ರಾಷ್ಟ್ರಪತಿ ಭವನದಲ್ಲಿ ಕರ್ತವ್ಯದಲ್ಲಿದ್ದ ಯೋಧ ಆತ್ಮಹತ್ಯೆಗೆ ಶರಣು

09-09-20 06:19 pm       Headline Karnataka News Network   ದೇಶ - ವಿದೇಶ

ರಾಷ್ಟ್ರಪತಿ ಭವನದಲ್ಲಿ ಕರ್ತವ್ಯದಲ್ಲಿದ್ದ ಯೋಧರೊಬ್ಬರು ರಾಷ್ಟ್ರಪತಿ ಭವನದ ಗೂರ್ಖಾ ರೈಫಲ್ಸ್‌ನ ಬ್ಯಾರಕ್‌ ಒಂದರಲ್ಲಿ ಸೀಲಿಂಗ್ ಫ್ಯಾನ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 09: ರಾಷ್ಟ್ರಪತಿ ಭವನದಲ್ಲಿ ಕರ್ತವ್ಯದಲ್ಲಿದ್ದ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.

ರಾಷ್ಟ್ರಪತಿ ಭವನದ ಗೂರ್ಖಾ ರೈಫಲ್ಸ್‌ನ ಬ್ಯಾರಕ್‌ ಒಂದರಲ್ಲಿ ಸೀಲಿಂಗ್ ಫ್ಯಾನ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ನೇಪಾಳದ ತಿಖಾಯನ್ ನಿವಾಸಿ ತೇಕ್ ಬಹದ್ದೂರ್ ಥಾಪಾ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ವಿಚಾರಣೆಯಲ್ಲಿ ಸೈನಿಕ ತೀವ್ರವಾದ ಬೆನ್ನುನೋವು ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂಬುದು ತಿಳಿದುಬಂದಿದೆ ಎಂದು ಪೋಲೀಸ್ ಅಧಿಕಾರಿ ವಿವರಿಸಿದ್ದಾರೆ.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸೌತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಈ ಘಟನೆ ವರದಿಯಾಗಿದೆ. ಗೂರ್ಖಾ ರೈಫಲ್ಸ್‌ನ ಬ್ಯಾರಕ್‌ನಲ್ಲಿ ಸೈನಿಕ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಅಪರಾಧ ಪರಿಶೀಲನೆ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖಾಮಗಳನ್ನು ಪ್ರಾರಂಭಿಸಿದೆ. ಬೆಳಗಿನ ಜಾವ 3: 30 ರ ಸುಮಾರಿಗೆ ತೇಕ್ ಬಹದ್ದೂರ್ ನೇಣು ಬಿಗಿದುಕೊಂಡಿದ್ದನ್ನು ಸಹೋದ್ಯೋಗಿಯೊಬ್ಬರು ನೋಡಿ ಉಳಿದ ತಮ್ಮ ಸಹೋದ್ಯೋಗಿಗಳಿಗೆ ಎಚ್ಚರಿಸಿದ್ದಾರೆ. ತಕ್ಷಣ ಅವನನ್ನು ದೆಹಲಿ ಕಂಟೋನ್ಮೆಂಟ್‌ನ ಬೇಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಅಲ್ಲಿನ ವೈದ್ಯರು ಆತ ಮೃತಪಟ್ಟಿದ್ದಾಗಿ ಹೇಳಿದ್ದರು.