ಸಂಸದ ಅನಂತ ಕುಮಾರ್ ಹೆಗಡೆ ಸೇರಿ 25 ಸಂಸದರಿಗೆ ಕೋವಿಡ್ ; ಅಧಿವೇಶನಕ್ಕೆ ನಿರ್ಬಂಧ

14-09-20 05:05 pm       Headline Karnataka News Network   ದೇಶ - ವಿದೇಶ

ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಸಂಸದರನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ, ಮೀನಾಕ್ಷಿ ಲೇಖಿ ಸೇರಿ 17 ಮಂದಿ ಕೋವಿಡ್ ಪಾಸಿಟಿವ್ ಬಂದಿದೆ.

ನವದೆಹಲಿ, ಸೆಪ್ಟಂಬರ್ 14: ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಸಂಸದರನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ, ಮೀನಾಕ್ಷಿ ಲೇಖಿ ಸೇರಿ 25 ಮಂದಿ ಕೋವಿಡ್ ಪಾಸಿಟಿವ್ ಆಗಿದ್ದಾರೆ.

ಸೆಪ್ಟಂಬರ್ 13 ಮತ್ತು 14ರಂದು ಸಂಸದರನ್ನು ದೆಹಲಿಯ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ಎರಡು ದಿನಗಳ ಹಿಂದೆ ಶಿರಸಿಯಿಂದ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ದೆಹಲಿಗೆ ವಿಮಾನದಲ್ಲಿ ತೆರಳಿದ್ದ ಅನಂತ ಕುಮಾರ್ ಅವರನ್ನು ಇಂದು ಬೆಳಗ್ಗೆ ತಪಾಸಣೆಗೆ ಒಳಪಡಿಸಲಾಗಿತ್ತು. ಪಾಸಿಟಿವ್ ಆದರೂ ಯಾವುದೇ ರೋಗ ಲಕ್ಷಣಗಳಿಲ್ಲದ ಕಾರಣ ಅವರನ್ನು ಮನೆಯಲ್ಲೇ ಕ್ವಾರಂಟೈನ್ ಇರುವಂತೆ ಸೂಚಿಸಲಾಗಿದೆ. ಹೀಗಾಗಿ ಬಿಜೆಪಿಯ ಅನಂತ ಕುಮಾರ್, ಮೀನಾಕ್ಷಿ ಲೇಖಿ ಸೇರಿ 25 ಸಂಸದರು ಚಳಗಾಲದ ಅಧಿವೇಶನ ಎಂಟ್ರಿಗೆ ನಿರ್ಬಂಧಕ್ಕೊಳಗಾಗಿದ್ದಾರೆ. ಇಂದಿನಿಂದ ಅಧಿವೇಶನ ಆರಂಭಗೊಂಡಿದ್ದು, ಎಲ್ಲ ಸಂಸದರನ್ನೂ ಕೋವಿಡ್ ಟೆಸ್ಟ್ ಮಾಡುವುದು ಕಡ್ಡಾಯವಾಗಿತ್ತು.

ತಿಂಗಳ ಹಿಂದೆ ಶಿರಸಿಯಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ ಅನಂತ ಕುಮಾರ್, ಕೊರೊನಾ ಗಿರೋನಾ ಏನೂ ಇಲ್ಲ.. ಈ ಲಾಕ್ ಡೌನ್ ಎಲ್ಲ ಸುಮ್ನೇ ಎಂದಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಕೊರೊನಾ ಸೋಂಕು ಸಂಸದರಿಗೇ ತಗಲಿದ್ದು, ಚರ್ಚೆಗೆ ಗ್ರಾಸವಾಗಿದೆ.

Join our WhatsApp group for latest news updates