ಬ್ರೇಕಿಂಗ್ ನ್ಯೂಸ್

Mangalore accident, UT khader, DFYI; ತೊಕ್ಕೊಟ್ಟಿನ ರಸ್ತೆ ಗುಂಡಿಗೆ ಮಹಿಳೆ ಬಲಿ ; ಸ್ಪೀಕರ್ ಖಾದರೆಂದು ಗ್ರಹಿಸಿ ಡಿವೈಎಫ್ ಐ ಕಾರ್ಯಕರ್ತರ ಎಡವಟ್ಟು, ಶಾಸಕರ ಮೇಲಿನ ಆಕ್ರೋಶದಿಂದ ಕೇಂದ್ರ ಸಚಿವರ ಕಾರಿಗೆ ಮುತ್ತಿಗೆ! ವಿದೇಶ ಸುತ್ತುವುದರಲ್ಲಿ ಮೋದಿ ನಂತರ ಖಾದರ್ ಎರಡನೇಯವರು     |    Mangalore Mulki Pakshikere Murder case, Crime: ಒಂದೇ ಕುಟುಂಬದ ಮೂವರ ದುರಂತ ಅಂತ್ಯ ಕಂಡು ಬೆಚ್ಚಿಬಿದ್ದ ಪಕ್ಷಿಕೆರೆ ; ಮನೆಯಲ್ಲೇ ಮಗು, ಸೊಸೆ ಸತ್ತು ಬಿದ್ದರೂ ತಿಳಿಯಲೇ ಇಲ್ಲ ವೃದ್ಧ ದಂಪತಿಗೆ, ಕೌಟುಂಬಿಕ ಮನಸ್ತಾಪಕ್ಕೆ ಸಾವಿನ ದಾರಿ ಹಿಡಿದನೇ ಮನೆಮಗ ?!    |    Mangalore Accident, Thokottu: ತೊಕ್ಕೊಟ್ಟಿನ ರಸ್ತೆ ಗುಂಡಿಗೆ ಮಹಿಳೆ ಬಲಿ ! ಸ್ಕೂಟರ್ ನಿಂದ ರಸ್ತೆಗೆಸೆಯಲ್ಪಟ್ಟ ಮಹಿಳೆ ಮೇಲೆ ಹರಿದ ಕಂಟೇನರ್, ಪತಿಯ ಎದುರಲ್ಲೇ ಪತ್ನಿ ದಾರುಣ ಸಾವು, ರೊಚ್ಚಿಗೆದ್ದ ಸ್ಥಳೀಯರು, ರಸ್ತೆ ತಡೆದು ಪ್ರತಿಭಟನೆ    |   

ಕಾಸರಗೋಡು-ಮಂಗಳೂರು ನಡುವೆ ಮತ್ತೆ ಬಸ್ ಸಂಚಾರ ಆರಂಭ!!

13-09-20 09:28 am       Headline Karnataka News Network   ದೇಶ - ವಿದೇಶ

ಬರೋಬ್ಬರಿ ಆರು ತಿಂಗಳ ಬಳಿಕ ಕಾಸರಗೋಡು ಹಾಗೂ ಮಂಗಳೂರು ಮಾರ್ಗದಲ್ಲಿ ಬಸ್‌ಗಳು ಓಡಾಡಲಿದ್ದು ಉಭಯ ರಾಜ್ಯಗಳ ಜನರ ಬಹುದಿನಗಳ ಬೇಡಿಕೆ ಈಡೇರಲಿದೆ

ಮಂಗಳೂರು, ಸೆಪ್ಟೆಂಬರ್.13: ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ದಕ್ಷಿಣ ಕನ್ನಡ ಹಾಗು ಕಾಸರಗೋಡು ಬಸ್ ಸಂಚಾರಕ್ಕೆ ಈಗ ಮತ್ತೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಳೆದ ಸುಮಾರು ಆರು ತಿಂಗಳ ಬಳಿಕ ಕಾಸರಗೋಡು - ಮಂಗಳೂರು ನಡುವೆ ಅಂತಾರಾಜ್ಯ ಬಸ್ ಸಂಚಾರವನ್ನು ಸೆ.21ರಿಂದ ಆರಂಭಿಸಲು ಕಾಸರಗೋಡು ಜಿಲ್ಲಾಡಳಿತ ನಿರ್ಧರಿಸಿದೆ. 

