ಚಿಟ್ಟೆಗೂ ರಾಷ್ಟ್ರೀಯ ಸ್ಥಾನಮಾನ...!

11-09-20 01:18 pm       Headline Karnataka News Network   ದೇಶ - ವಿದೇಶ

ಹೂವಿನಿಂದ ಹೂವಿಗೆ ಹಾರುವ ಪಾತರಗಿತ್ತಿಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡಲು ಚಿಂತನೆ..!

ನವದೆಹಲಿ, ಸೆಪ್ಟೆಂಬರ್ 11: ಹೂವಿನಿಂದ ಹೂವಿಗೆ ಹಾರುತ್ತ ಮಕರಂದ ಹೀರುವ ಕಲರ್​ಫುಲ್​ ಚಿಟ್ಟೆಗಳನ್ನು ನೋಡಿ ಮನಸೋಲದವರಿಲ್ಲ. ಈ ಚಿಟ್ಟೆ ಅಥವಾ ಪಾತರಗಿತ್ತಿಯ ಲೋಕವೇ ವಿಸ್ಮಯ. ಈ ಚಿಟ್ಟೆಗಳಲ್ಲಿ 316 ಪ್ರಭೇದ ಗಳಿವೆ. ಸೆಪ್ಟೆಂಬರ್​ ತಿಂಗಳನ್ನು ಚಿಟ್ಟೆಗಳ ಮಾಸವೆಂದೇ ಕರೆಯಲಾಗುತ್ತದೆ. ಈಗ ಈ ಬಣ್ಣದ ಚಿಟ್ಟೆಗಳಿಗೂ ರಾಷ್ಟ್ರೀಯ ಸ್ಥಾನಮಾನ ನೀಡಲು ಕೇಂದ್ರ ಸರಕಾರ ಹೊರಟಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭವಾಗಿದೆ. 

ದೇಶದ ರಾಷ್ಟ್ರೀಯ ಪ್ರಾಣಿ ಹುಲಿ ಎಂದೂ, ನವಿಲನ್ನು ರಾಷ್ಟ್ರೀಯ ಪಕ್ಷಿಯೆಂದೂ, ಕಮಲವನ್ನು ರಾಷ್ಟ್ರೀಯ ಪುಷ್ಪವೆಂದೂ ಇದಾಗಲೇ ಗುರುತಿಸಲಾಗಿದೆ. ಅದರಂತೆಯೇ ಚಿಟ್ಟೆಗೂ ರಾಷ್ಟ್ರೀಯ ಸ್ಥಾನ ನೀಡಲು ಇದೀಗ ಕೇಂದ್ರ ಸರ್ಕಾರದಿಂದ ತಯಾರಿ ನಡೆದಿದ್ದು, ಸ್ಪರ್ಧೆಯಲ್ಲಿ ಏಳು ಚಿಟ್ಟೆಗಳು ಟಾಪ್​ ಸ್ಥಾನದಲ್ಲಿ ಇವೆ. ಇವುಗಳ ಪೈಕಿ ಅತ್ಯುತ್ತಮ ಪ್ರಭೇದವೊಂದನ್ನು ಆರಿಸಲು ಚಿಟ್ಟೆ ತಜ್ಱರ ನೇತೃತ್ವದ ತಂಡ ಚಾಲನೆ ನೀಡಿದೆ.

Join our WhatsApp group for latest news updates