ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ಮಾಯ ; ಆನ್ಲೈನ್ ಜೂಜಿಗೆ ದಂಡ !

18-09-20 04:16 pm       Headline Karnataka News Network   ದೇಶ - ವಿದೇಶ

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪೇಟಿಎಂ ಆ್ಯಪ್ ದಿಢೀರ್ ಆಗಿ ಮಾಯವಾಗಿದೆ. ಪ್ಲೇ ಸ್ಟೋರ್ ನಿಂದ ಪೇಟಿಎಂ ತೆಗೆದು ಹಾಕಿದ್ದರ ಬಗ್ಗೆ ಗೂಗಲ್ ಅಧಿಕೃತವಾಗಿ ಯಾವುದೇ ಕಾರಣ ಕೊಟ್ಟಿಲ್ಲ. 

ನವದೆಹಲಿ, ಸೆಪ್ಟಂಬರ್ 18: ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪೇಟಿಎಂ ಆ್ಯಪ್ ದಿಢೀರ್ ಆಗಿ ಮಾಯವಾಗಿದೆ. ಪ್ಲೇ ಸ್ಟೋರ್ ನಿಂದ ಪೇಟಿಎಂ ತೆಗೆದು ಹಾಕಿದ್ದರ ಬಗ್ಗೆ ಗೂಗಲ್ ಅಧಿಕೃತವಾಗಿ ಯಾವುದೇ ಕಾರಣ ಕೊಟ್ಟಿಲ್ಲ. 

ಪೇಟಿಎಂಗೆ ಭಾರತದಲ್ಲಿ ಲಕ್ಷಾಂತರ ಬಳಕೆದಾರರಿದ್ದಾರೆ. ಇದೀಗ ಆ್ಯಪ್ ಅನ್ನು ಗೂಗಲ್ ನಿಂದ ತೆಗೆದು ಹಾಕಿರುವುದು ಮುಂದೆ ನಿಷೇಧಕ್ಕೆ ಒಳಗಾಗಬಹುದೇ ಎನ್ನುವ ಅನುಮಾನ ಮೂಡಿದೆ. ಮೂಲಗಳ ಪ್ರಕಾರ, ಪೇಟಿಎಂ ಆ್ಯಪ್ ಆನ್ ಲೈನ್ ಜೂಜಿನ ಆಟಗಳಿಗೆ ಹೆಚ್ಚು ಬಳಕೆಯಾಗುತ್ತಿದೆ.‌ ಗೂಗಲ್ ನ ಗ್ಯಾಂಬ್ಲಿಂಗ್ ಪಾಲಿಸಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪೇಟಿಎಂ ಮೇಲೆ ತೂಗುಕತ್ತಿ ವಿಧಿಸಿದೆ ಎನ್ನಲಾಗ್ತಿದೆ. 

ಆದರೆ, ಪ್ಲೇ ಸ್ಟೋರ್ ನಲ್ಲಿ ಪೇಟಿಎಂ ಆಧರಿತ ಪೇಟಿಎಂ ಫೊರ್ ಬ್ಯುಸಿನೆಸ್, ಪೇಟಿಎಂ ಫೊರ್ ಮನಿ ಹಾಗು ಪೇಟಿಎಂಗೆ ಸಂಬಂಧಿಸಿದ ಇತರ ಆ್ಯಪ್ ಗಳು ಈಗಲೂ ಲಭ್ಯವಿದೆ. ಇನ್ನು ಆ್ಯಪಲ್ ಆ್ಯಪ್ ಸ್ಟೋರ್ ನಲ್ಲಿ ಸದ್ಯ ಪೇಟಿಎಂ ಲಭ್ಯವಿದೆ. 

ಗೂಗಲ್ ಬ್ಲಾಗ್ ಸ್ಪಾಟ್ ನಲ್ಲಿರುವ ಮಾಹಿತಿ ಪ್ರಕಾರ, ಯಾವುದೇ ಆ್ಯಪ್ ಗೂಗಲ್ ನೀತಿಗಳನ್ನು ಉಲ್ಲ‌ಂಘಿಸಿದರೆ ಡೆವಲಪರ್ ಗಳಿಗೆ ಮಾಹಿತಿ ನೀಡಿ, ಆ್ಯಪನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕುತ್ತೇವೆ. ಬಳಿಕ ನಿಯಮ ಅನುಸರಿಸಿಕೊಂಡಲ್ಲಿ ಗೂಗಲ್ ಸ್ಟೋರ್ ನಲ್ಲಿ ಸೇರಿಸಿಕೊಳ್ಳಲು ಅವಕಾಶ ಇರುತ್ತದೆ ಎಂದಿದೆ. ಆದರೆ ಈ ಹೇಳಿಕೆಯಲ್ಲಿ ಪೇಟಿಎಮ್ ಆ್ಯಪ್ ಬಗ್ಗೆ ಗೂಗಲ್ ಯಾವುದೇ ರೀತಿಯ ಉಲ್ಲೇಖ ಮಾಡಿಲ್ಲ. 

ಎರಡು ದಿನಗಳ ಹಿಂದಷ್ಟೇ ಭಾರತದ ಸಂಸತ್ತಿನಲ್ಲಿ ಆನ್ಲೈನ್ ಜೂಜುಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ ಕೇಳಿಬಂದಿತ್ತು. ಆನ್ಲೈನ್ ರಮ್ಮಿಯಂತಹ ಆಟಗಳನ್ನು ನಿಷೇಧಿಸುವಂತೆ ಸಂಸದರು ಒತ್ತಾಯಿಸಿದ್ದರು. ಈ ಜೂಜಾಟಗಳಿಗೆ ಪೇಟಿಎಂ ಬಳಕೆ ಆಗುತ್ತಿದ್ದ ಬಗ್ಗೆ ಮಾಹಿತಿಗಳಿದ್ದವು.

Join our WhatsApp group for latest news updates