ಅಂತಾರಾಜ್ಯ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಎರಡೂ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಕೇರಳದಿಂದ ಮಂಗಳೂರಿಗೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ಕಾಸರಗೋಡು ಜಿಲ್ಲಾಡಳಿತ. ಆದರೆ ಇತ್ತ ಕರ್ನಾಟಕ ಕೆ ಎಸ್ ಆರ್ ಟಿ ಸಿ ಈ ಬಗ್ಗೆ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಇನ್ನೂ ಹತ್ತು ದಿನಗಳ ಕಾಲಾವಕಾಶ ಇರುವುದರಿಂದ ಸಂಚಾರಕ್ಕೆ ಅನುಮತಿ ಸಿಗುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮಂಗಳೂರಿನಿಂದ ಕಾಸರಗೋಡಿಗೆ ಬಸ್ ಸಂಚಾರ ಆರಂಭಿಸಲು ಇನ್ನೂ ಅನುಮತಿ ಸಿಕ್ಕಿಲ್ಲ. ಈ ಬಗ್ಗೆ ಸೋಮವಾರ ಮೇಲಧಿಕಾರಿಗಳ ಬಳಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಸೆ.21ರಂದು ಸಂಚಾರ ಆರಂಭಿಸಲಿರುವ ಕೇರಳ ಬಸ್‌ನಲ್ಲಿ ತಲಾ 40 ಪ್ರಯಾಣಿಕರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಸಿಗಲಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಈ ಬಸ್‌ಗಳು ಸಂಚರಿಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊದಲ ಹಂತದಲ್ಲಿ ಕಾಸರಗೋಡು - ಮಂಗಳೂರು, ಕಾಸರಗೋಡು - ಪಂಜಿಕಲ್ಲು ರೂಟ್‌ನಲ್ಲಿ ಮಾತ್ರವೇ ಬಸ್ ಸಂಚಾರ ನಡೆಸಲಿವೆ. ಬಸ್ ಸಂಚಾರದ ಆದೇಶ ಮತ್ತು ಮಾರ್ಗಸೂಚಿಯನ್ನು ಇನ್ನಷ್ಟೇ ಕೇರಳ ಸರಕಾರ ಬಿಡುಗಡೆಗೊಳಿಸಬೇಕಿದೆ.

ಲಾಕ್‌ಡೌನ್ ಅವಧಿಯಲ್ಲಿ ಉಭಯ ಜಿಲ್ಲೆಗಳು ತಮ್ಮ ಗಡಿಗಳನ್ನು ಬಂದ್‌ಗೊಳಿಸಿದ್ದವು. ಈ ನಡುವೆ ಎರಡೂ ಜಿಲ್ಲಾಡಳಿತಗಳ ನಡುವೆ ಸಂವಹನ ಕೊರತೆಯಿಂದ ಅನೇಕ ನಿರ್ಧಾರಗಳಲ್ಲಿ ವ್ಯತಿರಿಕ್ತತೆ ಕಂಡುಬಂದಿತ್ತು. ಇತ್ತೀಚೆಗೆ ನಾಲ್ಕು ಗಡಿ ರಸ್ತೆಗಳನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕ ಸಂಚಾರ ಸ್ವಲ್ಪ ಮಟ್ಟಿಗೆ ಮುಕ್ತವಾಗಿದೆ. ಆದರೆ ಕೆ ಎಸ್ ಆರ್ ಟಿ ಸಿ ಮಾತ್ರ ಸಂಚಾರ ಆರಂಭಿಸಿರಲಿಲ್ಲ