ಬಿಗ್ ಬಿ ಅಮಿತಾಭ್ ಕೊರೊನಾ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ

02-08-20 12:04 pm       Headline Karnataka News Network   ದೇಶ - ವಿದೇಶ

ಬಿಗ್ ಬಿ ಅಮಿತಾಬ್ ಬಚ್ಚನ್ ಕೊರೊನಾ ಮುಕ್ತರಾಗಿದ್ದಾರೆ. ತಂದೆ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಆಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ನಟ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ. 

ಮುಂಬೈ, ಆಗಸ್ಟ್ 2: ಬಿಗ್ ಬಿ ಅಮಿತಾಬ್ ಬಚ್ಚನ್ ಕೊರೊನಾ ಮುಕ್ತರಾಗಿದ್ದಾರೆ. ತಂದೆ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಆಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ನಟ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ. 

ಆದರೆ ಕೊರೊನಾ ಸೋ‌ಂಕಿಗೆ ಒಳಗಾಗಿರುವ ಅಭಿಷೇಕ್ ಬಚ್ಚನ್ ಆಸ್ಪತ್ರೆಯಲ್ಲೇ ಮುಂದುವರಿದಿದ್ದಾರೆ. ಶೀಘ್ರದಲ್ಲೇ ತಾನು ಕೂಡ ಕೋವಿಡ್ ನೆಗೆಟಿವ್ ಆಗಿ ಬರಲಿದ್ದೇನೆ ಎಂದು ಅಭಿಷೇಕ್ ಹೇಳಿಕೊಂಡಿದ್ದಾರೆ. 

ಅಮಿತಾಭ್ ಮತ್ತು ಅಭಿಷೇಕ್ ಜುಲೈ 11ರಂದು ಕೋವಿಡ್ ಪಾಸಿಟಿವ್ ಆಗಿದ್ದರು. ಎರಡು ದಿನಗಳ ಬಳಿಕ ಸೋಂಕು ಆಗಿದ್ದ ಅಭಿಷೇಕ್ ಪತ್ನಿ ಐಶ್ವರ್ಯಾ ರೈ ಮತ್ತು ಮಗು ಆರಾಧ್ಯಾ ಜುಲೈ 17ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ತಾಯಿ ಮಗು ಒಂದೇ ವಾರದಲ್ಲಿ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಈ ನಡುವೆ, ಅಮಿತಾಭ್ ಪತ್ನಿ ಜಯಾ ಬಚ್ಚನ್ ಮನೆಯಲ್ಲೇ ಇದ್ದು ಕೋವಿಡ್ ನೆಗೆಟಿವ್ ಆಗಿದ್ದಾರೆ.