ಇದೇ 13ರಂದು ದೇಶಾದ್ಯಂತ ನೀಟ್ ಪರೀಕ್ಷೆ ; ಮಾರ್ಗಸೂಚಿ ಬಿಡುಗಡೆ

11-09-20 11:12 am       Headline Karnataka News Network   ದೇಶ - ವಿದೇಶ

ನೀಟ್‌ ಪರೀಕ್ಷೆ ಮುಂದೂಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯವು ಪರೀಕ್ಷೆಗೆ ರೆಡಿಯಾಗಿದೆ.

ನವದೆಹಲಿ, ಸೆ.11: ನೀಟ್‌ ಪರೀಕ್ಷೆ ಮುಂದೂಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯವು ಪರೀಕ್ಷೆಗೆ ಸಂಬಂಧಿಸಿದ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇನ್ನೊಂದೆಡೆ, ಅ.4ರಂದು ನಡೆಯುವ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಂಬಂಧಿಸಿ ಯುಪಿಎಸ್‌ಸಿ ಕೂಡ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸೆ.13ರಂದು ಎಲ್ಲ ನಿಯಮಗಳ ಅನ್ವಯ ಸುರಕ್ಷಿತವಾಗಿ ನೀಟ್‌ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಯಾರಿಗಾದರೂ ಕೊರೊನಾ ಲಕ್ಷಣ ಕಂಡುಬಂದರೆ, ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಐಸೋಲೇಟ್‌ ಮಾಡಿ, ವೈದ್ಯರಿಗೆ ಮಾಹಿತಿ ನೀಡಬೇಕು. ಮಾಸ್ಕ್, ಶಾರೀರಿಕ ಅಂತರ ಕಾಪಾಡಿಕೊಳ್ಳುವಿಕೆ, ಸ್ಯಾನಿಟೈಸರ್‌ ಬಳಕೆ ಮತ್ತಿತರ ಕಡ್ಡಾಯ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.

ಮಾರ್ಗಸೂಚಿಗಳು: 

ಪರೀಕ್ಷಾ ಕೊಠಡಿಗಳು, ವಿದ್ಯಾರ್ಥಿಗಳನ್ನು ಕರೆದೊಯ್ಯಲು ಇರುವಂಥ ವಾಹನಗಳನ್ನೂ ಸ್ವಚ್ಛಗೊಳಿಸುತ್ತಿರಬೇಕು

ಪರೀಕ್ಷಾರ್ಥಿಗಳು ಮತ್ತು ಅಲ್ಲಿರುವ ಸಿಬ್ಬಂದಿ ತಮ್ಮ ಆರೋಗ್ಯದ ಕುರಿತ ಘೋಷಣಾ ಪತ್ರವನ್ನು ನೀಡಬೇಕು

ವೈಯಕ್ತಿಕ ವಸ್ತುಗಳು ಅಥವಾ ಸ್ಟೇಷನರಿಗಳನ್ನು ಪರಸ್ಪರ ಹಂಚಿಕೊಳ್ಳುವಂತಿಲ್ಲ

ಆನ್‌ಲೈನ್‌ ಪರೀಕ್ಷೆಯಾಗಿದ್ದರೆ, ಪರೀಕ್ಷೆ ಮುನ್ನ ಆಲ್ಕೋಹಾಲ್‌ ವೈಪ್ಸ್‌ ಮೂಲಕ ಕಂಪ್ಯೂಟರ್ ಗಳನ್ನು ಸ್ವಚ್ಛಗೊಳಿಸಬೇಕು

ಕಂಟೈನ್ಮೆಂಟ್‌ ವಲಯದ ಹೊರಗಿರುವ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರವೇ ಪರೀಕ್ಷೆ ನಡೆಸಬೇಕು. ಕಂಟೈನ್ಮೆಂಟ್‌ ವಲಯದಲ್ಲಿರುವ ಸಿಬ್ಬಂದಿ ಅಥವಾ ಪರೀಕ್ಷಾರ್ಥಿಗಳಿಗೆ ಪ್ರವೇಶವಿರುವುದಿಲ್ಲ. ಇವರಿಗೆ ಬೇರೆ ವಿಧಾನಗಳ ಮೂಲಕ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು.

Join our WhatsApp group for latest news updates