ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; 9 ಅಲ್ ಖೈದಾ ಉಗ್ರರು ಬಂಧನ 

19-09-20 12:15 pm       Headline Karnataka News Network   ದೇಶ - ವಿದೇಶ

ರಾಷ್ಟ್ರೀಯ ತನಿಖಾ ದಳ ಏಕಕಾಲದಲ್ಲಿ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ದಾಳಿ ಸಂಘಟಿಸಿದ್ದು ಒಂಬತ್ತು ಮಂದಿ ಅಲ್ ಖೈದಾ ಉಗ್ರರನ್ನು ಬಂಧಿಸಿದ್ದಾರೆ. 

ನವದೆಹಲಿ, ಸೆಪ್ಟಂಬರ್ 19: ರಾಷ್ಟ್ರೀಯ ತನಿಖಾ ದಳ ಏಕಕಾಲದಲ್ಲಿ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ದಾಳಿ ಸಂಘಟಿಸಿದ್ದು ಒಂಬತ್ತು ಮಂದಿ ಅಲ್ ಖೈದಾ ಉಗ್ರರನ್ನು ಬಂಧಿಸಿದ್ದಾರೆ. 

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಮುರ್ಶಿದ್ ಹಸನ್, ಯಾಕುಬ್ ಬಿಸ್ವಾಸ್, ಮೊಸಾರಫ್ ಹುಸೇನ್ ಎರ್ನಾಕುಲಂ ಜಿಲ್ಲೆಯಲ್ಲಿ ಬಂಧಿತರು. ಇದೇ ವೇಳೆ, ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ. ನಜ್ಮುಸ್ ಸಾಕಿಬ್, ಅಬು ಸೂಫಿಯಾನ್, ಮೈನುಲ್ ಮೊಂಡಲ್, ಲೀ ಯೀನ್ ಅಹ್ಮದ್, ಅಲ್ ಮಮೂನ್ ಕಮಲ್, ಅತೀತುರ್ ರಹ್ಮಾನ್ ಬಂಧಿತರಾಗಿದ್ದು ಎಲ್ಲರೂ ಮುರ್ಶಿದಾಬಾದ್ ಜಿಲ್ಲೆಯ ನಿವಾಸಿಗಳು. 

ಅಲ್ ಖೈದಾ ಉಗ್ರರು ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಉಗ್ರರು ಸಂಚು ರೂಪಿಸಿದ್ದ ಖಚಿತ ಮಾಹಿತಿ ಆಧರಿಸಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಬಂಧಿತರಿಂದ ಅಪಾರ ಪ್ರಮಾಣದ ವಿಧ್ವಂಸಕ ಕೃತ್ಯಕ್ಕೆ ಬಳಸಲ್ಪಡುವ ಇಲೆಕ್ಟ್ರಾನಿಕ್ ಉಪಕರಣಗಳು, ಬಾಂಬ್ ತಯಾರಿಗೆ ಬಳಸುವ ಕಚ್ಚಾ ವಸ್ತುಗಳು, ಪಿಸ್ತೂಲ್, ಜಿಹಾದಿ ಸಾಹಿತ್ಯಗಳು, ಕಾಗದ ಪತ್ರಗಳು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ಬಂಧತರು ರಾಜಧಾನಿ ದೆಹಲಿ ಸೇರಿದಂತೆ ವಿವಿಧೆಡೆ ಗಲಭೆ ಎಬ್ಬಿಸುವುದು, ವಿಧ್ವಂಸಕ ಕೃತ್ಯ ನಡೆಸಲು ಸಂಚು ನಡೆಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಅದಕ್ಕಾಗಿ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಫಂಡ್ ರೈಸಿಂಗ್ ಕೂಡ ಮಾಡುತ್ತಾ ಬಂದಿದ್ದರು. ಇವರ ಪೈಕಿ ಕೆಲವರು ಕೆಲವೇ ದಿನಗಳಲ್ಲಿ ದೆಹಲಿಗೆ ತೆರಳಲು ರೆಡಿಯಾಗಿದ್ದರು. ಅದೇ ಸಂದರ್ಭದಲ್ಲಿ ಬಂಧ‌ನ ಆಗಿರುವುದರಿಂದ ದೊಡ್ಡ ಆಪತ್ತು ತಪ್ಪಿದೆ ಎಂದು ಎನ್ಐಎ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Join our WhatsApp group for latest news updates