವಿರ...
09-01-26 03:21 pm
ಮಾನವ –ಪ್ರಾಣಿ ಸಂಘರ್ಷ ತಡೆಗೆ ಕಮಾಂಡ್ ಸೆಂಟರ್, 1926...
09-01-26 01:15 pm
ಜ.11 ರಂದು ಕೊಡಿಯಾಲದಲ್ಲಿ ಸುಧೀಂದ್ರ ತೀರ್ಥ ಜನ್ಮಶತಮ...
08-01-26 08:48 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm