ಬ್ರೇಕಿಂಗ್ ನ್ಯೂಸ್
30-11-25 03:37 pm HK News Desk ದೇಶ - ವಿದೇಶ
ನವದೆಹಲಿ, ನ.30: ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್ಚಾಟ್, ಶೇರ್ಚಾಟ್, ಜಿಯೋಚಾಟ್ ಮತ್ತು ಆರತಿಯಂತಹ ಸಂವಹನ ಆಧರಿತ ಮೊಬೈಲ್ ಅಪ್ಲಿಕೇಶನ್ಗಳಿಗೆ ಸಿಮ್ ಕಾರ್ಡ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಸಿಮ್ ಕಾರ್ಡ್ ಇದ್ದರೆ ಮಾತ್ರ ಅಪ್ಲಿಕೇಶನ್ ಸೇವೆಗಳನ್ನು ಸಕ್ರಿಯಗೊಳಿಸಬೇಕು ಎಂದು ದೂರಸಂಪರ್ಕ ಇಲಾಖೆ ಸೂಚನೆ ನೀಡಿದೆ.
ಹೊಸ ದೂರಸಂಪರ್ಕ ಸೈಬರ್ ಭದ್ರತಾ ತಿದ್ದುಪಡಿ ನಿಯಮಗಳು-2025ರ ಪ್ರಕಾರ, ಅಪ್ಲಿಕೇಶನ್ ಆಧರಿತ ಸಂವಹನ ಸೇವೆಗಳನ್ನು ಒದಗಿಸುವ ಕಂಪನಿಗಳಿಗೆ ಈ ಆದೇಶಗಳನ್ನು ನೀಡಲಾಗಿದೆ. ಎಲ್ಲ ರೀತಿಯ ಸಂವಹನ ಅಪ್ಲಿಕೇಶನ್ಗಳು ಈ ನಿಯಮಗಳನ್ನು 90 ದಿನಗಳಲ್ಲಿ ಜಾರಿಗೆ ತರುವಂತೆ ಆದೇಶ ಮಾಡಲಾಗಿದೆ.
ಹೊಸ ನಿಯಮಗಳಡಿ, ಈ ಅಪ್ಲಿಕೇಶನ್ಗಳನ್ನು ದೂರಸಂಪರ್ಕ ಗುರುತಿಸುವಿಕೆ ಬಳಕೆದಾರ ಘಟಕಗಳು ಎಂದು ವರ್ಗೀಕರಿಸಲಾಗಿದೆ. ವೆಬ್ ಬ್ರೌಸರ್ ಮೂಲಕ ಲಾಗಿನ್ ಆಗುವ ಬಳಕೆದಾರರು ಸಿಮ್ ಕಾರ್ಡ್ ಮೂಲಕವೇ ಅಪ್ಲಿಕೇಶನ್ ಸೌಲಭ್ಯ ಪಡೆಯುವಂತೆ ಸೂಚಿಸಲಾಗಿದೆ. ವೆಬ್ ಬ್ರೌಸರ್ನಲ್ಲಿ ಈ ಸೇವೆಗಳನ್ನು ಬಳಸುವವರು ಪ್ರತಿ 6 ಗಂಟೆಗಳಿಗೊಮ್ಮೆ ಪ್ಲಾಟ್ಫಾರ್ಮ್ನಿಂದ ಲಾಕ್ ಔಟ್ ಆಗಬೇಕಾಗುತ್ತದೆ. ಸೇವೆಗಳನ್ನು ಮರಳಿ ಪಡೆಯಲು, ಅವರು QR ಕೋಡ್ ಮೂಲಕ ಮಾತ್ರ ಲಾಗಿನ್ ಆಗಬೇಕಾಗುತ್ತದೆ. ಬಳಕೆದಾರರು ಫೋನ್ನಲ್ಲಿ ಅದೇ ಸಿಮ್ನೊಂದಿಗೆ ಖಾತೆಯನ್ನು ನೋಂದಾಯಿಸಿದ್ದರೆ ಮಾತ್ರ ಅಪ್ಲಿಕೇಶನ್ ಕಾರ್ಯ ನಿರ್ವಹಿಸುತ್ತದೆ. ಸಿಮ್ ತೆಗೆದರೂ ಅಥವಾ ಫೋನ್ ಬದಲಾಯಿಸಿದರೂ ಸಹ, ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತದೆ.
