ಬ್ರೇಕಿಂಗ್ ನ್ಯೂಸ್

Mangalore accident, UT khader, DFYI; ತೊಕ್ಕೊಟ್ಟಿನ ರಸ್ತೆ ಗುಂಡಿಗೆ ಮಹಿಳೆ ಬಲಿ ; ಸ್ಪೀಕರ್ ಖಾದರೆಂದು ಗ್ರಹಿಸಿ ಡಿವೈಎಫ್ ಐ ಕಾರ್ಯಕರ್ತರ ಎಡವಟ್ಟು, ಶಾಸಕರ ಮೇಲಿನ ಆಕ್ರೋಶದಿಂದ ಕೇಂದ್ರ ಸಚಿವರ ಕಾರಿಗೆ ಮುತ್ತಿಗೆ! ವಿದೇಶ ಸುತ್ತುವುದರಲ್ಲಿ ಮೋದಿ ನಂತರ ಖಾದರ್ ಎರಡನೇಯವರು     |    Mangalore Mulki Pakshikere Murder case, Crime: ಒಂದೇ ಕುಟುಂಬದ ಮೂವರ ದುರಂತ ಅಂತ್ಯ ಕಂಡು ಬೆಚ್ಚಿಬಿದ್ದ ಪಕ್ಷಿಕೆರೆ ; ಮನೆಯಲ್ಲೇ ಮಗು, ಸೊಸೆ ಸತ್ತು ಬಿದ್ದರೂ ತಿಳಿಯಲೇ ಇಲ್ಲ ವೃದ್ಧ ದಂಪತಿಗೆ, ಕೌಟುಂಬಿಕ ಮನಸ್ತಾಪಕ್ಕೆ ಸಾವಿನ ದಾರಿ ಹಿಡಿದನೇ ಮನೆಮಗ ?!    |    Mangalore Accident, Thokottu: ತೊಕ್ಕೊಟ್ಟಿನ ರಸ್ತೆ ಗುಂಡಿಗೆ ಮಹಿಳೆ ಬಲಿ ! ಸ್ಕೂಟರ್ ನಿಂದ ರಸ್ತೆಗೆಸೆಯಲ್ಪಟ್ಟ ಮಹಿಳೆ ಮೇಲೆ ಹರಿದ ಕಂಟೇನರ್, ಪತಿಯ ಎದುರಲ್ಲೇ ಪತ್ನಿ ದಾರುಣ ಸಾವು, ರೊಚ್ಚಿಗೆದ್ದ ಸ್ಥಳೀಯರು, ರಸ್ತೆ ತಡೆದು ಪ್ರತಿಭಟನೆ    |   

ವಿಶ್ವದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಲ್ಲಿ ಭಾರತ 2ನೇ ಸ್ಥಾನ ; 24 ಗಂಟೆಯಲ್ಲಿ 83,809 ಮಂದಿಯಲ್ಲಿ ಸೋಂಕು

15-09-20 10:14 am       Headline Karnataka News Network   ದೇಶ - ವಿದೇಶ

ವಿಶ್ವದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಲ್ಲಿ ಭಾರತ 2ನೇ ಸ್ಥಾನದಲ್ಲಿದೆ. 6,749,289 ಸೋಂಕಿತರು ಇರುವ ಅಮೆರಿಕ ಮೊದಲ ಸ್ಥಾನದಲ್ಲಿದೆ.

ನವದೆಹಲಿ, ಸೆಪ್ಟೆಂಬರ್ 15: ಭಾರತದಲ್ಲಿ 24 ಗಂಟೆಯಲ್ಲಿ 83,809 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಇದರಿಂದಾಗಿ ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 49,30,237ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯಂತೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 9,90,061. ಇದುವರೆಗೂ ದೇಶದಲ್ಲಿ ಗುಣಮುಖರಾದವರು 38,59,400. ವಿಶ್ವದಲ್ಲಿ ಹೆಚ್ಚು ಸೋಂಕಿತರು ಇರುವ ದೇಶದಲ್ಲಿ ಭಾರತ 2ನೇ ಸ್ಥಾನದಲ್ಲಿದೆ.

ಕಳೆದ 24 ಗಂಟೆಯಲ್ಲಿ 1054 ಕೋವಿಡ್ ಸೋಂಕಿತರು ದೇಶದಲ್ಲಿ ಮೃತಪಟ್ಟಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 80,776ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ.

ಸೆಪ್ಟೆಂಬರ್ 14ರ ತನಕ ದೇಶದಲ್ಲಿ 5,83,12,273 ಕೋವಿಡ್ ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಸೋಮವಾರ 10,72,845 ಮಾದರಿಗಳ ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್ ಹೇಳಿದೆ.

ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 4,926,914ಕ್ಕೆ ಏರಿಕೆಯಾಗಿದೆ. ವಿಶ್ವದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಲ್ಲಿ ಭಾರತ 2ನೇ ಸ್ಥಾನದಲ್ಲಿದೆ. 6,749,289 ಸೋಂಕಿತರು ಇರುವ ಅಮೆರಿಕ ಮೊದಲ ಸ್ಥಾನದಲ್ಲಿದೆ. 4,349,544 ಸೋಂಕಿತರು ಇರುವ ಬ್ರೆಜಿಲ್ 3ನೇ ಸ್ಥಾನದಲ್ಲಿದೆ.

Join our WhatsApp group for latest news updates