ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತು ಜನ ಸಾವು, ಕೆಂಪುಕೋಟೆ ಬಳಿ ನಿಲ್ಲಿಸಿದ್ದ ಕಾರು ಬ್ಲಾಸ್ಟ್ ! ಭಯೋತ್ಪಾದಕ ಕೃತ್ಯ ಶಂಕೆ 

10-11-25 08:23 pm       HK News Desk   ದೇಶ - ವಿದೇಶ

ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಪ್ರಬಲ ಬಾಂಬ್ ಸ್ಫೋಟ ಆಗಿದ್ದು, ಸ್ಥಳದಲ್ಲಿದ್ದ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ. ಸೋಮವಾರ ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದೆ.

ನವದೆಹಲಿ, ನ.10 : ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಪ್ರಬಲ ಬಾಂಬ್ ಸ್ಫೋಟ ಆಗಿದ್ದು, ಸ್ಥಳದಲ್ಲಿದ್ದ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ. ಸೋಮವಾರ ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದೆ.

ಆಸುಪಾಸಿನಲ್ಲಿ ಜನ ಇದ್ದಾಗಲೇ ಹಠಾತ್ತಾಗಿ ಬ್ಲಾಸ್ಟ್ ಆಗಿದ್ದು ಸ್ಥಳದಲ್ಲಿ ದೊಡ್ಡ ಸದ್ದಿನೊಂದಿಗೆ ಭಾರೀ ಬೆಂಕಿ ಉಂಟಾಗಿದೆ. ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳ ಬಂದಿದ್ದು ಬೆಂಕಿ ನಂದಿಸಲು ಮುಂದಾಗಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಭಯೋತ್ಪಾದಕ ಕೃತ್ಯವೇ, ಹೇಗೆ ಸ್ಫೋಟ ಸಂಭವಿಸಿದೆ ಎನ್ನುವ ಮಾಹಿತಿ ಇಲ್ಲ. ಸ್ಥಳದಲ್ಲಿ ಏಳು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಪ್ರಬಲ ಸ್ಫೋಟ ಉಂಟಾಗಿದ್ದು, ಆಸುಪಾಸಿನಲ್ಲಿ ನಿಲ್ಲಿಸಿದ್ದ ಕಾರುಗಳ ಗ್ಲಾಸ್ ಒಡೆದು ನುಚ್ಚು ನೂರಾಗಿದೆ. ಕೆಂಪುಕೋಟೆಯ ಮೆಟ್ರೋ ಸ್ಟೇಶನ್ ಬಳಿಯ ಗೇಟ್ ನಂಬರ್ ಒಂದರಲ್ಲಿ ಬ್ಲಾಸ್ಟ್ ಸಂಭವಿಸಿದೆ.

ಕೆಲವು ಮಾಹಿತಿ ಪ್ರಕಾರ, ಎರಡು ಕಡೆ ಸ್ಫೋಟ ಸಂಭವಿಸಿದೆ ಎನ್ನಲಾಗುತ್ತಿದ್ದು ಹಲವರು ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಗ್ರರ ಕೃತ್ಯವೇ ಆಗಿರುವ ಸಾಧ್ಯತೆ ಇದೆ. ಸೋಮವಾರ ಬೆಳಗ್ಗೆ ಫರೀದಾಬಾದ್ ನಲ್ಲಿ ಭಾರೀ ಪ್ರಮಾಣದ ಆರ್ ಡಿಎಕ್ಸ್ ಸ್ಫೋಟಕಗಳನ್ನು ಪೊಲೀಸರು ಪತ್ತೆ ಮಾಡಿದ್ದರು. ಐಸಿಸ್ ಶಂಕಿತ ಉಗ್ರ ವೈದ್ಯನೊಬ್ಬನ ಮಾಹಿತಿ ಆಧರಿಸಿ ಸ್ಫೋಟಕಗಳನ್ನು ಪತ್ತೆ ಮಾಡಲಾಗಿತ್ತು.

A powerful explosion ripped through a car parked beside the road near Kempu Kote, close to the national capital, leaving nine people feared dead in an apparent terror strike on Monday evening around 6:30 pm.