ಸಂವಹನ ಅಪ್ಲಿಕೇಶನ್ಗಳು ಯಾವಾಗಲೂ ಸಿಮ್ ಕಾರ್ಡ್ಗೆ ಲಿಂಕ್ ಆಗಿರುವುದನ್ನು ಮತ್ತು ದುರುಪಯೋಗವಾಗದಂತೆ ನೋಡಿಕೊಳ್ಳುವ ಗುರಿಯನ್ನು ಹೊಸ ಮಸೂದೆ ಹೊಂದಿದೆ. ಪ್ರಸ್ತುತ, ಅನೇಕ ಸೇವೆಗಳು ಆರಂಭದಲ್ಲಿ ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಮಾನದಂಡವಾಗಿ ತೆಗೆದುಕೊಳ್ಳುತ್ತವೆ. ಅದರ ನಂತರ, ಸಿಮ್ ಅನ್ನು ತೆಗೆದುಹಾಕಿದರೂ ಅಥವಾ ನಿಷ್ಕ್ರಿಯಗೊಳಿಸಿದರೂ ಸಹ ಅಪ್ಲಿಕೇಶನ್ ಸೇವೆಗಳು ಮುಂದುವರಿಯುತ್ತವೆ. ಇದರಂತೆ, ವಿದೇಶಗಳಲ್ಲಿರುವ ಸೈಬರ್ ಅಪರಾಧಿಗಳು ಸಿಮ್ ನಿಷ್ಕ್ರಿಯಗೊಳಿಸಿದ ನಂತರವೂ ಈ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದಾರೆ. ಸಿಮ್ ಬೈಂಡಿಂಗ್ ವಿಧಾನವು ವಂಚನೆಯ ಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ ಎಂದು ಸೈಬರ್ ತಜ್ಞರು ಹೇಳುತ್ತಾರೆ. ಭಯೋತ್ಪಾದಕ ಚಟುವಟಿಕೆ, ಸೈಬರ್ ವಂಚಕರು ಈ ರೀತಿಯ ಅಪ್ಲಿಕೇಶನ್ ಗಳನ್ನು ಅಕ್ರಮ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದು ಇದರ ನಿಯಂತ್ರಣಕ್ಕಾಗಿ ಹೊಸ ಕ್ರಮ ಜಾರಿಗೊಳಿಸಲಾಗಿದೆ.
The Central Government has issued a major directive making SIM cards mandatory for activating communication-based mobile applications such as WhatsApp, Telegram, Signal, Snapchat, ShareChat, JioChat, and similar platforms. The Department of Telecommunications (DoT) has instructed that these apps must function only when linked to an active SIM card.
24-10-26 05:35 pm
HK News Desk
Parvez dharwad: 40 ದಿನಗಳ ನಿಗೂಢತೆ ಅಂತ್ಯ ; ಡೆತ್...
24-10-26 12:22 pm
ಸ್ಟಿಂಗ್ ಆಪರೇಶನ್ ಹಿಂದಿರುವವರು ಯಾರೆಂಬ ಸತ್ಯ ಗೊತ್...
23-10-26 08:34 pm
ಮಾಧ್ಯಮದ ಮುಖ್ಯಸ್ಥನ ಜೊತೆಗಿದ್ದ ವಿಕ್ಕಿ ಎಂಬ ವ್ಯಕ್ತ...
23-10-26 05:47 pm
ಬ್ಲ್ಯಾಕ್ಮೇಲ್ ಉದ್ದೇಶದಿಂದ ಸ್ಟಿಂಗ್ ಮಾಡಿದ್ದಾರೆ...
23-10-26 03:56 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
24-10-26 10:59 pm
HK News Staffer
ಕದ್ರಿಯ 'ಕುಡ್ಪೀಸ್ ಫುಡ್ಸ್' ಬೇಕರಿ ಮಳಿಗೆಗೆ ಆಹಾರ...
24-10-26 10:54 pm
ಸ್ಟಿಂಗ್ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆ...
24-10-26 08:06 pm
ಪೊಳಲಿ ಕ್ಷೇತ್ರದಲ್ಲಿ ₹1.50 ಕೋಟಿ ವೆಚ್ಚದ ಗೋಶಾಲೆ ನ...
24-10-26 01:59 pm
Subbanna Pandit, Folk Academy Award: 45 ವರ್ಷಗ...
24-10-26 12:19 pm
24-10-26 10:21 pm
HK News Desk
ಸ್ಟಿಂಗ್ ಆಪರೇಶನ್ ; ಕೇರಳದಲ್ಲಿ ಸಂತ್ರಸ್ತ ಮಹಿಳೆಯ ಹ...
24-10-26 05:17 pm
ಉದ್ಯಮಿಗಳಿಗೆ ಕೊಲೆ ಬೆದರಿಕೆ ಪ್ರಕರಣ ; ಭೂಗತ ಪಾತಕಿ...
24-10-26 05:00 pm
Bantwal Crime: ದಾಂಪತ್ಯ ಕಲಹ ; ಹೆರಿಗೆ ತೆರಳಿದ್ದ...
24-10-26 12:51 pm
ಪುಲಿಕೇಶಿ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ ;...
23-10-26 05:48 pm