ನೋಬೆಲ್‌ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೆಸರು ಶಿಫಾರಸು !

09-09-20 11:05 pm       Headline Karnataka News Network   ದೇಶ - ವಿದೇಶ

ಇಸ್ರೇಲ್​-ಯುಎಇ ನಡುವೆ ಶಾಂತಿ ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಟ್ರಂಪ್ ಪಾತ್ರ ಮಹತ್ವಪೂರ್ಣ ಆಗಿತ್ತು ಎಂದಿರುವ ನೋಬೆಲ್ ಆಯ್ಕೆ ಸಮಿತಿ, ಆ ಕಾರಣಕ್ಕಾಗಿ ನೋಬೆಲ್‌ ಶಾಂತಿ ಪುರಸ್ಕಾರಕ್ಕೆ ಡೊನಾಲ್ಡ್‌ ಟ್ರಂಪ್ ಹೆಸರನ್ನು ಆಯ್ಕೆ ಮಾಡುತ್ತಿರುವುದಾಗಿ ಹೇಳಿಕೊಂಡಿದೆ.

ಜೆರುಸಲೆಂ, ಸೆಪ್ಟೆಂಬರ್ 9: ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೈಟ್ಸ್ ನಡುವೆ ಒಪ್ಪಂದ ಏರ್ಪಡಲು ನಡೆಸಿದ ಪ್ರಯತ್ನಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮನಿರ್ದೇಶನ ಮಾಡಲಾಗಿದೆ.

ನಾರ್ವೆ ಸಂಸತ್‌ನ ಸದಸ್ಯ ಮತ್ತು ನ್ಯಾಟೋ ಸಂಸದೀಯ ಸಭೆಯ ಅಧ್ಯಕ್ಷ ಕ್ರಿಸ್ಟಿಯನ್ ಟೈಬ್ರಿಂಗ್-ಜೆಡ್ಡೆ ಈ ನಾಮನಿರ್ದೇಶನ ಸಲ್ಲಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಮ್ ಜಾಂಗ್ ಉನ್ ಅವರಿಗಾಗಿ ಸಿಂಗಪುರದಲ್ಲಿ ಆಯೋಜಿಸಿದ್ದ ಸಮಾವೇಶದ ಸಲುವಾಗಿ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವಂತೆ ಟೈಬ್ರಿಂಗ್ 2018ರಲ್ಲಿ ಕೂಡ ನಾಮನಿರ್ದೇಶನ ಸಲ್ಲಿಸಿದ್ದರು.

ಇತರೆ ನೊಬೆಲ್ ಶಾಂತಿ ಪುರಸ್ಕಾರ ನಾಮನಿರ್ದೇಶಿತ ವ್ಯಕ್ತಿಗಳಿಗಿಂತಲೂ ಹೆಚ್ಚು ದೇಶಗಳ ಮಧ್ಯೆ ಶಾಂತಿ ಸ್ಥಾಪಿಸುವ ಪ್ರಯತ್ನದಲ್ಲಿ ಡೊನಾಲ್ಡ್ ಟ್ರಂಪ್ ಕೆಲಸ ಮಾಡುವ ಮೂಲಕ ಅರ್ಹತೆ ಗಳಿಸಿದ್ದಾರೆ ಎಂದು ಟೈಬ್ರಿಂಗ್ ಹೇಳಿದ್ದಾರೆ. ಭಾರತ-ಪಾಕಿಸ್ತಾನ ನಡುವಿನ ಕಾಶ್ಮೀರ ಗಡಿ ವಿವಾದ, ಉತ್ತರ ಮತ್ತು ದಕ್ಷಿಣ ಕೊರಿಯಾ ಸಂಘರ್ಷದಂತಹ ದೇಶಗಳ ಮಧ್ಯೆ ಇರುವ ಸಂಘರ್ಷಗಳನ್ನು ಪರಿಹರಿಸಲು ಸಂಪರ್ಕ ಮೂಡಿಸುವ ಪ್ರಯತ್ನದಲ್ಲಿ ಡೊನಾಲ್ಡ್ ಟ್ರಂಪ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಇಸ್ರೇಲ್-ಯುಎಇ ಒಪ್ಪಂದವನ್ನು ಉಲ್ಲೇಖಿಸಿ ನೊಬೆಲ್ ಸಮಿತಿಗೆ ಪತ್ರ ಬರೆದಿದ್ದಾರೆ.

ಸಮಿತಿಯು ವಾಸ್ತವಗಳನ್ನು ಗಮನಿಸಬೇಕು ಮತ್ತು ವಾಸ್ತವಗಳ ಆಧಾರದಲ್ಲಿ ಅವರನ್ನು ನಿರ್ಧರಿಸಬೇಕೇ ಹೊರತು ಅವರ ವರ್ತನೆಯ ಆಧಾರದ ಮೇಲೆ ಅಲ್ಲ. ಇತ್ತೀಚಿನ ವರ್ಷಗಳಲ್ಲಿ ಶಾಂತಿ ಪುರಸ್ಕಾರಗಳನ್ನು ಪಡೆದಿರುವ ಜನರು ಡೊನಾಲ್ಡ್ ಟ್ರಂಪ್ ಅವರಿಗಿಂತಲೂ ಕಡಿಮೆ ಕೆಲಸ ಮಾಡಿದ್ದಾರೆ ಎಂದಿರುವ ಅವರು, ತಾವು ಡೊನಾಲ್ಡ್ ಟ್ರಂಪ್ ಅಭಿಮಾನಿಯಲ್ಲ ಎಂದು ತಿಳಿಸಿದ್ದಾರೆ. ಉದಾಹರಣೆಗೆ, ಬರಾಕ್ ಒಬಾಮಾ ಯಾವ ಕೆಲಸವನ್ನೂ ಮಾಡಿರಲಿಲ್ಲ ಎಂದು 2009ರಲ್ಲಿ ಅಮೆರಿಕಾ ಅಧ್ಯಕ್ಷರಾಗಿದ್ದಾಗ ನೊಬೆಲ್ ಶಾಂತಿ ಪುರಸ್ಕಾರ ಪಡೆದಿದ್ದ ಒಬಾಮಾ ಹೆಸರು ಪ್ರಸ್ತಾಪಿಸಿದ್ದಾರೆ. ಅಂತಾರಾಷ್ಟ್ರೀಯ ರಾಜತಾಂತ್ರಿಕತೆ ಮತ್ತು ಜನರ ನಡುವೆ ಸಹಕಾರ ಬಲಪಡಿಸುವಲ್ಲಿ ಬರಾಕ್ ಒಬಾಮಾ ಅಭೂತಪೂರ್ವ ಪ್ರಯತ್ನಗಳನ್ನು ನಡೆಸಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿತ್ತು.