ಬ್ರೇಕಿಂಗ್ ನ್ಯೂಸ್
18-05-26 02:18 pm HK News Staffer ದೇಶ - ವಿದೇಶ
ನವದೆಹಲಿ, ಮೇ 18: ಆಫ್ರಿಕಾದ ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಸಾಂಕ್ರಾಮಿಕ ರೋಗ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಓ) ಅಂತಾರಾಷ್ಟ್ರೀಯ ಮಟ್ಟದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಕಾಂಗೋದಲ್ಲಿ ಎಬೋಲಾ ಕಾಣಿಸಿಕೊಂಡಿರುವ ಇತುರಿ ಎಂಬಲ್ಲಿಯಿಂದ ಸುಮಾರು 1000 ಕಿ.ಮೀ. ದೂರದಲ್ಲಿರುವ ರಾಜಾಧಾನಿ ಕಿನ್ನಾಸಾದಲ್ಲಿಯೂ ಒಂದು ಪ್ರಕರಣ ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ಇತ್ತೀಚೆಗೆ ಇತುರಿ ಎಂಬಲ್ಲಿಗೆ ಭೇಟಿ ನೀಡಿದ್ದಾಗ ರೋಗ ಹರಡಿದೆ. ಇತುರಿ ಗಡಿಗೆ ಹೊಂದಿಕೊಂಡ ಉತ್ತರ ಕಿವು ಪ್ರಾಂತ್ಯದಲ್ಲಿಯೂ ಶಂಕಿತ ಪ್ರಕರಣಗಳು ವರದಿಯಾಗಿವೆ. ಒಂದು ತಿಂಗಳ ಅಂತರದಲ್ಲಿ ಕಾಂಗೋದಲ್ಲಿ 300ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ಕಂಡುಬಂದಿದ್ದು, 88ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆಫ್ರಿಕಾದಲ್ಲಿ ಸೋಂಕು ವ್ಯಾಪಕವಾಗಿ ಹರಡಿರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಎಬೋಲಾ ಸೋಂಕಿಗೆ ಕಾರಣವಾಗಿರುವ 'ಬುಂದಿಬುಗ್ಯೋ' ಎಂಬ ವೈರಸ್ ಅಪರೂಪದ ರೂಪಾಂತರವಾಗಿದ್ದು ಇದಕ್ಕೆ ಯಾವುದೇ ನಿಗದಿತ ಚಿಕಿತ್ಸೆ ಮತ್ತು ಲಸಿಕೆಗಳು ಇಲ್ಲ. ಕಾಂಗೋ ಮತ್ತು ಉಗಾಂಡಾಗಳಲ್ಲಿ ಈ ಹಿಂದೆ 20ಕ್ಕೂ ಹೆಚ್ಚು ಬಾರಿ ಎಬೋಲಾ ಉಲ್ಬಣಗೊಂಡಿದ್ದರೂ ಬುಂದಿಬುಗ್ಯೋ ಎನ್ನುವ ವಿಶೇಷ ಗುಣಲಕ್ಷಣದ ವೈರಸ್ ಪತ್ತೆಯಾಗುತ್ತಿರುವುದು ಇದು ಮೂರನೇ ಬಾರಿಯಾಗಿದೆ. 2007-08ರಲ್ಲಿ ಎಬೋಲಾ ಉಲ್ಬಣಗೊಂಡಿದ್ದ ಅವಧಿಯಲ್ಲಿ ಉಗಾಂಡಾದ ಬುಂದಿಬುಗ್ಯೋ ಜಿಲ್ಲೆಯಲ್ಲಿ ಈ ವೈರಸ್ ರೂಪಾಂತರ ಪತ್ತೆಯಾಗಿತ್ತು. ಆಗ ಅದು 149 ಜನರಿಗೆ ಸೋಂಕು ಉಂಟು ಮಾಡಿ 37 ಜನರನ್ನು ಬಲಿ ಪಡೆದಿತ್ತು. ಆ ಬಳಿಕ 2012 ರಲ್ಲಿ ಕಾಂಗೋದ ಇಸಿರೋದಲ್ಲಿ ಪತ್ತೆಯಾಗಿತ್ತು. ಆಗ 29 ಜನರು ಮೃತಪಟ್ಟಿದ್ದರು. ಮೊದಲು ವೈರಸ್ ಪತ್ತೆಯಾದ ಜಾಗದ ಹೆಸರನ್ನೇ ಈ ವೈರಸಿಗೂ ಇಡಲಾಗಿತ್ತು.
ಕಾಂಗೋದಲ್ಲಿ ಕಳೆದ ಏಪ್ರಿಲ್‌ನಲ್ಲಿ ಎಬೋಲಾ ಸೋಂಕು ವ್ಯಾಪಕವಾಗಿ ಕಂಡುಬಂದಿತ್ತು. ಏಪ್ರಿಲ್ 27ರಂದು 59 ವರ್ಷದ ವ್ಯಕ್ತಿಯೊಬ್ಬರು ಎಬೋಲಾದಿಂದ ಮೃತಪಟ್ಟಿದ್ದರು. ಆ ಬಳಿಕ ಎಬೋಲಾ ಸೋಂಕು ಹರಡುತ್ತಿರುವುದು ಪತ್ತೆಯಾಗುವಷ್ಟರಲ್ಲಿ 50 ಜನರು ಮೃತಪಟ್ಟಿದ್ದರು. ಎಬೋಲಾ ಗುಣಲಕ್ಷಣ ಹೊಂದಿದ್ದ ಕನಿಷ್ಠ 4 ಆರೋಗ್ಯ ಕಾರ್ಯಕರ್ತರೂ ಮೃತಪಟ್ಟಿದ್ದಾರೆ.
ಎಬೋಲಾ ಸೋಂಕು ಕೋವಿಡ್ -19ರಂತೆ ಜಾಗತಿಕ ಸಾಂಕ್ರಾಮಿಕ ವೈರಸ್ ಅಲ್ಲ. ನಿಜವಾದ ಸೋಂಕಿತರ ಸಂಖ್ಯೆ ಮತ್ತು ಸೋಂಕು ಹರಡಿರುವ ಭೂಪ್ರದೇಶದ ವ್ಯಾಪ್ತಿಯ ಕುರಿತು ಅನಿಶ್ಚಿತತೆ ಇದೆ. ಹಾಗಾಗಿ ಅಂತಾರಾಷ್ಟ್ರೀಯ ಪ್ರಯಾಣ ಅಥವಾ ಗಡಿ ನಿರ್ಬಂಧಗಳನ್ನು ಹೇರದಂತೆ ವಿಶ್ವಸಂಸ್ಥೆಯ ಪ್ರಧಾನ ನಿರ್ದೆಶಕ ಟೆಡ್ರೋಸ್ ಗೆಬ್ರಿಯೇಶನ್ ಸಲಹೆ ನೀಡಿದ್ದಾರೆ
ಎಬೋಲಾ ಹೇಗೆ ಹರಡುತ್ತದೆ?
ಎಬೋಲಾ ಅತ್ಯಂತ ಸಾಂಕ್ರಾಮಿಕ ವೈರಸ್ ಸೋಂಕು ಆಗಿದ್ದು, ಇದು ಸೋಂಕಿತರ ರಕ್ತ, ವಾಂತಿ, ವೀರ್ಯ, ಬೆವರು ಮತ್ತು ದೇಹದ ಇತರ ಸ್ರವಿಸುವಿಕೆಗಳ ಮೂಲಕ ಇನ್ನೊಬ್ಬರಿಗೆ ಹರಡುತ್ತದೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am