ಬ್ರೇಕಿಂಗ್ ನ್ಯೂಸ್
08-01-26 03:12 pm HK News Desk ದೇಶ - ವಿದೇಶ
ಮುಂಬೈ, ಜ.8 : ನಗರಸಭೆಯಲ್ಲಿ ಶಿವಸೇನೆ ಬಿಟ್ಟು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಪ್ರತಿನಿಧಿಗಳಿಗೆ ಸಂಚಕಾರ ಬಂದಿದೆ. ಅಂಬರ್ನಾಥ್ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕೌನ್ಸಿಲರ್ಗಳು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ 12 ಕಾಂಗ್ರೆಸ್ ಕೌನ್ಸಿಲರ್ ಗಳನ್ನು ಅಮಾನತು ಮಾಡಲಾಗಿದೆ.
ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಗಣೇಶ್ ಪಾಟೀಲ್ ಅವರು ಅಂಬರ್ನಾಥ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರದೀಪ್ ಪಾಟೀಲ್ ಅವರಿಗೆ ಪತ್ರ ಬರೆದು ಅಮಾನತು ಕ್ರಮದ ಬಗ್ಗೆ ತಿಳಿಸಿದ್ದಾರೆ. ಮೇಲಿನ ನಾಯಕರಿಗೆ ತಿಳಿಸದೆ ಮೈತ್ರಿ ಮಾಡಿರುವುದು ಸರಿಯಲ್ಲ. ರಾಜ್ಯಾಧ್ಯಕ್ಷ ಹರ್ಷವರ್ಧನ್ ಅವರ ಸೂಚನೆಯಂತೆ ನಿಮ್ಮನ್ನು ಪಕ್ಷದಿಂದ ಅಮಾನತು ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್ ತನ್ನದೇ ಆದ ಚಿಹ್ನೆಯ ಮೇಲೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಅಂಬರ್ನಾಥ್ ಪುರಸಭೆಯಲ್ಲಿ 12 ಸ್ಥಾನಗಳನ್ನು ಗೆದ್ದಿದೆ ಎಂದು ಪಾಟೀಲ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ನಾವು ಕಾಂಗ್ರೆಸ್ ಚಿಹ್ನೆಯ ಮೇಲೆ ಚುನಾವಣೆಗಳಲ್ಲಿ ಸ್ಪರ್ಧಿಸಿ 12 ಸ್ಥಾನಗಳನ್ನು ಗೆದ್ದಿದ್ದೇವೆ. ಆದರೆ, ರಾಜ್ಯ ನಾಯಕತ್ವ ಅಥವಾ ರಾಜ್ಯ ಕಚೇರಿಗೆ ತಿಳಿಸದೆ, ನೀವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೀರಿ. ಇದು ಪಕ್ಷದ ಮಟ್ಟಿಗೆ ಒಳ್ಳೆಯದಲ್ಲ. ರಾಜ್ಯ ಅಧ್ಯಕ್ಷರ ಸೂಚನೆಯಂತೆ, ನಿಮ್ಮನ್ನು ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಮೈತ್ರಿಯನ್ನು ತಿರಸ್ಕರಿಸಿದ್ದು, ಬಿಜೆಪಿಗರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Twelve Congress councillors have been suspended from the party for forming an alliance with the BJP in a municipal council, defying the party’s official position. The action follows political developments in the Ambernath Municipal Council, where the BJP formed an alliance with Congress councillors after sidelining the Shiv Sena.
08-01-26 11:06 pm
HK News Desk
ಪೊಲೀಸರ ಸಭೆ ನಡೆಸಲು ಡಿ.ಕೆ.ಶಿ. ಯಾರು? ರಾಜ್ಯದಲ್ಲಿ...
08-01-26 10:45 pm
ಸಿಎಂ ಕುರ್ಚಿ ಕದನಕ್ಕೆ ದಿಢೀರ್ ಬ್ರೇಕ್ ; ಡಿಕೆಶಿಗೆ...
08-01-26 09:36 pm
ಅತ್ತೆ ಕಿರುಕುಳ ಆರೋಪ ; ಸೊಸೆ ತನ್ನ ಇಬ್ಬರು ಮಕ್ಕಳೊಂ...
08-01-26 07:51 pm
ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಜೀವನದುದ್ದಕ್ಕೂ ಹೋರಾ...
08-01-26 02:10 pm
08-01-26 11:21 pm
HK News Desk
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
ಮಹಾರಾಷ್ಟ್ರ ನಗರಸಭೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ;...
08-01-26 03:12 pm
ಅಧಿಕಾರಕ್ಕಾಗಿ ಶಿವಸೇನೆ ಹೊರಗಿಟ್ಟು ಬಿಜೆಪಿ - ಕಾಂಗ್...
07-01-26 09:37 pm
ದೆಹಲಿಯಲ್ಲಿ ಹಿಂಸಾಚಾರ ; ಮಸೀದಿ ಆವರಣದಲ್ಲಿ ಅಕ್ರಮ ಕ...
07-01-26 04:47 pm
08-01-26 08:48 pm
Mangalore Correspondent
ಜ.10- 11ರಂದು ಮಂಗಳೂರು ಲಿಟ್ ಫೆಸ್ಟ್ ; ರಾಜ್ಯಸಭೆ ಸ...
08-01-26 08:09 pm
ಗಡಿನಾಡು ಕಾಸರಗೋಡಿನಲ್ಲಿ ಮಲಯಾಳ ಹೇರಿಕೆ ; ಕಡ್ಡಾಯ ಭ...
08-01-26 02:34 pm
ಸುಳ್ಯ ಶಾಸಕಿ ಭಾಗೀರಥಿ ಬಗ್ಗೆ ಅವಹೇಳನ ಪೋಸ್ಟ್ ; ಕಾಂ...
07-01-26 11:06 pm
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯಗೆ ನಿಂದಿಸಿ ಬರೆದು ಜ...
07-01-26 05:15 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm