ಹಿಂಸೆ, ದ್ವೇಷ ಹರಡುವ ಫೇಸ್ಬುಕ್ ಹುದ್ದೆಯೇ ಬೇಡ ; ಅಶೋಕ್ ಚಂದ್ವಾನೆ

09-09-20 05:57 pm       Headline Karnataka News Network   ದೇಶ - ವಿದೇಶ

ಫೇಸ್ ಬುಕ್ ಒಂದು ಉತ್ತಮ ಉದ್ಯೋಗ ಸ್ಥಳವಾಗಿದ್ದರೂ ಸಮಯ ಕಳೆದಂತೆ ಸಂಸ್ಥೆಯ ನಾಯಕತ್ವ ಸಮಾಜಕ್ಕೆ ಒಳಿತು ಮಾಡುವುದಕ್ಕಿಂತ ಹೆಚ್ಚಾಗಿ ಲಾಭದತ್ತ ಗಮನ ಹರಿಸಿದೆ.

ನ್ಯೂಯಾರ್ಕ್, ಸೆಪ್ಟೆಂಬರ್ 9: ದ್ವೇಷವನ್ನು ಬಳಸಿ ಅಮೆರಿಕಾದಲ್ಲಿ ಮತ್ತು ಜಾಗತಿಕವಾಗಿ ಲಾಭಗಳಿಸುತ್ತಿರುವ ಸಂಸ್ಥೆಯೊಂದಕ್ಕಾಗಿ ಕೆಲಸ ಮಾಡುವುದು ಇನ್ನು ಸಾಧ್ಯವಿಲ್ಲದೇ ಇರುವುದರಿಂದ ಕೆಲಸ ತೊರೆಯುತ್ತಿದ್ದೇನೆ'' ಎಂದು ಫೇಸ್ ಬುಕ್ ನ ಸಾಪ್ಟ್‌ವೇರ್ ಇಂಜಿನಿಯರ್ ಅಶೋಕ್ ಚಂದ್ವಾನೆ ಸಂಸ್ಥೆಯ ಉದ್ಯೋಗಿಗಳ ಆಂತರಿಕ ನೆಟ್‍ ವರ್ಕ್‍ ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಈ 1,300 ಪದಗಳ ಪೋಸ್ಟ್ ನಲ್ಲಿ  ಸಿಯಾಟಲ್‍ ನಲ್ಲಿ ನೆಲೆ ನಿಂತಿರುವ 28 ವರ್ಷದ ಅಶೋಕ್ ಅವರು  ಫೇಸ್ ಬುಕ್ ಒಂದು ಉತ್ತಮ ಉದ್ಯೋಗ ಸ್ಥಳವಾಗಿದ್ದರೂ ಸಮಯ ಕಳೆದಂತೆ ಸಂಸ್ಥೆಯ ನಾಯಕತ್ವ  ಸಮಾಜಕ್ಕೆ ಒಳಿತು ಮಾಡುವುದಕ್ಕಿಂತ ಹೆಚ್ಚಾಗಿ ಲಾಭದತ್ತ ಗಮನ ಹರಿಸಿದೆ ಎಂದು ತಿಳಿದು ಬಂತು. ಫೇಸ್ ಬುಕ್ ವೇದಿಕೆಯನ್ನು ಬಳಸಿ ನಡೆಯುವ ಜನಾಂಗೀಯ ನಿಂದನೆ, ಸುಳ್ಳು ಸುದ್ದಿ ಹಾಗೂ ಹಿಂಸೆಗೆ ಪ್ರಚೋದನೆಯನ್ನು ತಡೆಯಲು ಸಂಸ್ಥೆ  ಹೆಚ್ಚೇನೂ ಮಾಡಿಲ್ಲ'' ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

“ಲೂಟಿ ಆರಂಭಗೊಂಡಾಗ ಶೂಟಿಂಗ್ ಆರಂಭಗೊಳ್ಳುತ್ತದೆ'' ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಅವರ ಪೋಸ್ಟ್ ತೆಗೆಯಲು ಫೇಸ್ ಬುಕ್ ನಿರಾಕರಿಸಿರುವುದನ್ನೂ ಅವರು ತಮ್ಮ ಪೋಸ್ಟ್  ನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ತಿಂಗಳು  ಕೆನೋಶಾದಲ್ಲಿ ನಡೆದ ಹಿಂಸೆಗೆ ಪೂರ್ವಭಾವಿಯಾಗಿ ತೀವ್ರಗಾಮಿ ಗುಂಪೊಂದು ಜನರಿಗೆ ಬಂದೂಕುಗಳನ್ನು ತರಲು ಉತ್ತೇಜಿಸಿ ಹಾಕಿದ್ದ ಪೋಸ್ಟ್ ಕೂಡ ಫೇಸ್ ಬುಕ್ ತೆಗೆದು ಹಾಕಲು ವಿಫಲವಾಗಿದ್ದು, ಹಾಗೂ  ಇದು ಕಳೆದ ತಿಂಗಳು ಗಂಭೀರ ಗುಂಡು ದಾಳಿ ಪ್ರಕರಣಕ್ಕೆ ಕಾರಣವಾಗಿದ್ದನ್ನೂ ಅಶೋಕ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

Join our WhatsApp group for latest news updates